ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಕ್ಕೆ ದೀಪಿಕಾ ಪಡುಕೋಣೆಯನ್ನೇ ಆಯ್ಕೆ ಮಾಡಿದ್ದೇಕೆ?
ಈ ಬಾರಿಯಾ ಫಿಫಾ ವಿಶ್ವಕಪ್ ಟೂರ್ನಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಭಾರತೀಯರು ಅನಾವರಣ ಮಾಡಿದ್ದಾರೆ. ಈ ಅವಕಾಶ ಪಠಾಣ್ ನಟಿ ದೀಪಿಕಾ ಪಡುಕೋಣೆಗೆ ಒಲಿದು ಬಂದಿತ್ತು. ಇದೀಗ ದೀಪಿಕಾಳನ್ನು ಟ್ರೋಫಿ ಅನಾವರಣಕ್ಕೆ ಯಾಕೆ ಆಯ್ಕೆ ಮಾಡಲಾಯಿತು ಅನ್ನೋ ಚರ್ಚೆಗಳು ಶುರುವಾಗಿದೆ. ಇದಕ್ಕೆ ಪ್ರಮುಖ ಕಾರಣವೂ ಇದೆ.
ಖತಾರ್(ಡಿ.19): ಫಿಫಾ ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್ ಮಣಿಸಿದ ಅರ್ಜೆಂಟೀನಾದ ಸಂಭ್ರಮಾಚರಣೆ ಮುಂದುವರಿದಿದೆ. ಟ್ರೋಫಿಗೆ ಮುತ್ತಿಕ್ಕಿದ ಲಿಯೋನಲ್ ಮೆಸ್ಸಿ ಪಡೆಗೆ ವಿಶ್ವ ಫುಟ್ಬಾಲ್ ಅಭಿಮಾನಿಗಳಿಂದ ಅಭಿನಂದನಗಳ ಸುರಿಮಳೆ ವ್ಯಕ್ತವಾಗುತ್ತಿದೆ. ಇತ್ತ ಅರ್ಜೆಂಟಿನಾ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ. ಇತ್ತ 2022ರ ಫಿಫಾ ವಿಶ್ವಕಪ್ ಟೂರ್ನಿ ಹಲವು ವಿಶೇಷತೆಗಳೊಂದಿಗೆ ಅಂತ್ಯವಾಗಿದೆ. ಇದರಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಭಾರತೀಯರು ಅನಾವರಣ ಮಾಡಿದ್ದರು. ಇದು ಫಿಫಾ ಇತಿಹಾಸದಲ್ಲೇ ಮೊದಲು. ಈ ಅವಕಾಶ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಒಲಿದು ಬಂದಿತ್ತು.
FIFA World cup ಫೈನಲ್ ಪಂದ್ಯಕ್ಕೂ ಮೊದಲು ಟ್ರೋಫಿ ಅನಾವರಣ ಮಾಡಲಾಗಿತ್ತು. ಪ್ರತಿಷ್ಠಿ ಟೂರ್ನಿಯ ಟ್ರೋಫಿಯನ್ನು ಪಠಾಣ್ ನಟಿ ದೀಪಿಕಾ ಪಡುಕೋಣೆ ಹಾಗೂ ಸ್ಪೇನ್ ಮಾಜಿ ಫುಟ್ಬಾಲ್ ಪಟು ಐಕರ್ ಕ್ಯಾಸಿಲ್ಲಾಸ್ ಫರ್ಡಾಂಡಿಸ್ ಅನಾವರಣ ಮಾಡಿದ್ದರು. ಇದೀಗ ಪ್ರತಿಷ್ಠಿ ಟ್ರೋಫಿಯನ್ನು ಅನಾವರಣ ಮಾಡುವ ಅವಕಾಶ ದೀಪಿಕಾ ಪಡುಕೋಣೆಗೆ ಸಿಕ್ಕಿದ್ದು ಹೇಗೆ ಅನ್ನೋ ಚರ್ಚೆ ಶುರುವಾಗಿದೆ.
FIFA World cup 25 ವರ್ಷದ ಇತಿಹಾಸದಲ್ಲಿ ಗೂಗಲ್‌ನಲ್ಲಿ ಹೊಸ ದಾಖಲೆ ಬರೆದ ಫೈನಲ್ ಪಂದ್ಯ!
