Asianet Suvarna News Asianet Suvarna News

'25 ಬೆಡ್‌ ರೂಮ್‌ನ ಬಂಗಲೆ, ವಾರ್ಷಿಕ 903 ಕೋಟಿ ವೇತನ..' ಸೌದಿ ಕ್ಲಬ್‌ಗೆ ಸೇರಿದ ನೇಮರ್‌ಗೆ ಸಿಗೋ ಸೌಲಭ್ಯಗಳ ಲಿಸ್ಟ್‌..!

ಬ್ರೆಜಿಲ್‌ ಸ್ಟಾರ್‌ ಫುಟ್‌ಬಾಲ್‌ ಆಟಗಾರ ನೇಮರ್‌ ಜೂನಿಯರ್‌ ಫ್ರಾನ್ಸ್‌ನ ಪ್ಯಾರೀಸ್‌ ಸೇಂಟ್‌ ಜರ್ಮೈನ್‌ ಕ್ಲಬ್‌ ಜೊತೆಗಿನ ಸಂಬಂಧವನ್ನು ಅಂತ್ಯ ಮಾಡಿದ್ದು, ಸೌದಿ ಅರೇಬಿಯಾದ ಅಲ್‌ ಹಿಲಾಲ್‌ ಕ್ಲಬ್‌ ಸೇರಿಕೊಂಡಿದ್ದಾರೆ. ವಾರ್ಷಿಕವಾಗಿ ದಾಖಲೆಯ ವೇತನ ಪಡೆಯುವುದರೊಂದಿಗೆ 11ಕ್ಕೂ ಅಧಿಕ ವಿಶೇಷ ಸವಲತ್ತುಗಳನ್ನು ಅವರು ಪಡೆಯಲಿದ್ದಾರೆ.

Neymar Will Get these In Saudi Arabia Club Al Hilal after finally ended his Paris Saint Germain stint san
Author
First Published Aug 17, 2023, 4:31 PM IST

ನವದೆಹಲಿ (ಆ.17): ಖ್ಯಾತ ಫುಟ್‌ಬಾಲ್‌ ಆಟಗಾರ 2017ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ ಸೇಂಟ್‌ ಜರ್ಮೈನ್‌ ಕ್ಲಬ್‌ಗೆ ಸೇರ್ಪಡೆಗೊಂಡಿದ್ದರು. ಕ್ಲಬ್‌ ಪರ 112 ಪಂದ್ಯಗಳನ್ನಾಗಿ 82 ಗೋಲು ಬಾರಿಸಿದ ನೇಮರ್‌ ಒಂದು ದಿನ ಕೂಡ ಈ ಕ್ಲಬ್‌ನಲ್ಲಿ ನೆಮ್ಮದಿಯಿಂದ ಇದ್ದಿರಲಿಲ್ಲ. ಕೊನೆಗೂ ಈ ಕ್ಲಬ್‌ ಜೊತೆಗಿನ ತನ್ನ ಒಪ್ಪಂದವನ್ನು ನೇಮರ್‌ ಮುಕ್ತಾಯ ಮಾಡಿದ್ದು, ದಾಖಲೆಯ ಹಣದಲ್ಲಿ ಸೌದಿ ಅರೇಬಿಯಾದ ಅಲ್‌ ಹಿಲಾಲ್‌ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಬ್ರೆಜಿಲ್‌ ಫಾರ್ವರ್ಡ್‌ ಆಟಗಾರ ಸೌದಿ ಪ್ರೋ ಲೀಗ್‌ನಲ್ಲಿ ಆಡುವ ಕ್ಲಬ್‌ ಪರವಾಗಿ ಎರಡು ವರ್ಷ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪ್ರತಿ ವರ್ಷ ಇವರು ಪಡೆದುಕೊಳ್ಳುವ ವೇತನ 100 ಮಿಲಿಯನ್‌ ಪೌಂಡ್‌ ಅಂದರೆ ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 903 ಕೋಟಿ ರೂಪಾಯಿಗಳು..! ಒಟ್ಟಾರೆ ಎರಡು ವರ್ಷಗಳ ಅವಧಿಯಲ್ಲಿ ಬ್ರೆಜಿಲ್‌ನ ಫಾರ್ವರ್ಡ್‌ ಆಟಗಾರನಿಗೆ ನೀಡುವ ಎಲ್ಲಾ ಬಗೆಯ ಸೌಲಭ್ಯ ಹಾಗೂ ವೇತನಕ್ಕಾಗಿ ಸೌದಿ ಅರೇಬಿಯಾದ ಅಲ್‌ ಹಿಲಾಲ್‌ ಕ್ಲಬ್‌ 320 ಮಿಲಿಯನ್‌ ಪೌಂಡ್‌ ಖರ್ಚು ಮಾಡಲಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 2893 ಕೋಟಿ ರೂಪಾಯಿ..!

