ಬೆಲ್ಗ್ರೇಡ್‌(ಏ.03)‌: ಕಳೆದ ವಾರ ಇಲ್ಲಿ ಸರ್ಬಿಯಾ ವಿರುದ್ಧ ನಡೆದ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದ ವೇಳೆ ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ, ಸಿಟ್ಟಿನಲ್ಲಿ ಎಸೆದ ಆರ್ಮ್‌ಬ್ಯಾಂಡ್‌ ಬರೋಬ್ಬರಿ 64,000 ಯುರೋಸ್‌(ಅಂದಾಜು 55.27 ಲಕ್ಷ ರು.)ಗೆ ಹರಾಜಾಗಿದೆ. 

ಮಾನವೀಯ ವಿಚಾರಗಳಿಗೆ ನೆರವಾಗುವ ಸರ್ಬಿಯಾದ ಸಂಸ್ಥೆಯೊಂದು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 6 ತಿಂಗಳ ಮಗುವೊಂದರ ಚಿಕಿತ್ಸೆಗೆ ಹಣ ಸಂಗ್ರಹಿಸಲು ಆನ್‌ಲೈನ್‌ನಲ್ಲಿ ನಡೆಸಿದ ಹರಾಜಿನಲ್ಲಿ, ಆರ್ಮ್‌ಬ್ಯಾಂಡ್‌ ಬಿಕರಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಲಿಯೋನೆಲ್ ಮೆಸ್ಸಿ ಒಂದು ವರ್ಷದ ಸಂಬಳ 1200 ಕೋಟಿ ರುಪಾಯಿ!

ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ರೊನಾಲ್ಡೊ: 
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿದ ಕ್ರೀಡಾಪಟು ಎನ್ನುವ ದಾಖಲೆ ಪೋರ್ಚುಗಲ್‌ ಫುಟ್ಬಾಲ್‌ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದೆ.ಪೋರ್ಚುಗಲ್‌ ತಾರಾ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (26.5 ಕೋಟಿ) ಅಗ್ರ ಸ್ಥಾನದಲ್ಲಿದ್ದಾರೆ. ಅರ್ಜೆಂಟಿನಾ ಫುಟ್‌ಬಾಲ್‌ ತಂಡದ ನಾಯಕ(18.6 ಕೋಟಿ) ಹಾಗೂ ಬ್ರೆಜಿನ್‌ನ ನೇಯ್ಮರ್‌(14.7 ಕೋಟಿ) ಕ್ರಮವಾಗಿ 2 ಮತ್ತು 3ನೇ ಸ್ಥಾನ ಹಂಚಿಕೊಂಡಿದ್ದಾರೆ.