ಕೇರಳದ ನಾಲ್ಕನೇ ತರಗತಿ ವಿದ್ಯಾರ್ಥಿನಿಯ ಪ್ರಶ್ನೆ ಪತ್ರಿಕೆ ವೈರಲ್‌ಮೆಸ್ಸಿ ಬಗ್ಗೆ ಬರೆಯಲು ಕೇಳದ ಪ್ರಶ್ನೆಗೆ ಖಡಕ್ ಆಗಿ ತಿರುಗೇಟು ಕೊಟ್ಟ ಬ್ರೆಜಿಲ್ ಫ್ಯಾನ್ನಾನು ನೇಯ್ಮಾರ್ ಫ್ಯಾನ್, ಹಾಗಾಗಿ ಮೆಸ್ಸಿ ಬಗ್ಗೆ ಉತ್ತರ ಬರೆಯೊಲ್ಲವೆಂದ 4 ತರಗತಿ ವಿದ್ಯಾರ್ಥಿನಿ

ಮಲಪುರಂ(ಮಾ.27): 'ಪ್ರಖ್ಯಾತ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಬಗ್ಗೆ ಬರೆಯಿರಿ' ಎಂದು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಿದರೆ, ನೀವೆಲ್ಲ ಏನು ಬರೆಯುತ್ತೀರೋ ಗೊತ್ತಿಲ್ಲ, ಆದರೆ ಕೇರಳದ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬರೆದ ಉತ್ತರ ಮಾತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ಕೇರಳದಲ್ಲಿರುವ ಫುಟ್ಬಾಲ್‌ ಕ್ರೇಜ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಇಲ್ಲೊಬ್ಬ ಯುವ ಅಭಿಮಾನಿ ಶಾಲಾ ಪರೀಕ್ಷೆಯಲ್ಲೂ ತನ್ನ ಅಭಿಮಾನ, ನಿಷ್ಠೆ ಪ್ರದರ್ಶಿಸಿ ಗಮನ ಸೆಳೆದಿದ್ದಾಳೆ. 4ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಅರ್ಜೆಂಟೀನಾ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿಯ (Lionel Messi) ಭಾವಚಿತ್ರದೊಂದಿಗೆ ಅವರ ಜೀವನದ ಕುರಿತು ಬರೆಯುವಂತೆ 5 ಅಂಕಗಳಿಗೆ ಪ್ರಶ್ನೆ ಕೇಳಲಾಗಿತ್ತು. 

ಇದಕ್ಕೆ ರಿಜಾ ಫಾತಿಮಾ ಎನ್ನುವ ವಿದ್ಯಾರ್ಥಿನಿ ಉತ್ತರಿಸಲು ನಿರಾಕರಿಸಿದ್ದಾರೆ. ಜೊತೆಗೆ ಪ್ರಶ್ನೆ ಕೇಳಿದ ಶಿಕ್ಷಕರಿಗೆ ‘ನಾನು ನೇಯ್ಮರ್‌ರ ಅಭಿಮಾನಿ, ಬ್ರೆಜಿಲ್‌ ತಂಡವನ್ನು ಬೆಂಬಲಿಸುತ್ತೇನೆ. ಈ ಪ್ರಶ್ನೆಗೆ ಉತ್ತರಿಸುವುದಿಲ್ಲ’ ಎಂದು ಸಂದೇಶವನ್ನೂ ಬರೆದಿದ್ದಾಳೆ. ರಿಜಾ ಅವರ ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Scroll to load tweet…

ಆದರೆ ರಿಜಾ ಫಾತಿಮಾ ಬರೆದ ಉತ್ತರ ಕಂಡು ಆಕೆಯ ಪ್ರತಿಭೆ ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿ ಶಿಕ್ಷಕರು ಅಂಕ ನೀಡಿದರೆ ಅಥವಾ ಇಲ್ಲವೇ ಎನ್ನುವುದರ ಕುರಿತಂತೆ ಸದ್ಯ ಇದುವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇನ್ನು ರೀತಿ ಉತ್ತರ ಬರೆದಿದ್ದೇಕೆ ಎಂದು ಮಲೆಯಾಳಂನ ಚಾನೆಲ್‌ವೊಂದು ಆಕೆಯನ್ನು ಪ್ರಶ್ನಿಸಿದಾಗ, ರಿಜಾ ಫಾತಿಮಾ, "ನನ್ನ ಟೀಚರ್ ಕೂಡಾ ಯಾಕೆ ಹೀಗೆ ಉತ್ತರ ಬರೆದೆ ಎಂದು ನನ್ನನ್ನು ಕೇಳಿದರು. ನಾನಾಗ ನನ್ನ ಮನಸ್ಸಿನಲ್ಲಿ ಏನು ಬರುತ್ತದೆಯೋ ಅದನ್ನೇ ಮಾಡುತ್ತೇನೆ. ಅದನ್ನು ಬಿಟ್ಟು ನನ್ನ ಮನಸ್ಸಿಗೆ ವಿರುದ್ದವಾಗಿ ಏನನ್ನೂ ಮಾಡುವುದಿಲ್ಲ. ನಾನು ನೇಯ್ಮರ್ ಫುಟ್ಬಾಲ್ ಆಡುವಾಗ ಮಾತ್ರ ಫುಟ್ಬಾಲ್ ಪಂದ್ಯವನ್ನು ನೋಡುತ್ತೇನೆ. ಆದರೆ ನಾನು ಮೆಸ್ಸಿ ಅಭಿಮಾನಿಯಲ್ಲ. ನಾನು ಪ್ರಶ್ನೆ ಪತ್ರಿಕೆಯಲ್ಲಿ ಮೆಸ್ಸಿ ಫೋಟೋ ನೋಡುತ್ತಿದ್ದಂತೆಯೇ ನೇಯ್ಮರ್ ಕುರಿತು ಬರೆಯಬೇಕೆನಿಸಿತು. ಹಾಗಾಗಿ ನಾನು ಈ ಉತ್ತರವನ್ನು ಬರೆದೆ ಎಂದು ಹೇಳಿದ್ದಾಳೆ.

