ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಯಾಫ್‌ ಕಪ್‌ ಫುಟ್ಬಾಲ್‌ ಚಾಂಪಿ​ಯ​ನ್‌​ಶಿ​ಪ್‌ ಪಂದ್ಯದಲ್ಲಿ ಕಿತ್ತಾಟ ನಡೆದಿದೆ. ಭಾರತ ಹಾಗೂ ಪಾಕಿಸ್ತಾನ ಆಟಗಾರರ ನಡುವೆ ಕೆಲ ಹೊತ್ತು ವಾಗ್ವಾದ, ತಳ್ಳಾಟ, ನೂಕಾಟ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು(ಜೂ.21); ಭಾರತ ಹಾಗೂ ಪಾಕಿಸ್ತಾನ ನಡುವಿನ ಸ್ಯಾಫ್‌ ಕಪ್‌ ಫುಟ್ಬಾಲ್‌ ಚಾಂಪಿ​ಯ​ನ್‌​ಶಿ​ಪ್‌ ಪಂದ್ಯ ಭಾರಿ ಸದ್ದು ಮಾಡಿದೆ. ಇಂಡೋ-ಪಾಕ್ ಪಂದ್ಯದ ಕಾರಣದಿಂದ ಹೈವೋಲ್ಟೇಜ್ ಪಂದ್ಯವಾಗಿ ಮಾರ್ಪಟ್ಟಿತ್ತು. ಇದರ ಜೊತೆಗೆ ಪಂದ್ಯದ ನಡುವೆ ವಾಗ್ವಾದ, ಜಗಳ, ನೂಕಾಟ ನಡೆದಿದೆ. ಪರಿಣಾ ಕೆಲ ಹೊತ್ತ ಪಂದ್ಯ ಸ್ಥಗಿತಗೊಂಡಿತು. ಮಧ್ಯಪ್ರವೇಶಿಸಿದ ರೆಫ್ರಿ, ಟೀಂ ಇಂಡಿಯಾ ಮ್ಯಾನೇಜರ್ ಸ್ಟಿಮ್ಯಾಕ್‌ಗೆ ರೆಡ್ ಕಾರ್ಡ್ ನೀಡಿದ್ದಾರೆ.

14ನೇ ಆವೃ​ತ್ತಿಯ ಸ್ಯಾಫ್‌ ಕಪ್‌ ಫುಟ್ಬಾಲ್‌ ಚಾಂಪಿ​ಯ​ನ್‌​ಶಿ​ಪ್‌ ಕ್ಷಣಕ್ಷಣಕ್ಕೂ ರೋಚಕತೆ ಹೆಚ್ಚಿಸಿತ್ತು. ಭಾರತ ಗೋಲುಗಳನ್ನು ಸಿಡಿಸಿ ಅಧಿಪತ್ಯ ಸಾಧಿಸಿತ್ತು. ಪಂದ್ಯದ ಫಸ್ಟ್ ಹಾಫ್‌ನಲ್ಲೇ ಉಭಯ ತಂಡದ ಆಟಾಗರರ ನಡುವೆ ಭಾರಿ ಪೈಪೋಟಿ ಎರ್ಪಟ್ಟಿತ್ತು. 44ನೇ ನಿಮಿಷದಲ್ಲಿ ಗೋಲು ಸಿಡಿಸುವ ಧಾವಂತದಲ್ಲಿ ಭಾರತ ಹಾಗೂ ಪಾಕಿಸ್ತಾ ಆಟಗಾರರು ಚೆಂಡು ನಿಯಂತ್ರಿಸಲು ಯತ್ನಿಸಿದರು. ಈ ವೇಳೆ ಚೆಂಡು ಕೋರ್ಟ್‌ನಿಂದ ಹೊರಬಿದ್ದಿತ್ತು.

Scroll to load tweet…

ಭಾರತೀಯ ಆಟಗಾರನ ತಪ್ಪಿನಿಂದ ಚೆಂಡು ಹೋರಹೋದ ಕಾರಣ ಪಾಕಿಸ್ತಾನದ ಅಬ್ದುಲ್ಲಾ ಇಕ್ಬಾಲ್ ಥ್ರೋ ಇನ್ ಮಾಡಲು ಮುಂದಾಗಿದ್ದಾರೆ. ಆದರೆ ಅಂಪೈರ್ ನಿರ್ಧಾರಕ್ಕೂ ಮುನ್ನವೇ ಅಬ್ದುಲ್ಲಾ ಥ್ರೋ ಇನ್ ಮಾಡಲು ಚೆಂಡು ಕೈಗೆತ್ತಿಕೊಂಡಿದ್ದಾರೆ. ಅಷ್ಟರಲ್ಲೇ ಹಿಂಭಾಗದಲ್ಲಿದ್ದ ಟೀಂ ಇಂಡಿಯಾ ಮ್ಯಾನೇಜರ್ ಸ್ಟಿಮ್ಯಾಕ್‌ ಪಾಕ್ ಆಟಗಾರನಿಂದ ಚೆಂಡು ಎಳೆದಿದ್ದಾರೆ. 

