ಕೊರೋನಾ ನಿಯಮ ಉಲ್ಲಂಘನೆ; ತಕ್ಷಣವೆ ಮಾಲ್ಡೀವ್ಸ್ ತೊರೆಯಲು ಬೆಂಗಳೂರು FCಗೆ ವಾರ್ನಿಂಗ್!
- ಕೊರೋನಾ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್‌ಸಿ ತಂಡ
- ಮಾಲ್ಡೀವ್ಸ್ ತೊರೆಯಲು ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡಕ್ಕೆ ಖಡಕ್ ವಾರ್ನಿಂಗ್
- ಭಾರತದತ್ತ ಪ್ರಯಾಣ ಬೆಳೆಸಿದ ಸುನಿಲ್ ಚೆಟ್ರಿ ನೇತೃತ್ವದ ತಂಡ
ಮಾಲ್ಡೀವ್ಸ್(ಮೇ.09): ಭಾರತದಲ್ಲಿ ಕೊರೋನಾ ಸಂಖ್ಯೆ ಮೀತಿ ಮೀರಿದರೆ, ವಿದೇಶಗಳಲ್ಲೂ ಕೊರೋನಾ ಗಣನೀಯವಾಗಿ ಏರಿಯಾಗುತ್ತಿದೆ. ಪ್ರತಿ ರಾಷ್ಟ್ರದಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ಬೆಂಗಳೂರು ಎಫ್‌ಸಿ ತಂಡಕ್ಕೆ ಖಡಕ್ ಸೂಚನೆ ನೀಡಿದ ಘಟನೆ ವರದಿಯಾಗಿದೆ. ಕೊರೋನಾ ನಿಯಮ ಉಲ್ಲಂಘಿಸಿದ ಕಾರಣ ತಕ್ಷಣವೇ ಮಾಲ್ಡೀವ್ಸ್ ತೊರೆಯಲು ಸಚಿವರು ವಾರ್ನಿಂಗ್ ನೀಡಿದ್ದಾರೆ. ಪರಿಣಾಮ ಬಿಎಫ್‌ಸಿ ಇದೀಗ ಭಾರತದತ್ತ ಪ್ರಯಾಣ ಬೆಳೆಸಿದೆ.
ಬೆಂಗಳೂರು ಎಫ್‌ಸಿಗೆ 5-0 ಗೋಲುಗಳ ಜಯ.
ಎಎಫ್‌ಸಿ ಕಪ್ ಫುಟ್ಬಾಲ್ ಟೂರ್ನಿಗಾಗಿ ಬೆಂಗಳೂರ ಎಫ್‌ಸಿ ತಂಡ ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿತ್ತು. ನಿಯಮದ ಪ್ರಕಾರ ಎಲ್ಲಾ ಆಟಗಾರರು ಕ್ವಾರಂಟೈನ್ ಪಾಲಿಸಬೇಕಿತ್ತು. ಆದರೆ ಬೆಂಗಳೂರು ಎಫ್‌ಸಿ ತಂಡದ ಆಟಗಾರರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಮಾಲ್ಡೀವ್ಸ್ ಕ್ರೀಡಾ ಸಚಿವ ಅಹಮ್ಮದ್ ಮಾಲೂಫ್ ಆರೋಪಿಸಿದ್ದಾರೆ.
ಬೆಂಗಳೂರು ತಂಡದ ನಡೆ ಸ್ವೀಕಾರಾರ್ಹವಲ್ಲ. ಕೊರೋನಾ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್‌ಸಿ ತಂಡ ತಕ್ಷಣವೇ ಮಾಲ್ಡೀವ್ಸ್ ತೊರೆಯಬೇಕು. ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ನಡುವೆ ಒಪ್ಪಂದ ಪ್ರಕಾರ ನಾವು AFC ಟೂರ್ನಿಗೆ ಅನುಮತಿ ನೀಡಿದ್ದೇವೆ. ಆದರೆ ಸದ್ಯ ನಡೆದ ಬೆಳವಣಿಗೆ ದೇಶದ ಆರೋಗ್ಯ ಸುರಕ್ಷತೆಗೆ ಸವಾಲೆಸೆಯುವಂತಿದೆ ಎಂದು ಆಹಮ್ಮದ್ ಮಾಲೂಫ್ ಟ್ವೀಟ್ ಮಾಡಿದ್ದಾರೆ.
ರೊನಾಲ್ಡೋ ಬಿಸಾಡಿದ್ದ ಆರ್ಮ್‌ಬ್ಯಾಂಡ್ 55 ಲಕ್ಷ ರುಪಾಯಿಗೆ ಹರಾಜು!..
ಬೆಂಗಳೂರು ತಂಡದಲ್ಲಿರುವ ಮೂವರು ವಿದೇಶಿ ಆಟಗಾರರು ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ಬೆಂಗಳೂರು ತಂಡದ ಮಾಲೀಕ ಪಾರ್ಥ ಜಿಂದಾಲ್ ಭೇಷರತ್ ಕ್ಷಮೆ ಯಾಚಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಂದಾಲ್ ಭರವಸೆ ನೀಡಿದ್ದಾರೆ.
ಈ ಘಟನೆ ಬೆನ್ನಲ್ಲೇ ಎಎಫ್‌ಸಿ ಟೂರ್ನಿ ರದ್ದಾಗಿದೆ. ಕೊರೋನಾ ಹೆಚ್ಚಾಗುತ್ತಿರುವ ಕಾರಣ ಪಂದ್ಯ ಆಯೋಜಿಸಲು ಸಾಧ್ಯವಿಲ್ಲ ಎಂದು ಅಹಮ್ಮದ್ ಮಾಲೂಫ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬೆಂಗಳೂರು ಎಫ್‌ಸಿ ತಂಡಕ್ಕೆ ತವರಿಗೆ ಮರಳಲು ಎಲ್ಲೂ ನೆರವು ನೀಡುವಂತೆ ಸೂಚಿಸಿದ್ದಾರೆ.