ಬೆಂಗ್ಳೂರಲ್ಲಿ ಚಿನ್ನದ ಹುಡುಗ: ಒಂದು ವೈಫಲ್ಯದಿಂದ ನಿರಾಶೆಗೊಳಗಾಗಬೇಡಿ ಮಕ್ಕಳಿಗೆ ನೀರಜ್ ಚೋಪ್ರಾ ಕಿವಿಮಾತು..!

ಕೆಲತಿಂಗಳ ಹಿಂದಷ್ಟೇ ಜರುಗಿದ ಕತಾರ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ (Qutar FIFA World Cup) ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫ್ರಾನ್ಸ್ ತಂಡವನ್ನು ಬಗ್ಗುಬಡಿದು ಫಿಫಾ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು. ಬರೋಬ್ಬರಿ 36 ವರ್ಷಗಳ ಬಳಿಕ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಯಿತು. ಇದರ ಜತೆಗೆ ಫಿಫಾ ವಿಶ್ವಕಪ್ ಗೆಲ್ಲಬೇಕೆಂಬ ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಲಿಯೋನೆಲ್ ಮೆಸ್ಸಿ ಯಶಸ್ವಿಯಾಗಿದ್ದರು.

ವೃತ್ತಿ​ ಬ​ದು​ಕಿನಲ್ಲಿ 800 ಗೋಲು ಹೊಡೆದ ಮೆಸ್ಸಿ!

ಬ್ಯೂನಸ್‌ ಐರಿ​ಸ್‌​(​ಅ​ರ್ಜೆಂಟೀ​ನಾ​): ಸಾರ್ವ​ಕಾಲಿಕ ಶ್ರೇಷ್ಠ ಫುಟ್ಬಾ​ಲಿ​ಗ​ರಲ್ಲಿ ಓರ್ವ​ರಾದ ಅರ್ಜೆಂಟೀ​ನಾದ ಲಿಯೋ​ನೆಲ್‌ ಮೆಸ್ಸಿ ವೃತ್ತಿಬದು​ಕಿ​ನ​ಲ್ಲಿ 800 ಗೋಲು​ಗಳ ಮೈಲಿ​ಗಲ್ಲು ತಲು​ಪಿದ್ದು, ಈ ಸಾಧನೆ ಮಾಡಿದ 2ನೇ ಆಟ​ಗಾ​ರ ಎನಿ​ಸಿ​ಕೊಂಡಿ​ದ್ದಾರೆ. ಪೋರ್ಚು​ಗ​ಲ್‌ನ ಕ್ರಿಸ್ಟಿ​ಯಾನೋ ರೊನಾಲ್ಡೋ 830 ಗೋಲು​ಗ​ಳೊಂದಿಗೆ ಪಟ್ಟಿ​ಯಲ್ಲಿ ಅಗ್ರ​ಸ್ಥಾ​ನ​ದ​ಲ್ಲಿ​ದ್ದಾರೆ. 

Scroll to load tweet…

ಫಿಫಾ ವಿಶ್ವ​ಕಪ್‌ ಗೆದ್ದ ಬಳಿಕ ಅರ್ಜೆಂಟೀನಾ ಕಳೆದ ಶುಕ್ರ​ವಾರ ಮೊದಲ ಅಂತಾ​ರಾ​ಷ್ಟ್ರೀಯ ಪಂದ್ಯ​ವನ್ನು ಪನಾಮ ವಿರುದ್ಧ ಆಡಿತು. ಪಂದ್ಯ​ದ 89ನೇ ನಿಮಿ​ಷ​ದಲ್ಲಿ ಫ್ರೀ ಕಿಕ್‌​ ಅನ್ನು ಗೋಲಾಗಿ ಪರಿ​ವ​ರ್ತಿ​ಸಿ 800 ಗೋಲು​ಗ​ಳನ್ನು ಪೂರ್ತಿ​ಗೊ​ಳಿ​ಸಿ​ದರು. ಇದು ಅವರ 99ನೇ ಅಂತಾರಾಷ್ಟ್ರೀಯ ಗೋಲು. ಉಳಿದ 701 ಗೋಲು​ಗಳನ್ನು ವಿವಿಧ ಕ್ಲಬ್‌​ಗಳು, ದೇಶಿ ಲೀಗ್‌​ಗ​ಳಲ್ಲಿ ಬಾರಿ​ಸಿ​ದ್ದಾ​ರೆ.