ಜೆಮ್‌ಶೆಡ್‌ಪುರ ವಿರುದ್ಧ ಗೆಲುವು, ದಾಖಲೆ ಬರೆದ ಗೋವಾ FC!
ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಹಮಾಲೀಕತ್ವದ ಗೋವಾ ತಂಡ ಹೊಸ ದಾಖಲೆ ಬರೆದಿದೆ. ಕೊಹ್ಲಿ ರೀತಿಯಲ್ಲಿ ಅಬ್ಬರಿಸುತ್ತಿರುವ ಗೋವಾ ತಂಡದ ನೂತನ ದಾಖಲೆ ಏನು? ಇಲ್ಲಿದೆ ವಿವರ.
ಜೆಮ್‌ಶೆಡ್‌ಪುರ(ಫೆ.19): ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಗೋವಾ ಎಫ್‌ಸಿ ಪ್ರಾಬಲ್ಯ ಮುಂದುವರಿಸಿದೆ. ಜೆಮ್‌ಶೆಡ್‌ಪುರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಗೋವಾ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಇದರ ಜೊತೆಗೆ ಎಎಫ್ ಸಿ ಚಾಂಪಿಯನ್ಸ್ ಲೀಗ್ ಗೆ ಅರ್ಹತೆ ಪಡೆದ ಭಾರತದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಅಲ್ಲದೆ 46 ಗೋಲುಗಳನ್ನು ಗಳಿಸಿ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಗೋಲುಗಳನ್ನು ಗಳಿಸಿದ ತಂಡವೆನಿಸಿತು.
ಹೈದರಾಬಾದ್-ನಾರ್ಥ್ ಈಸ್ಟ್ ಹೋರಾಟ, ಗೆದ್ದರೂ ಸೋತರೂ ಯಾರಿಗಿಲ್ಲ ನಷ್ಟ!
ನಿರೀಕ್ಷೆಯಂತೆ ಗೋವಾ ತಂಡ ಪ್ರಥಮಾರ್ಧದಲ್ಲಿ ಮೇಲುಗಯ ಸಾಧಿಸಿತು. 11ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಗಳಿಸಿದ ಗೋಲಿನಿಂದ ಪ್ರವಾಸಿ ತಂಡ ಮೇಲುಗೈ ಸಾಧಿಸಿತು, ಜೆಮ್ಷೆಡ್ಪುರ ಮಾಡಿದ ಪ್ರಮಾದಕ್ಕೆ ತಕ್ಕೆ ಬೆಲೆ ತೆರಬೇಕಾಯಿತಿ. 23ನೇ ನಿಮಿಷದಲ್ಲಿ ಟಾಟಾ ಪಡೆಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ದೇವಿಡ್ ಗ್ರಾಂಡ್ 6 ಅಡಿಗಳ ಅಂತರದಲ್ಲಿ ಮುಕ್ತವಾಗಿ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿದರು.
ಪಂದ್ಯದಲ್ಲಿ 7 ಕಿ.ಮೀ ಓಡ್ತಾರೆ ಮೆಸ್ಸಿ, ಫುಟ್ಬಾಲ್ ದಿಗ್ಗಜರನ್ನೇ ಮೀರಿಸಿದ್ರು ಕೊಹ್ಲಿ!
ಜೆಮ್ಷೆಡ್ಪುರ ತನ್ನ ಆಕ್ರಮಣಕಾರಿ ಆಟ ಮುಂದುವರಿಸಿತು. ಆದರೆ ಫಲ ಸಿಗಲಿಲ್ಲ, ಲೀಗ್ ನಲ್ಲಿ 14ನೇ ಗೋಲು ಗಳಿಸಿದ ಕೊರೊಮಿನಾಸ್ ಎಟಿಕೆ ತಂಡದ ರಾಯ್ ಕೃಷ್ಣ ಅವರೊಂದಿಗೆ ಅಗ್ರ ಸ್ಥಾನ ಹಂಚಿಕೊಂಡರು, ಈ ಬಾರಿ ಗೋಲ್ಡನ್ ಶೂ ಸ್ಪರ್ಧೆಗೆ ಸಾಕಷ್ಟು ಪೈಪೋಟಿ ಇರುವುದು ಸ್ಪಷ್ಟವಾಯಿತು.
ಫೆರಾನ್ ಕೊರೊಮಿನಾಸ್ (11ನೇ ನಿಮಿಷ), ಹ್ಯುಗೋ ಬೌಮಾಸ್ (70 ಮತ್ತು 90ನೇ ನಿಮಿಷ), ಜಾಕಿಚಾನ್ ಸಿಂಗ್ (84ನೇ ನಿಮಿಷ) ಮತ್ತು ಮೌರ್ಥದಾ ಫಾಲ್ (87ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್‌ಶೆಡ್‌ಪುರ ಎಫ್ ಸಿ ತಂಡವನ್ನು 5-0 ಗೋಲುಗಳ ಅಂತರದಲ್ಲಿ ಮಣಿಸಿತು.