ಬಹುಕೋಟಿ ಮೊತ್ತಕ್ಕೆ ನೇಮರ್‌ ಅಲ್‌ ಹಿಲಾಲ್‌ ಕ್ಲಬ್‌ ಸೇರಿಕೊಂಡಿದ್ದಾರೆ. ಆದರೆ, ನಿಮಗೆ ನೆನಪಿರಲಿ ಕಳೆದ ವರ್ಷದ ಫುಟ್‌ಬಾಲ್‌ ಋತುವಿನಲ್ಲಿ ನೇಮರ್‌ ಅತ್ಯಂತ ಕೆಟ್ಟ  ನಿರ್ವಹಣೆ ತೋರಿದ್ದರು. ಹಾಗಿದ್ದರೂ, ಅವರು ವಿಶ್ವದಲ್ಲಿಯೇ ಗರಿಷ್ಠ ವೇತನ ಪಡೆದುಕೊಳ್ಳುವ ಫುಟ್‌ಬಾಲ್‌ ತಾರೆ ಎನಿಸಿದ್ದಾರೆ. ಅಲ್‌ ಹಿಲಾಲ್‌ನಲ್ಲಿ ದಾಖಲೆಯ ಮೊತ್ತವನ್ನು ಪಡೆದುಕೊಂಡಿರುವ ಎಫ್‌ಸಿ ಬಾರ್ಸಿಲೋನಾ ಮಾಜಿ ಫಾರ್ವರ್ಡ್‌ ಆಟಗಾರ, ಆ ಕ್ಲಬ್‌ನಲ್ಲಿ ವೇತನ ಮಾತ್ರವಲ್ಲದೆ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. 

ಎಲ್ಲೆ ಹೋದರೂ ಪ್ರಯಾಣಕ್ಕೆ ಪ್ರೈವೇಟ್‌ ಜೆಟ್‌: ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ನೇಮರ್‌ ಜೂನಿಯರ್‌ ಎಲ್ಲೇ ಪ್ರಯಾಣ ಮಾಡಿದರೂ ಅವರಿಗೆ ಪ್ರೈವೇಟ್‌ ಜೆಟ್‌ಅನ್ನು ಸ್ವತಃ ಕ್ಲಬ್‌ ವ್ಯವಸ್ಥೆ ಮಾಡಲಿದೆ. ಅದರೊಂದಿಗೆ ಅವರಿಗೆ ವಾರ್ಷಿಕ 903 ಕೋಟಿ ರೂಪಾಯಿ ವೇತನವನ್ನು ಕ್ಲಬ್‌ ನೀಡಲಿದೆ. ಇನ್ನು ನೇಮರ್‌ಗೆ ಸೌದಿ ಅರೇಬಿಯಾದಲ್ಲಿಯೇ ಉಳಿದುಕೊಳ್ಳಲು ಕ್ಲಬ್‌ ಐಷಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಲಿದೆ. ಈ ಬಂಗಲೆಯು ಬರೋಬ್ಬರಿ 25 ಬೆಡ್‌ರೂಮ್‌ಗಳನ್ನು ಒಳಗೊಂಡಿರಲಿದೆ.

