ಮನೆಯಂಗಣದಲ್ಲಿ ಹೊಸ ಆರಂಭದ ನಿರೀಕ್ಷೆಯಲ್ಲಿ ಹೈದರಾಬಾದ್
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಹೈದರಾಬಾದ್ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೋರಾಟಕ್ಕಿಳಿದಿರುವ ಹೈದರಾಬಾದ್ ಹೊಸ ಇನಿಂಗ್ಸ್ ಆರಂಭದ ವಿಶ್ವಾಸದಲ್ಲಿದೆ. ರೋಚಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.
ಹೈದರಾಬಾದ್(ನ.01): ಹೀರೋ ಇಂಡಿಯನ್ ಲೀಗ್ ನ ಹೊಸ ತಾಣ ಹೈದರಾಬಾದ್ ಗೆ ಫುಟ್ಬಾಲ್ ಆಗಮಿಸಿದೆ. ಯಾವುದೇ ಫುಟ್ಬಾಲ್ ಕ್ಲಬ್‌ನ ಮನೆಯಂಗಣದ ಪ್ರೇಕ್ಷಕರು ಈ ರೀತಿಯ ಪ್ರವೇಶವನ್ನು ಬಯಸುವುದಿಲ್ಲ. ಏಕೆಂದರೆ, ಹೈದರಾಬಾದ್ ಎಫ್ ಸಿ ಸತತ ಸೋಲಿನೊಂದಿಗೆ ಮನೆಗೆ ಆಗಮಿಸಿದೆ. ಆದರೆ ಶನಿವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯದೊಂದಿಗೆ ತಮ್ಮ ಅದೃಷ್ಟ ಬದಲಾಗಬಹುದೆಂಬ ನಿರೀಕ್ಷೆ ಹೊಸ ತಂಡಕ್ಕಿದೆ.
ಇದನ್ನೂ ಓದಿ: ISL ಫುಟ್ಬಾಲ್: ಚೆನ್ನೈಗೆ ಮತ್ತೆ ಸೋಲಿನ ಆಘಾತ,ATKಗೆ ಗೆಲುವಿನ ಪುಳಕ!
ಲೀಗ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ತಂಡ ಎಟಿಕೆ ಹಾಗೂ ಜೆಮ್‌ಶೆಡ್‌ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಸತತ ಸೋಲು ಅನುಭವಿಸಿ, ನಿರಾಸೆಗೊಳಗಾಗಿದೆ. ಈ ನಡುವೆ ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿರುವುದರಿಂದ, ಕೋಚ್ ಫಿಲ್ ಬ್ರೌನ್ ಅವರಿಗೆ ಕಠಿಣ ಸವಾಲು ಎದುರಿಗಿದೆ.
''ನಾವು ಕಠಿಣ ರೀತಿಯಲ್ಲಿ ಅಭ್ಯಾಸ ಮಾಡುತ್ತಿರುವುದಲ್ಲದೆ, ಅಂಗಣದಲ್ಲೂ ಉತ್ತಮ ಹೋರಾಟ ನೀಡುತ್ತಿದ್ದೇವೆ. ಲೀಗ್ ಆರಂಭವಾದಾಗಿನಿಂದ ನಾವು ಪ್ರಯಾಣ ಮಾಡುತ್ತಿದ್ದೇವೆ. ಅಂತಿಮವಾಗಿ ನಾವು ಹೈದರಾಬಾದ್ ತಲುಪಿದ್ದೇವೆ. ಇಲ್ಲಿ ವಿಶ್ರಾಂತಿಯೂ ಸಿಕ್ಕಿದೆ. ಮನೆಯಂಗಣದ ಎರಡು ಪಂದ್ಯಗಳು ಯಾವ ರೀತಿಯಲ್ಲಿ ನಡೆಯುತ್ತದೆ ಎಂದು ಕಾದು ನೋಡಬೇಕಿದೆ,'' ಎಂದು ಬ್ರೌನ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲುಗಳಲ್ಲಿ ಡ್ರಾ!
ಪ್ರಮುಖ ಆಟಗಾರರಾದ ಬೊಬೊ, ಗಿಲ್ಸ್ ಬಾರ್ನೆಸ್, ಸಾಹಿಲ್ ಪನ್ವಾರ್ ಹಾಗೂ ರಾಫೆಲ್ ಗೊಮೆಜ್ ಅವರು ಗಾಯಗೊಂಡಿದ್ದು, ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ, ಇದಲ್ಲದೆ, ನೆಸ್ಟರ್ ಗೋರ್ಡಿಲ್ಲೋ ಕೂಡ ಅಮಾನತಿನಲ್ಲಿದ್ದಾರೆ. ತಂಡದ ಸ್ಟಾರ್ ಆಟಗಾರ ಮಾರ್ಸೆಲಿನೊ ನಾಲ್ಕನೇ ಋತುವಿನ ಐಎಸ್ ಎಲ್ ಗೆ ಸಜ್ಜಾಗಿದ್ದು, ಇದು ಬ್ರೌನ್ ಅವರ ಪಾಲಿಗೆ ಸಂತಸದ ವಿಷಯ.
