ಗೋವಾ(ಅ.29): ಹಾಲಿ ಚಾಂಪಿ​ಯನ್‌ ಬೆಂಗಳೂರು ಎಫ್‌ಸಿ, 6ನೇ ಆವೃತ್ತಿಯ ಇಂಡಿ​ಯನ್‌ ಸೂಪರ್‌ ಲೀಗ್‌ (ಐ​ಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಸತತ 2ನೇ ಡ್ರಾಗೆ ತೃಪ್ತಿ​ಪ​ಟ್ಟಿದೆ. ಸೋಮ​ವಾರ ಇಲ್ಲಿ ನಡೆದ ಗೋವಾ ಎಫ್‌ಸಿ ವಿರು​ದ್ಧದ ಪಂದ್ಯ​ದಲ್ಲಿ ಕೊನೆ ಕ್ಷಣದಲ್ಲಿ ಪೆನಾಲ್ಟಿಬಿಟ್ಟು​ಕೊ​ಟ್ಟಬಿಎಫ್‌ಸಿ 1-1 ಗೋಲು​ಗಳಲ್ಲಿ ಡ್ರಾಗೆ ಸಮಾ​ಧಾನಪಟ್ಟು​ಕೊಂಡಿತು. ಕಳೆದ ಆವೃ​ತ್ತಿಯ ಫೈನಲ್‌ನಲ್ಲಿ ಸೆಣ​ಸಾ​ಡಿದ್ದ ಉಭಯ ತಂಡ​ಗಳ ನಡುವಿನ ಪಂದ್ಯ ಭಾರೀ ರೋಚ​ಕತೆಯಿಂದ ಕೂಡಿತ್ತು.

ಇದನ್ನೂ ಓದಿ: ISL ಆರಂಭವಾದಾಗ ಬಾಲ್ ಬಾಯ್; ಈಗ ಸ್ಟಾರ್ ಫುಟ್ಬಾಲ್ ಪಟು

ಗೋಲಿನ ಖಾತೆ ತೆರೆದ ಉದಾಂತ 
62ನೇ ನಿಮಿಷದಲ್ಲಿ ಮಿಡ್ ಫೀಲ್ಡರ್ ಉದಾಂತ್ ಸಿಂಗ್ ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ಹಾಕಿಕೊಂಡಿತು. ಇದು ಈ ಋತುವಿನ ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದು ಬೆಂಗಳೂರು ಪಾಲಿನ ಮೊದಲ ಗೋಲ್. ಯುವ ಆಟಗಾರ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಪರ ಗಳಿಸಿದ ಆರನೇ ಗೋಲು ಇದಾಗಿದೆ, ಕೀಪರ್ ಚೆಂಡನ್ನು ಬಹಳ ದೂರಕ್ಕೆ ತುಳಿದರು. ಮ್ಯಾನುಯೆಲ್ ಒನವ್ ಹೆಡೆರ್ ಮೂಲಕ ನಿಯಂತ್ರಿಸಿದರು. ಉದಾಂತ್ ಸಿಂಗ್ ಚೆಂಡನ್ನು ನಿಯಂತ್ರಿಸುವಲ್ಲಿ ಸಫಲರಾದರು. ಅಲ್ಲೇ ಇದ್ದ ಮೌರ್ತಾದ  ಫಾಲ್ ಅವರನ್ನು ವಂಚಿಸಿ ಗೋಲ್ ಬಾಕ್ಸ್ ಕೆಡೆಗೆ ಚೆಂಡನ್ನು ಕೊಂಡೊಯ್ದರು, ಈಗ ಕೀಪರ್ ಹೊರತಾಗಿ ಯಾರ ಅಡ್ಡಿಯೂ ಇರಲಿಲ್ಲ, ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು,

ಇದನ್ನೂ ಓದಿ:ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

ರಕ್ಷಣಾತ್ಮಕ ಆಟ 
ಎರಡು ಬಲಿಷ್ಠ ತಂಡಗಳು ಆಡಲು ಆರಂಭಿಸಿದರೆ ಅಲ್ಲಿ ಸುಲಭವಾಗಿ ಗೋಲನ್ನು ನಿರೀಕ್ಷಿಸಲಾಗದು. ಗೋವಾ ಮತ್ತು ಬೆಂಗಳೂರು ಎಫ್ ಸಿ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ ಇದಕ್ಕೆ ಸಾಕ್ಷಿಯಾಯಿತು. ಉತ್ತಮ ರೀತಿಯಲ್ಲಿ ಇತ್ತಂಡಗಳು ಚೆಂಡನ್ನು ನಿಯಂತ್ರಿಸಿ ಎದುರಾಳಿಯ ಗೋಲ್ ಬಾಕ್ಸ್ ಕಡೆಗೆ ಕೊಂಡೊಯ್ದರೂ ಗೋಲು  ಗಳಿಸುವಲ್ಲಿ ವಿಫಲವಾದವು. ಗೋವಾ ತಂಡಕ್ಕೆ ಫ್ರೀ ಕಿಕ್ ಒಂದು 19ನಿಮಿಷದಲ್ಲಿ ಸಿಕ್ಕಿದ್ದನ್ನು ಹೊರತುಪಡಿಸಿದರೆ ಎಲ್ಲಿಯೂ ಉತ್ತಮ ಅವಕಾಶ ಕೂಡಿ ಬರಲಿಲ್ಲ. ಪರಿಣಾಮ ೦--೦ಯಲ್ಲಿ ಪ್ರಥಮಾರ್ಧ ಅಂತ್ಯ. ದಿಮಸ್ ಡೆಲ್ಗಡೊ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದರು.

ಬೆಂಗಳೂರು ತಂಡ ಪಂದ್ಯವನ್ನು ಗೆದ್ದೇ ಬಿಟ್ಟಿತು ಎಂದು ಎಲ್ಲರೂ ನಿರೀಕ್ಷಿಸಿದ್ದರು, ಆದರೆ ಆಶಿಕ್ ಕುರುನಿಯನ್ ಕೊನೆ ಕ್ಷಣದಲ್ಲಿ ಮಾಡಿದ ಪ್ರಮಾದ ಗೋವಾಕ್ಕೆ ಗೋಲು  ಗಳಿಸಲು ಅವಕಾಶ ಮಾಡಿಕೊಟ್ಟಿತು. ಪೆನಾಲ್ಟಿ ಹೊಡೆತವನ್ನು ಫರಾನ್ ಕೊರೊಮಿನಾಸ್ ಯಾವುದೇ ಪ್ರಮಾದ ಮಾಡದೆ ಗೋಲು ಗಳಿಸಿದರು.