SAFF ಚಾಂಪಿಯನ್‌ಶಿಪ್ ಫುಟ್ಬಾಲ್, ಪಾಕಿಸ್ತಾನ ವಿರುದ್ಧ 4-0 ಅಂತರದಿಂದ ಭಾರತಕ್ಕೆ ಗೆಲುವು!

ಇದು ಪಾಕಿಸ್ತಾನ ತಂಡದ ಕೋಚ್ ಪಿತ್ತ ನೆತ್ತಿಗೇರಿಸಿದೆ. ಪಾಕ್ ಕೋಚ್ ಮೈದಾನಕ್ಕಿಳಿದು ಜಗಳ ಆರಂಭಿಸಿದ್ದಾರೆ. ಇತ್ತ ಭಾರತ ಫುಟ್ಬಾಲ್ ತಂಡದ ಆಟಗಾರರ ಜಮಾಯಿಸಿದರು. ಇದರಿಂದ ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ. ಇತ್ತ ಮಧ್ಯಪ್ರವೇಶಿಸಿದ ರೆಫ್ರಿ, ಭಾರತದ ಟೀಂ ಮ್ಯಾನೇಜರ್‌ಗೆ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಿದ್ದಾರೆ. ಪಾಕಿಸ್ತಾನ ತಂಡದ ಮ್ಯಾನೇಜರ್ ಶೆಹಜಾದ್ ಅನ್ವರ್‌ಗೆ ಯೆಲ್ಲೋ ಕಾರ್ಡ್ ನೀಡಿದರು.

ದಕ್ಷಿಣ ಏಷ್ಯಾ ಫುಟ್ಬಾಲ್‌ ಫೆಡ​ರೇ​ಶನ್‌(ಸ್ಯಾಫ್‌) ಆಯೋ​ಜಿ​ಸುವ ಟೂರ್ನಿಯು 2 ವರ್ಷ​ಗ​ಳಿ​ಗೊಮ್ಮೆ ನಡೆ​ಯ​ಲಿದೆ. 1993ರಲ್ಲಿ ಆರಂಭ​ಗೊಂಡ ಈ ಟೂರ್ನಿ​ಯ​ಲ್ಲಿ ದಕ್ಷಿಣ ಏಷ್ಯಾದ 7 ರಾಷ್ಟ್ರಗಳು ಭಾಗ​ವ​ಹಿ​ಸುತ್ತಾ ಬಂದಿವೆ. ಈ ವರ್ಷ ಜನ​ವ​ರಿ​ಯಲ್ಲಿ ಶ್ರೀಲಂಕಾಕ್ಕೆ ಫಿಫಾ ನಿಷೇಧ ಹೇರಿದ ಕಾರಣ, ಟೂರ್ನಿಯ ಗುಣ​ಮಟ್ಟಹಾಗೂ ಸ್ಪರ್ಧಿ​ಸುವ ತಂಡಗಳನ್ನು ಹೆಚ್ಚಿ​ಸುವ ಉದ್ದೇ​ಶ​ದಿಂದ ಲೆಬ​ನಾನ್‌ ಹಾಗೂ ಕುವೈಟ್‌ ತಂಡ​ಗ​ಳಿಗೆ ಆಹ್ವಾನ ನೀಡ​ಲಾ​ಯಿತು. ಭಾರತ ಹಾಗೂ ನೇಪಾಳ ಈ ವರೆ​ಗಿನ ಎಲ್ಲಾ 13 ಆವೃ​ತ್ತಿ​ಗ​ಳಲ್ಲಿ ಆಡಿದ್ದು, ಬಾಂಗ್ಲಾ 13ನೇ ಬಾರಿಗೆ ಕಣ​ಕ್ಕಿ​ಳಿ​ಯ​ಲಿದೆ. ಮಾಲ್ಡೀವ್‌್ಸ ಹಾಗೂ ಪಾಕಿ​ಸ್ತಾನ 12ನೇ ಬಾರಿಗೆ, ಭೂತಾನ್‌ 9ನೇ ಬಾರಿಗೆ ಸ್ಪರ್ಧಿ​ಸ​ಲಿವೆ..