ಗುವಾಹಟಿ(ಫೆ.19): ಇಂದಿರಾ ಗಾಂಧಿ ರಾಷ್ಟ್ರೀಯ ಅಂಗಣಲ್ಲಿ ಗುರುವಾರ(ಫೆ.20) ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಹೈದರಾಬಾದ್ ಎಫ್ ಸಿ ವಿರುದ್ಧ ಹೋರಾಟ ನಡೆಸಲಿದೆ.  ಎರಡೂ ತಂಡಗಳು ಈ ಬಾರಿ ಗೆಲುವಿಗಿಂತ ಹೆಚ್ಚು ಸೋಲನ್ನೇ ಕಂಡಿದೆ .

ಇದನ್ನೂ ಓದಿ: ಕಾರ್ನರ್ ಕಿಕ್ ಗೋಲ್, 10ರ ಪೋರನ ಫುಟ್ಬಾಲ್ ಆಟಕ್ಕೆ ದಿಗ್ಗಜರೇ ದಂಗು!

ಕೊನೆಯ ಸ್ಥಾನದಲ್ಲಿರುವ ಇತ್ತಂಡಗಳು ಈಗ ಗೌರವಕ್ಕಾಗಿ ಆಡಲಿವೆ.  16 ಪಂದ್ಯಗಳನ್ನು ಆಡಿರುವ ನಾರ್ಥ್ ಈಸ್ಟ್ 13 ಅಂಕಗಳನ್ನು ಗಳಿಸಿ ಕೊನೆಯ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಿದರೆ ಏಳನೇ ಸ್ಥಾನದವರೆಗೂ ತಲಪುವ ಸಾಧ್ಯತೆ ಇದೆ. ಆದರೆ ಈ ಬಾರಿಯ ಲೀಗ್ ನಲ್ಲಿ ನಿರೀಕ್ಷಿತ ಮಟಟ್ಟದಲ್ಲಿ ಪ್ರದರ್ಶನ ತೋರಲಿಲ್ಲ. 

ಇದನ್ನೂ ಓದಿ: ISL 2020; ಗೋವಾ ಅಬ್ಬರಕ್ಕೆ ದಂಗಾದ ಮುಂಬೈ, 5-2 ಅಂತರದಲ್ಲಿ ಗೆಲುವು!

ಗಾಯದ ಸಮಸ್ಯೆ ತಂಡವನ್ನು ಉತ್ತಮ ಪ್ರದರ್ಶನ ತೋರಲು ನೆರವಾಗಿಲ್ಲ. ಅಸಮೋಹ್ ಗ್ಯಾನ್ ಗಾಯದ ಸಮಸ್ಯೆಯಿಂದ ತಂಡಡದಿಂದ ಹೊರಗೆ ಉಳಿದದ್ದು ನಾರ್ಥ್ ಈಸ್ಟ್ ನ ನಿರಂತರ ವೈಫಲ್ಯಕ್ಕೆ ಕಾರಣವಾಯಿತು. ಅವರ ಸ್ಥಾನದಲ್ಲಿ  ತಂಡವನ್ನು ಸೇರಕೊಂಡ ಆ್ಯಂಡಿ ಕೆಯೊಗ್ ಅವರಿಂದ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.

ಕೊನೆಯ ಪಂದ್ಯಕ್ಕೆ ಮುನ್ನ ನಡೆಯುವ ಪಂದ್ಯದಲ್ಲಿ, ಮಧ್ಯಂತರ ಕೋಚ್ ಖಾಲೀದ್ ಜಮೀಲ್ ಅವರಿಗೆ ತಂಡಕ್ಕೆ ಜಯ ತಂದುಕೊಡಬಲ್ಲ ಆಟಗಾರರು ಯಾರು ಎಂಬ ಚಿಂತೆ ಆವರಿಸಿದೆ. ಜೋಸ್ ಲ್ಯೂಡೋ, ಡೇನೇ ವಾಜ್ ಮತ್ತು ರೆಡೀಮ್ ತ್ಲಾಂಗ್  ಆವರು ಆಮಾನತುಗೊಂಡಿದ್ದರೆ, ಕೊಮೊರ್ಸ್ಕಿ, ನಿಖಿಲ್ ಕದಮ್ ಮತ್ತು ಪ್ರೊವಾತ್ ಲಾಕ್ರಾ ಗಾಯಗೊಂಡಿದ್ದಾರೆ.

