ಇಫೋ(ಮಲೇಷ್ಯಾ)ಅ.16: ಕೊನೆ ಕ್ಷಣದಲ್ಲಿ ಗೋಲು ಬಿಟ್ಟುಕೊಡುವ ಭಾರತ ಹಾಕಿ ತಂಡದ ಸಮಸ್ಯೆ ಮುಂದುವರಿದಿದೆ. ಭಾನುವಾರ ಅಜ್ಲಾನ್‌ ಶಾ ಹಾಕಿ ಟೂರ್ನಿಯ ಕೊರಿಯಾ ವಿರುದ್ಧದ ಪಂದ್ಯದಲ್ಲೂ ಭಾರತ ಮತ್ತದೇ ತಪ್ಪು ಮಾಡಿದೆ. ಪಂದ್ಯ ಮುಕ್ತಾಯಕ್ಕೆ 22 ಸೆಕೆಂಡ್‌ ಬಾಕಿ ಇದ್ದಾಗ ಪೆನಾಲ್ಟಿಕಾರ್ನರ್‌ ಮೂಲಕ ಗೋಲು ಹೊಡೆದ ಕೊರಿಯಾ 1-1 ಗೋಲಿನಲ್ಲಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: ಫಿಟ್ನೆ​ಸ್‌ಗಾಗಿ ಕೊಹ್ಲಿ ಹಿಂಬಾಲಿಸಿದ ಚೆಟ್ರಿ!

ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ ಜಯಿಸಿದ್ದ ಭಾರತಕ್ಕೆ, ಭಾನುವಾರ ಪ್ರಬಲ ಪೈಪೋಟಿ ಎದುರಾಯಿತು. ಮೊದಲ ಕ್ವಾರ್ಟರ್‌ ಗೋಲು ರಹಿತ ಮುಕ್ತಾಯ ಕಂಡ ಬಳಿಕ, 28ನೇ ನಿಮಿಷದಲ್ಲಿ ಮನ್‌ದೀಪ್‌ ಸಿಂಗ್‌ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು.

ಇದನ್ನೂ ಓದಿ: ಭಾರತ ಫುಟ್ಬಾಲ್‌ ತಂಡದಲ್ಲಿ  ಕನ್ನಡಿಗ ನಿಖಿಲ್‌ಗೆ ಸ್ಥಾನ

 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸುವ ಉತ್ಸಾಹದಲ್ಲಿದ್ದ ಭಾರತಕ್ಕೆ 60ನೇ ನಿಮಿಷದಲ್ಲಿ ಜಾಂಗ್‌ಹ್ಯುನ್‌ ಜಾಂಗ್‌ ಆಘಾತ ನೀಡಿದರು. ಇದಕ್ಕೂ ಮುನ್ನ 6 ಪೆನಾಲ್ಟಿಕಾರ್ನರ್‌ಗಳನ್ನು ತಡೆದಿದ್ದ ಭಾರತ, ಕೊನೆಯಲ್ಲಿ ಗೋಲು ಬಿಟ್ಟು ಗೆಲುವನ್ನು ಕೈಚೆಲ್ಲಿತ್ತು.