ಬ್ಯಾಂಬೋಲಿಮ್‌(ಏ.15): 2021ರ ಎಎಫ್‌ಸಿ ಕಪ್‌ ಅರ್ಹತಾ ಸುತ್ತಿನ 2ನೇ ಹಂತದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ, ನೇಪಾಳದ ತ್ರಿಭುವನ್‌ ಆರ್ಮಿ ವಿರುದ್ಧ 5-0 ಗೋಲುಗಳ ಜಯ ಸಾಧಿಸಿದೆ. 

ಬುಧವಾರ ನಡೆದ ಪಂದ್ಯದ ಮೊದಲಾರ್ಧ ಯಾವುದೇ ಗೋಲು ದಾಖಲಾಗಿರಲಿಲ್ಲ. ಆದರೆ ರಾಹುಲ್‌ ಭೇಕೆ (51ನೇ ನಿ., 65ನೇ ನಿ,.), ಸುನಿಲ್‌ ಚೆಟ್ರಿ (52ನೇ ನಿ.,) ಹಾಗೂ ಕ್ಲೀಟನ್‌ ಸಿಲ್ವಾ (61, 65ನೇ ನಿ.,) ಗೋಲು ಬಾರಿಸಿ ಗೆಲುವು ತಂದುಕೊಟ್ಟರು. ಮುಂದಿನ ಪಂದ್ಯದಲ್ಲಿ ಬಿಎಫ್‌ಸಿ ಬಾಂಗ್ಲಾ ಇಲ್ಲವೇ ಮಾಲ್ಡೀವ್ಸ್‌ನ  ತಂಡವನ್ನು ಎದುರಿಸಲಿದೆ.

ಬೆಂಗಳೂರು ಸಾಯ್‌ನಲ್ಲಿ 5 ಅಥ್ಲೀಟ್‌ಗಳಿಗೆ ಸೋಂಕು!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ 20 ಕಿ.ಮೀ. ನಡಿಗೆ ಸ್ಪರ್ಧಿ ಪ್ರಿಯಾಂಕ ಗೋಸ್ವಾಮಿ, 1500 ಮೀ. ಓಟದಲ್ಲಿ ಏಷ್ಯನ್‌ ಚಾಂಪಿಯನ್‌ ಜಿನ್ಸನ್‌ ಜಾನ್ಸನ್‌ ಸೇರಿ ಇಲ್ಲಿ ಅಭ್ಯಾಸ ನಡೆಸುತ್ತಿರುವ ಐವರು ಅಥ್ಲೀಟ್‌ಗಳಿಗೆ ಕೊರೋನಾ ಸೋಂಕು ತಗುಲಿದೆ. 

ಈ ಪೈಕಿ ಸ್ಟೀಪಲ್‌ ಚೇಸ್‌ ಪಟು ಚಿಂತಾ ಯಾದವ್‌, ನಡಿಗೆ ಸ್ಪರ್ಧೆಯ ಕೋಚ್‌ ಅಲೆಕ್ಸಾಂಡರ್‌ ಸಹ ಇದ್ದಾರೆ. ಸೋಂಕಿತರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ದೊಡ್ಡ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳಿಲ್ಲ ಎಂದು ಮೂಲಗಳು ತಿಳಿಸಿವೆ.