‘’ನಾವು ಹೈದರಾಬಾದ್ ಎಫ್ ಸಿ ಬಗ್ಗೆ ಯೋಚಿಸುತ್ತಿಲ್ಲ, ಇದು ನಮ್ಮ ಪಾಲಿಗೆ ಕೊನೆಯ ಪಂದ್ಯಕ್ಕೆ ಮುನ್ನ ನಡೆಯುವ ಪಂದ್ಯವಾಗಿದೆ. ಅಮಾನತುಗೊಂಡಿರುವ ಆಟಗಾರರ ಬಗ್ಗೆ ನಾವು ಏನೂ ಮಾಡುವಂತಿಲ್ಲ. ಅದು  ನಮ್ಮ ವ್ಯಾಪ್ತಿಯನ್ನು ಮೀರಿದ್ದು,’’ ಎಂದು ಜಮೀಲ್ ಹೇಳಿದರು.

ದುಬಾರಿ ಕಾರಿಲ್ಲ, ಫೋನಿಲ್ಲ; ಕೋಟಿ ಆದಾಯದ ಮಾನೆ ಹೃದಯ ಶ್ರೀಮಂತಿಕೆಗೆ ಸರಿಸಾಟಿ ಯಾರೂ ಇಲ್ಲ!

12 ಪಂದ್ಯಗಳ ಹಿಂದೆ ನಾರ್ಥ್ ಈಸ್ಟ್ ತಂಡ ಜಯ ಗಳಿಸಿತ್ತು, ಅದು ಕೋಡ ಹೈದರಾಬಾದ್ ವಿರುದ್ಧ.   ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ವಿರುದ್ಧ ಫೆಡರಿಕೊ ಗಲ್ಲಗೋ ಪಡೆ ಜಯ ಗಳಿಸುವ ಆಶಯ ಹೊಂದಿದೆ,  17 ಪಂದ್ಯಗಳನ್ನು ಆಡಿರುವ ಹೈದರಾಬಾದ್ ಗೆದ್ದಿರುವುದು ಕೇವಲ 7 ಅಂಕ. ಋತುವಿನ ಕೊನೆಯ ಪಂದ್ಯದಲ್ಲಿ ಗೆಲ್ಲುವುದು ಮಾತ್ರವಲ್ಲ, ಐಎಸ್ ಎಲ್ ಋತುವಿನಲ್ಲೇ ಕಡಿಮೆ ಅಂಕ ಗಳಿಸಿದ ತಂಡ ಎನಿಸಿಕೊಳ್ಳಬಾರದು ಎಂಬುದು ಮಧ್ಯಂತರ ಕೋಚ್ ಜೇವಿಯರ್ ಲೊಪೇಜ್ ಅವರ ಗುರಿಯಾಗಿದೆ. ಕಳೆದ ಋತುವಿನಲ್ಲಿ ಚೆನ್ನೈಯಿನ್ ತಂಡ 9 ಅಂಕಗಳನ್ನು ಗಳಿಸಿದ್ದು, ಇದುವರೆಗಿನ ಕಡಮೆ ಅಂಕಗಳಿಗೆ ಉದಾಹರಣೆಯಾಗಿದೆ.

‘’ಇದು ನಮ್ಮ ಪಾಲಿಗೆ ಉತ್ತಮ ಋತುವಾಗಿಲ್ಲ. ನಾನು ಇಲ್ಲಿಗೆ ಆಗಮಿಸಿದಾಗ ಆಟಗಾರರ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ಸ್ಪರ್ಧೆ ನಡೆಸಲು ಅವರನ್ನು ಹುರಿದುಂಬಿಸಲಾಯಿತು. ನಾವು ಮುಂಬೈ ಸಿಟಿ ಮತ್ತು ಬೆಂಗಳೂರು ವಿರುದ್ಧ ಡ್ರಾ ಸಾಧನೆ ಮಾಡಿದ್ದೇವೆ, ಗೋವಾ ವಿರುದ್ಧ ನಮಗೆ ಸದ್ಯ ಅವಕಾಶ ಸಿಗಲಿಲ್ಲ, ಮುಂದಿನ ಪಂದ್ಯ ಕೊನೆಯ ಪಂದ್ಯವಾಗಿದ್ದು, ಎಲ್ಲರೂ ಜಯದ ನಿರೀಕ್ಷೆಯಲ್ಲಿದ್ದಾರೆ,’’ ಎಂದು ಲೊಪೇಜ್ ಹೇಳೀದರು.