''ನಮ್ಮ ಪ್ರಮುಖ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಮಾರ್ಸೆಲಿನೊ ಮಾತ್ರ ಇದರಿಂದ ಹೊರತಾಗಿದ್ದಾರೆ. ನಮ್ಮ ಕೆಲವು ಪ್ರಮುಖ ಆಟಗಾರರು ಸ್ಟ್ಯಾಂಡ್ ನಲ್ಲಿ ಕುಳಿತಿದ್ದಾರೆ. ಅವರು ವಾಪಾಸಾಗುತ್ತಿದ್ದನಂತೆ ರಾಬಿನ್ ಸಿಂಗ್ ಅವರಿಗೆ ಪ್ರಯೋಜನವಾಗಲಿದೆ. ಚಿಕಿತ್ಸೆ ನೀಡುತ್ತಿರುವ ಕೊಠಡಿ ತೆರವಾಗುತ್ತಿದಂತೆ, ನೀವು ಬದಲಾವಣೆಯನ್ನು ಕಾಣಬಹುದು,'' ಎಂದು ಬ್ರೌನ್ ಹೇಳಿದರು
ಇದನ್ನೂ ಓದಿ: ISL 2019: ಒಡಿಶಾ ವಿರುದ್ದ ನಾರ್ತ್ ಈಸ್ಟ್‌ಗೆ ಗೆಲುವು
ಮಿಡ್ ಫೀಲ್ಡರ್ ಮಾರಿಯೋ ಆರ್ಕ್ಯೂಸ್ ಮತ್ತು ಡಿಫೆಂಡರ್ ಸಂದೇಶ್ ಜಿಂಗಾನ್ ಗಾಯದ ಕಾರಣ ಬೆಂಚ್ ಕಾಯುವಂತಾಗಿದೆ.
''ಹೈದರಾಬಾದ್ ತಂಡದ ಅನೇಕ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಾಧ್ಯತೆ ಇರುವ ಬಲಿಷ್ಠ ತಂಡದವನ್ನು ಕಟ್ಟದೇ ಇದು ಅಷ್ಟು ಸುಲಭವಲ್ಲ, ನಾನು ಕೂಡ ನಮ್ಮ ಬಲಿಷ್ಠ ತಂಡವಿಲ್ಲದೆ ಆಡುತ್ತಿದ್ದೇನೆ. ನಮ್ಮ ತಂಡದ ಕೆಲವು ವಿದೇಶಿ ಆಟಗಾರರು ಸಂಪೂರ್ಣ ಫಿಟ್ ಆಗಿಲ್ಲ, ಆದರೂ ಹೋರಾಟ ನಡೆಸಬೇಕಾಗಿದೆ,'' ಎಂದು ಕೇರಳ ಬ್ಲಾಸ್ಟರ್ಸ್ ತಂಡದ ಎಲ್ಕೋ ಶೆಟ್ಟೋರಿ ಹೇಳಿದರು.
ಕೇರಳ ಬ್ಲಾಸ್ಟರ್ಸ್ ತಂಡ ಎಟಿಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸಿದ ನಂತರ, ಮುಂಬೈ ವಿರುದ್ಧ ಸೋಲನುಭವಿಸಿತ್ತು,
''ಈ ಹಿಂದಿನ ಪಂದ್ಯವನ್ನು ಸೋತಿರುವುದು ದುರಾದೃಷ್ಟ, ಅದೊಂದು ನೋವಿನ ಸೋಲು, ನಾನು ಕನಿಷ್ಠ ಒಂದು ಅಂಕವನ್ನಾದರೂ ಗಳಿಸಬೇಕಿತ್ತು. ಇನ್ನೊಂದೆಡೆ, ಹೈದರಾಬಾದ್ ತಂಡ ಜೇಮ್ಶೆಡ್ಪುರ ತಂಡದ ವಿರುದ್ಧ ಸೋಲನುಭವಿಸಿದ ನಂತರ ಹೈದರಾಬಾದ್ ಇಲ್ಲಿಗೆ ಆಗಮಿಸಿದೆ. ಆದ್ದರಿಂದ ಎರಡೂ ತಂಡಗಳು ಮೂರು ಅಂಕ ಗಳಿಸಲು ಹಾತೊರೆಯುತ್ತಿವೆ. ಇದೊಂದು ಕುತೂಹಲದ ಪಂದ್ಯವಾಗಲಿದೆ,'' ಎಂದು ಡಚ್ ಕೋಚ್ ಹೇಳಿದ್ದಾರೆ.
ಕೇರಳ ತಂಡ ನಾಯಕ ಬಾರ್ತಲೋಮ್ಯೋ ಓಗ್ಬ್ಯಾಚೆ ಅವರನ್ನು ಆಧರಿಸಿದೆ, ಆಡಿರುವ ಎರಡು ಪಂದ್ಯಗಳಲ್ಲಿ ಹೈದರಾಬಾದ್ ಎಂಟು ಗೋಲುಗಳನ್ನು ನೀಡಿದೆ, ಇದರಿಂದ ಓಗ್ಬ್ಯಾಚೆ ಮತ್ತಷ್ಟು ಗೋಲು ಗಳಿಸುವ ಸಾಧ್ಯತೆ ಇದೆ.