ಮೆಸ್ಸಿ 2022ರ ಫಿಫಾ ವಿಶ್ವಕಪ್ ಗೆದ್ದೇ ಗೆಲ್ತಾರೆ, ನಿಜವಾಯ್ತು 7 ವರ್ಷದ ಹಿಂದೆ ನುಡಿದ ಭವಿಷ್ಯವಾಣಿ..!
ನಿಜವಾಯ್ತು ಮೆಸ್ಸಿ ಕಪ್ ಗೆಲ್ಲುವ ಭವಿಷ್ಯವಾಣಿ
2022ರ ಫಿಫಾ ವಿಶ್ವಕಪ್ ಮೆಸ್ಸಿ ಗೆಲ್ತಾರೆ ಎಂದು ಭವಿಷ್ಯ ನುಡಿದಿದ್ದ ಜೋಸ್ ಮಿಗುಲ್ ಪೊಲಾಂಕೊ
ಫ್ರಾನ್ಸ್ ಎದುರು ರೋಚಕ ಜಯ ದಾಖಲಿಸಿದ ಅರ್ಜೆಂಟೀನಾ ಮಡಿಲಿಗೆ ಮೂರನೇ ಫಿಫಾ ವಿಶ್ವಕಪ್
ಬೆಂಗಳೂರು(ಡಿ.19): ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಅರ್ಜೆಂಟೀನಾ ತಂಡವು ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫುಟ್ಬಾಲ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ಎದುರು 4-2 ಅಂತರದ ಗೆಲುವು ಸಾಧಿಸುವ ಮೂಲಕ ಅರ್ಜೆಂಟೀನಾ ತಂಡವು ಗೆಲುವಿನ ಕೇಕೆ ಹಾಕಿದೆ. ಆದರೆ ಈ ಬಾರಿ ಅರ್ಜೆಂಟೀನಾ ತಂಡವೇ ಫಿಫಾ ಜಯಸಲಿದೆ ಎನ್ನುವುದನ್ನು 7 ವರ್ಷಗಳ ಹಿಂದೆಯೇ ಓರ್ವ ವ್ಯಕ್ತಿಗೆ ತಿಳಿದಿತ್ತು ಎಂದರೇ ನೀವು ನಂಬುತ್ತೀರಾ..? ಹೌದು, ಇದು ತೀರಾ ಅಚ್ಚರಿಯೆನಿಸಿದರೂ ಸತ್ಯವಾಗಿದೆ.
"ಡಿಸೆಂಬರ್ 18, 2022. 34 ವರ್ಷದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಗೆಲ್ಲಲಿದ್ದಾರೆ ಮತ್ತು ಅವರು ಸಾರ್ವಕಾಲಿನ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಲಿದ್ದಾರೆ. ಇಂದಿಗೆ 7 ವರ್ಷಗಳ ಬಳಿಕ ಈ ಮಾತನ್ನು ಪರೀಕ್ಷಿಸಿ ನೋಡಿ" ಎಂದು ಜೋಸ್ ಮಿಗುಲ್ ಪೊಲಾಂಕೊ ಎನ್ನುವ ವ್ಯಕ್ತಿಯು ಮಾರ್ಚ್ 21, 2015ರಲ್ಲಿ ಟ್ವೀಟ್ ಮಾಡಿ ಭವಿಷ್ಯ ನುಡಿದಿದ್ದರು.
ಮೆಸ್ಸಿ ಕಪ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ಸಂಚಾರಿ ಪ್ರೇಮಿಯ ಭವಿಷ್ಯ ನಿಜ..!
