U 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಲೋಗೋ ಬಿಡುಗಡೆ
ಅಂಡರ್ 17 ಮಹಿಳಾ ಫಿಫಾ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು ಸಮ್ಮುಖದಲ್ಲಿ ವಿಶ್ವಕಪ್ ಲೋಗೋ ಬಿಡುಗಡೆಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ(ನ.04): 2020ರ ಫಿಫಾ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಅಧಿಕೃತ ಲೋಗೋ ಶನಿವಾರ ಅನಾವರಣಗೊಂಡಿತು. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಕ್ರಿಕೆಟಿಗ ಅಜಿಂಕ್ಯ ರಹಾನೆ ಹಾಗೂ ಅಂಡರ್ 17 ಭಾರತ ಮಹಿಳಾ ಫುಟ್ಬಾಲ್ ತಂಡದ ನಾಯಕಿ ಸಿಲ್ಕಿ ದೇವಿ ಉಪಸ್ಥಿತರಿದ್ದರು.
ವಿಶ್ವಕಪ್ ಅರ್ಹತಾ ಪಂದ್ಯ; ಡ್ರಾಗೆ ತೃಪ್ತಿಪಟ್ಟ ಭಾರತ!
ಲೋಗೋ ಮೇಲ್ಭಾಗದ ವಿನ್ಯಾಸ ಜೀವನ, ಬೆಳವಣಿಗೆ ಪ್ರತಿನಿಧಿಸುತ್ತದೆ. ಕೆಳಭಾಗದಲ್ಲಿ ದೇಶದ ಶ್ರೀಮಂತ ಜಲ ಸಂಪನ್ಮೂಲ ಪ್ರದರ್ಶಿಸಲಾಗಿದೆ. ಚೆಂಡು ಹೂವಿನಂತಿರುವ ಫುಟ್ಬಾಲ್, ಆಟಗಾರ್ತಿಯರ ವೃತ್ತಿಜೀವನದ ಬೆಳವಣಿಗೆ ತೋರಿಸುತ್ತದೆ. ಬಲಬದಿಯ 5 ವೃತ್ತಗಳು ಆತಿಥ್ಯ ವಹಿಸುವ 5 ನಗರಗಳನ್ನು ಸೂಚಿಸುತ್ತದೆ.
ಲಿಯೋನೆಲ್ ಮೆಸ್ಸಿಗೆ ಒಲಿದ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿ
ಫಿಫಾ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಅಧಿಕೃತ ಲೋಗೋ ಅನಾವರಣಗೊಳಿಸಿ ಮಾತನಾಡಿದ ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು. ಇಂತಹ ಕ್ರೀಡಾಕೂಟಗಳು ದೇಶದಲ್ಲಿ ನಡೆದಾಗ ಮಾತ್ರ ಜನರಲ್ಲಿ ಇನ್ನಷ್ಟು ಆಸಕ್ತಿ, ಅರಿವು ಮೂಡಲು ಸಾಧ್ಯ. ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಸುಲಭವಾಗಿ ಫುಟ್ಬಾಲ್’ನಂತಹ ಕ್ರೀಡೆಯನ್ನಾಡುವಂತಹ ವಾತಾವರಣ ಸೃಷ್ಟಿಸಲಾಗುವುದು ಎಂದು ಹೇಳಿದ್ದಾರೆ.
ಮಹಿಳಾ ಫಿಫಾ ವಿಶ್ವಕಪ್‌ಗೆ ಭಾರತ ಆತಿಥ್ಯ: 5 ನಗರಗಳಿಗೆ ಫಿಫಾ ನಿಯೋಗ ಭೇಟಿ
ಮಹಿಳಾ ವಿಶ್ವಕಪ್ ಟೂರ್ನಿಗೆ ಭುವನೇಶ್ವರ ಸೇರಿದಂತೆ ಕೋಲ್ಕತಾ, ನವಿ ಮುಂಬೈ, ಗೋವಾ ಹಾಗೂ ಅಹಮದಾಬಾದ್ ನಗರಗಳಲ್ಲಿ ಪಂದ್ಯಾಟಗಳು ನಡೆಯಲಿವೆ.