40*10 ಅಳತೆಯ ಸ್ವಿಮ್ಮಿಂಗ್‌ ಪೂಲ್‌ ಇದರಲ್ಲಿ ಇರಲಿದ್ದು, ಮೂರು ಸೌನಾಗಳನ್ನು ಇದು ಹೊಂದಿರಲಿದೆ. ಸೌನಾ ಎಂದರೆ ಸ್ವಿಮ್ಮಿಂಗ್‌ ಪೂಲ್‌ಗೆ ಹೊಂದಿಕೊಂಡಂತೆ ಇರುವ ಮನೆಯ ಸೌಲಭ್ಯ.  ಇನ್ನು ಅವರ ಐಷಾರಾಮಿ ಬಂಗಲೆಯಲ್ಲಿ 5 ಫುಲ್‌ ಟೈಮ್‌ ಸ್ಟಾಫ್‌ಗಳು ಇರಲಿದ್ದಾರೆ. ಮನೆಯ ಇಡೀ ಉಸ್ತುವಾರಿಯನ್ನು ಇವರು ನೋಡಿಕೊಳ್ಳಲಿದ್ದಾರೆ.

ನಾನು ನೇಯ್ಮಾರ್‌ ಫ್ಯಾನ್‌, ಮೆಸ್ಸಿ ಬಗ್ಗೆ ಪ್ರಶ್ನೆಗೆ ಉತ್ತರಿಸಲ್ಲ ಎಂದ ಕೇರಳ ಬಾಲಕಿ: ಪ್ರಶ್ನೆ ಪತ್ರಿಕೆ ವೈರಲ್‌!

ಐಷಾರಾಮಿ ಕಾರುಗಳು: ಇನ್ನು ಸೌದಿ ಕ್ಲಬ್‌ ಮೂರು ಐಷಾರಾಮಿ ಕಾರುಗಳನ್ನು ನೇಮರ್‌ಗೆ ಉಡುಗೊರೆಯಾಗಿ ನೀಡಲಿದೆ. 4 ಕೋಟಿ ರೂಪಾಯಿ ಬೆಲೆಬಾಳುವ ಬೆಂಟ್ಲೆ ಕಾಂಟಿನೆಂಟಲ್‌ ಜಿಟಿ, 4.63 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ಟನ್‌ ಮಾರ್ಟಿನ್‌ ಡಿಬಿಎಕ್ಸ್‌ ಮತ್ತು 4 ಕೋಟಿ ರೂಪಾಯಿ ಬೆಲೆಬಾಳುವ ಲ್ಯಾಂಬೋರ್ಗಿನಿ ಹುರಾಕಾನ್‌ ಕಾರ್‌ಅನ್ನು ನೀಡಲಿದೆ. ಅದರೊಂದಿಗೆ ಈ ಕಾರುಗಳ ರೈಡ್‌ ಮಾಡಲು 24 ಗಂಟೆಯೂ ಇರುವ ಚಾಲಕ ಕೂಡ ಇರಲಿದ್ದಾನೆ. ಇನ್ನು ನೇಮರ್‌ ಅವರ ರಜೆಯ ದಿನಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಿವಿಧ ಸೇವೆಗಳ ಎಲ್ಲಾ ಬಿಲ್‌ಗಳನ್ನು ಪಾವತಿಸಲು ಕ್ಲಬ್ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ. ಅವರು ಒಂದು ರೂಪಾಯಿಯನ್ನು ಈ ವೇಳೆ ಪಾವತಿ ಮಾಡುವ ಅಗತ್ಯವಿರುವುದಿಲ್ಲ.

ಅತ್ಯಾಚಾರ ಆರೋಪದ ಬೆನ್ನಲ್ಲೇ ಟೂರ್ನಿಯಿಂದ ಹೊರಬಿದ್ದ ನೇಯ್ಮಾರ್!

ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದರೂ ದುಡ್ಡು: ಅಲ್‌ ಹಿಲಾಲ್‌ನಲ್ಲಿ ಇದ್ದ ಅವಧಿಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಅವರೇನಾದರೂ ಸೌದಿ ಅರೇಬಿಯಾಗೆ ಸಂಬಂಧಪಟ್ಟ ಯಾವುದೇ ಧನಾತ್ಮಕ ಪೋಸ್ಟ್‌ಗಳನ್ನು ಮಾಡಿದಲ್ಲಿ ಅದಕ್ಕಾಗಿ ಅವರಿಗೆ ಕ್ಲಬ್‌ 4.52 ಲಕ್ಷ ರೂಪಾಯಿ ಹಣವನ್ನು ಪಾವತಿ ಮಾಡಲಿದೆ.

Follow Us:
Download App:
  • android
  • ios