ಜೋಸ್ ಮಿಗುಲ್ ಪೊಲಾಂಕೊ ಎನ್ನುವ ಟ್ರಾವೆಲ್ಲರ್ ಲವರ್ 2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡವೇ ವಿಶ್ವಕಪ್ ಜಯಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಅವರು ಮಾರ್ಚ್ 21, 2015ರಲ್ಲಿ ಮಾಡಿದ್ದ ಆ ಟ್ವೀಟ್, ಫ್ರಾನ್ಸ್ ಎದುರು ಅರ್ಜೆಂಟೀನಾ ತಂಡವು ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೇ ದಿಢೀರ್ ಎನ್ನುವಂತೆ ವೈರಲ್ ಆಗಿದೆ. "ಡಿಸೆಂಬರ್ 18, 2022. 34 ವರ್ಷದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಗೆಲ್ಲಲಿದ್ದಾರೆ ಮತ್ತು ಅವರು ಸಾರ್ವಕಾಲಿನ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಲಿದ್ದಾರೆ. ಇಂದಿಗೆ 7 ವರ್ಷಗಳ ಬಳಿಕ ಈ ಮಾತನ್ನು ಪರೀಕ್ಷಿಸಿ ನೋಡಿ" ಎಂದು ಜೋಸ್ ಮಿಗುಲ್ ಪೊಲಾಂಕೊ ಎನ್ನುವ ವ್ಯಕ್ತಿಯು ಮಾರ್ಚ್ 21, 2015ರಲ್ಲಿ ಟ್ವೀಟ್ ಮಾಡಿ ಭವಿಷ್ಯ ನುಡಿದಿದ್ದರು.
FIFA World Cup ಸೂಪರ್ ಸಕ್ಸಸ್..! ಲಕ್ಷಾಂತರ ಕೋಟಿ ರುಪಾಯಿ ಖರ್ಚು ಮಾಡಿದ ಕತಾರ್‌ಗೇನು ಲಾಭ?
ಫೈನಲ್ ಪಂದ್ಯದ ದಿನಾಂಕವನ್ನೂ 7 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಜೋಸ್ ಮಿಗುಲ್ ಪೊಲಾಂಕೊ
ಇನ್ನೂ ಅಚ್ಚರಿಯ ಸಂಗತಿಯೆಂದರೇ, ಜೋಸ್ ಮಿಗುಲ್ ಪೊಲಾಂಕೊ 2022ರ ಫಿಫಾ ವಿಶ್ವಕಪ್ ಫೈನಲ್ ದಿನಾಂಕವನ್ನೂ 7 ವರ್ಷಗಳ ಹಿಂದೆಯೇ ನಿಖರವಾಗಿ ಭವಿಷ್ಯ ನುಡಿದಿದ್ದರು. ತಮ್ಮ ಭವಿಷ್ಯದ ಮೇಲೆ ಅವರಿಗೆ ಎಷ್ಟು ನಂಬಿಕೆ ಇತ್ತೆಂದರೇ, 7 ವರ್ಷಗಳ ಬಳಿಕ ಈ ಮಾತನ್ನು ಪರೀಕ್ಷಿಸಿ ಎಂದು ಸವಾಲೆಸೆದಿದ್ದರು. ಸಾಮಾನ್ಯವಾಗಿ ಫುಟ್ಬಾಲ್ ವಿಶ್ವಕಪ್ ಟೂರ್ನಿಯು ಸಾಮಾನ್ಯವಾಗಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಆಯೋಜಿಸಲಾಗುತ್ತದೆ. ಹೀಗಾಗಿ ಫಿಫಾ, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ವಿಶ್ವಕಪ್ ಟೂರ್ನಿ ಆಯೋಜಿಸಲು ಒಪ್ಪುವುದಿಲ್ಲ. ಆದರೆ ಈ ಬಾರಿ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಟೂರ್ನಿ ಜರುಗಿದೆ. ಇನ್ನು ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್, ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ ಮೂರು ಗೋಲುಗಳನ್ನು ತಡೆಹಿಡಿಯುವ ಮೂಲಕ ಅರ್ಜೆಂಟೀನಾ ತಂಡವು ಬರೋಬ್ಬರಿ 36 ವರ್ಷಗಳ ಬಳಿಕ ಮೂರನೇ ಬಾರಿಗೆ ಫಿಫಾ ವಿಶ್ವಕಪ್‌ಗೆ ಮುತ್ತಿಕ್ಕುವಲ್ಲಿ ಗೋಲ್ ಕೀಪರ್ ಕೂಡಾ ಮಹತ್ತರ ಪಾತ್ರ ವಹಿಸಿದ್ದರು.