ದೀಪಿಕಾ ಪಡುಕೋಣೆಗೆ ಈ ಆವಕಾಶ ಒಲಿದು ಬರಲು ಪ್ರಮುಖ ಕಾರಣ ಪ್ರತಿಷ್ಠಿತ ಬಟ್ಟೆ ಬ್ರ್ಯಾಂಡ್ ಲ್ಯೂಯಿಸ್ ವಿಟಾನ್. ಮೇ ತಿಂಗಳಲ್ಲಿ ದೀಪಿಕಾ ಪಡುಕೋಣೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ಲ್ಯೂಯಿಸ್ ವಿಟಾನ್ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಲೂಯಿಸ್ ವಿಟಾನ್ 2010ರಿಂದ ಫಿಫಾ ವಿಶ್ವಕಪ್ ಟೂರ್ನಿಯ ಸಹಭಾಗಿತ್ವ ಪಡೆದುಕೊಂಡಿದೆ. ದಶಕಗಳಿಂದ ಲ್ಯೂಯಿಸ್ ವಿಟಾನ್ ಫಿಫಾ ವಿಶ್ವಕಪ್ ಟೂರ್ನಿಯ ಜೊತೆಗಾರನಾಗಿದೆ. ಹೀಗಾಗಿ ಈ ಬಾರಿಯ ಟ್ರೋಫಿ ಅನಾವರಣ ಅವಕಾಶವನ್ನು ಲ್ಯೂಯಿಸ್ ವಿಟಾನ್‌ಗೆ ನೀಡಲಾಗಿತ್ತು. ಲ್ಯೂಯಿಸ್ ವಿಟಾನ್ ಬ್ರ್ಯಾಂಡ್ ಕಂಪನಿ ತನ್ನ ಅಂತಾರಾಷ್ಟ್ರೀಯ ರಾಯಭಾರಿ ದೀಪಿಕಾ ಪಡುಕೋಣೆಗೆ ಟ್ರೋಫಿ ಅನಾವರಣ ಮಾಡುವ ಅವಕಾಶ ನೀಡಿತ್ತು.
ಫೈನಲ್ ಪಂದ್ಯಕ್ಕೂ ಮುನ್ನ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣ ಪ್ರಮುಖ ಘಟ್ಟವಾಗಿದೆ. ಇದರ ಜೊತೆಗೆ ವರ್ಣರಂಜಿತ ಸಮಾರಂಭವೂ ನಡೆಯಲಿದೆ. ಇದು ಫಿಫಾ ವಿಶ್ವಕಪ್ ಟೂರ್ನಿಯ ಸಮಾರೋಪ ಸಮಾರಂಭವೂ ಹೌದು. ಈ ಟ್ರೋಫಿ 6 ಕೆಜಿ ತೂಕವಿದೆ. 18 ಕ್ಯಾರೆಟ್ ಚಿನ್ನ ಹಾಗೂ ಮೆಕಾಲಿಟ್ ಮೂಲಕ ಈ ಟ್ರೋಫಿ ನಿರ್ಮಿಸಲಾಗಿದೆ. ಈ ಟ್ರೋಫಿಯನ್ನು ಅರ್ಜೆಂಟೀನಾ ಕೈವಶ ಮಾಡಿದೆ. ಫ್ರಾನ್ಸ್ ಕೆಚ್ಚೆದೆಯ ಹೋರಾಟ ನೀಡಿ ಅಂತಿಮ ಕ್ಷಣದಲ್ಲಿ ಮುಗ್ಗರಿಸಿತು.
ಮೆಸ್ಸಿ 2022ರ ಫಿಫಾ ವಿಶ್ವಕಪ್ ಗೆದ್ದೇ ಗೆಲ್ತಾರೆ, ನಿಜವಾಯ್ತು 7 ವರ್ಷದ ಹಿಂದೆ ನುಡಿದ ಭವಿಷ್ಯವಾಣಿ..!
ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಕಿಕ್ಕಿರಿದು ತುಂಬಿದ್ದ ಲುಸೈಲ್ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರೋಪ ಸಮಾರಂಭ ನಡೆಯಿತು. ಕತಾರ್‌ನ ಸಾಂಸ್ಕೃತಿಕ ಪರಂಪರೆಯ ಪ್ರದರ್ಶನದೊಂದಿಗೆ ಆರಂಭಗೊಂಡ ಕಾರ‍್ಯಕ್ರಮದಲ್ಲಿ ಅಮೆರಿಕದ ಖ್ಯಾತ ಗಾಯಕ ಡೇವಿಡೋ ಜೊತೆ ಕತಾರ್‌ನ ಗಾಯಕಿ ಆಯಿಶಾ ಟೂರ್ನಿಯ ಥೀಮ್ ಸಾಂಗ್ ‘ಹಯ್ಯಾ ಹಯ್ಯಾ’ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆಂದು ನಿರೀಕ್ಷಿಸಲಾಗಿದ್ದ ಬಾಲಿವುಡ್ ತಾರೆ ನೋರಾ ಫತ್ಹೇಹಿ ಸಮಾರೋಪ ಕಾರ‍್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಫ್ರಾನ್ಸ್‌ನ ರಾರಯಪರ್ ಗಿಮ್ಸ್ ಸೇರಿದಂತೆ ಹಲವು ತಾರೆಯರು, ಜನಪ್ರಿಯ ಕಲಾವಿದರು ಪ್ರದರ್ಶನ ನೀಡಿದರು. 15 ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಮಹಿಳಾ ತಾರೆಯರ ಆಕರ್ಷಕ ನೃತ್ಯ ಎಲ್ಲರ ಗಮನ ಸೆಳೆಯಿತು. ಈ ವೇಳೆ ಕ್ರೀಡಾಂಗಣ ಮನಮೋಹಕ ಬೆಳಕಿನ ಚಿತ್ತಾರದಿಂದ ಕಂಗೊಳಿಸಿತು.