ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಇದು ಕಲ್ಲರಳಿ ಹೂವಾದ ಕತೆ. ಬಡತನವನ್ನೇ ಬೆನ್ನಿಗೆ ಕಟ್ಟಿಕೊಂಡು ಬೆಳೆದ ಲಿವರ್‌ಪೋಲ್ ಫುಟ್ಬಾಲ್ ದಿಗ್ಗಜ ಸದಿಯೋ ಮಾನೆ ಈಗ ಮನಸ್ಸು ಮಾಡಿದರೆ ವಾರಕ್ಕೆ ನೂರೈವತ್ತು ಐಫೋನ್ ಕೊಂಡುಕೊಳ್ಳುವ ಸಾಮರ್ಥ್ಯವಿದೆ. ಆದರೆ ಈಗಲೂ ಸದಿಯೋ ಮಾನೆ ಬಳಸುತ್ತಿರುವುದು ಮುರುಕಲು ಫೋನನ್ನು. ಯಾಕೆ ಹೀಗೆ..? ಯಾರೀತ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

inspiration story on Liverpool football legend Sadio mane by ramakanth aryan

ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಸದಿಯೋ ಮಾನೆ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ. Liverpool ಎನ್ನುವ ಶ್ರೀಮಂತ ಫುಟ್ಬಾಲ್ ಕ್ಲಬ್‌ಗೆ ಜೀವವೇ ಆಗಿ ಆಡುತ್ತಾನೆ. ಇವನ ಶ್ರೀಮಂತಿಕೆ ಬಗ್ಗೆ‌ ಬರೆದರೆ ಅದು ಒಂದು ವಿಷಯಾನೇ ಅಲ್ಲ. ಹೃದಯ ಶ್ರೀಮಂತಿಕೆ ಬಗ್ಗೆ ಬರೆದರೆ‌ ಅರ್ಥ ಸಿಗಬಹುದೇನೋ?

ಇವನು ಡೇವಿಡ್ ಬೆಕ್ ಹ್ಯಾಮ್‌ನಂತೆ ಸೊಗಸುಗಾರನೂ ಅಲ್ಲ, ಕ್ರಿಶ್ಚಿಯಾನೋ ರೊನಾಲ್ಡೋನಂತೆ ಮೋಜುಗಾರನೂ ಅಲ್ಲ. ಶೋಕಿಗೂ ಇವನಿಗೂ ಆಗಿಬರೋದೇ ಇಲ್ಲ. ತುಂಬಾನೇ ಡಿಫರೆಂಟಾಗಿ ಬದುಕುತ್ತಿರೋ ಆಸಾಮಿ. ಒಂದು ವಾರಕ್ಕೆ ಇವನು 150 ಐ ಫೋನ್ ಕೊಂಡುಕೊಳ್ಳಬಲ್ಲ. ಅಷ್ಟು ತಾಕತ್ತು ಇವನ ಕಾಲ್ಚಳಕಕ್ಕೆ ಇದೆ. ಆದರೆ ತನ್ನ ಬಳಿಯಿರುವ ಫೋನ್‌ನ Screen ನುಚ್ಚು ನೂರಾಗಿದ್ದಾರೂ ಅದನ್ನೇ ಹಿಡಿದು ತಿರುಗಾಡುತ್ತಾನೆ. ಯಾಕೆ ಗೊತ್ತಾ ? ಅವನಿಗೆ ಅಗತ್ಯ ಮತ್ತು ಬೇಕುಗಳ ನಡುವಿನ ವ್ಯತ್ಯಾಸ ತುಂಬಾ ಚೆನ್ನಾಗಿ ಗೊತ್ತು.

inspiration story on Liverpool football legend Sadio mane by ramakanth aryan

ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್‌ ವಿರುದ್ಧ ಹೊಡೆದಿದ್ದು ಸೆಂಚುರಿ..!

ನಯಾಪೈಸೆ ಸಂಪಾದಿಸದೇ ಮಾರ್ಕೆಟ್‌ನಲ್ಲಿ ಬರುವ ಬ್ರಾಂಡ್ ನ್ಯೂ ಐಫೋನ್ ಕೊಂಡುಕೊಳ್ಳುವವರ ಮಧ್ಯೆ ಸದಿಯೋ ಮಾನೆ ಮುರುಕಲು ಫೋನ್ ಹಿಡಿದು ತಿರುಗಾಡುವುದಕ್ಕೆ ಒಂದು ಅರ್ಥ ಇದೆ. ಶ್ರೀಮಂತ ಆಟಗಾರರು, ಶ್ರೀಮಂತರು ಇವನ Dictionaryಯನ್ನ ಒಮ್ಮೆಯಾದರೂ ಓದಿಕೊಳ್ಳಬೇಕು. ಸೆನೆಗಲ್‌ನ ಈ ಪ್ರಜೆ ಕಟ್ಟರ್ ಮುಸ್ಲಿಂ. ಪ್ರತೀ ಬಾರಿ ಗೋಲು ಹೊಡೆದಾಗಲೂ ಅಲ್ಲಾಹ್ ನಿಗೆ ಸುಜೂದ್ ಮಾಡುತ್ತಾನೆ. ತೀರಾ ಇತ್ತೀಚೆಗೆ ಲೀಸೆಸ್ಟರ್ ವಿರುದ್ಧ ಗೋಲು ಹೊಡೆದ ಅದೇ ದಿನ ಇವನು ಸ್ಥಳೀಯ ಮಸೀದಿಯಲ್ಲಿ ಟಾಯ್ಲೆಟ್ ತೊಳೆಯುತ್ತಿದ್ದ. ಯಾಕೋ ವಿಪರೀತ Down to earth ಎನಿಸಿಬಿಟ್ಟಿದ್ದ.

ಸುಮ್ಮನೆ ಇವನ ವರ್ಷದ ಸ್ಯಾಲರಿ ಹೇಳಿರುತ್ತೇನೆ. ನೆನಪಿಟ್ಟುಕೊಳ್ಳಿ. 7.8 ಮಿಲಿಯನ್ ಯೂರೋ. ರುಪಾಯಿಗಳಲ್ಲಿ 61ಕೋಟಿ 45ಲಕ್ಷದ 54 ಸಾವಿರದ 200 ಅಷ್ಟೇ! ಸಾಲದಾ? ಇವನು ಆಗರ್ಭ ಶ್ರೀಮಂತನಾ? ದೇವರಾಣೆ ಅಲ್ಲ.

ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

ಬಡತನವೆನ್ನುವ ಶಾಪ ಹುಟ್ಟಿನಿಂದಲೇ ಬೆನ್ನುಬಿದ್ದಿತ್ತು. ಅಂಗಾಲಿನ ಚರ್ಮ ಕಿತ್ತು ಹೋದರೂ ಫುಟ್ಬಾಲ್‌ಅನ್ನ ರಕ್ತದಲ್ಲಿ ತೋಯಿಸಿ ಆಡುವ ಪ್ರೀತಿ. ಫುಟ್ಬಾಲ್ ತಬ್ಬಿಕೊಂಡೇ ಬೆಳೆದವನು. ಕೂಲಿ ಮಾಡಿದ್ದಿದೆ. ಆಸ್ಪತ್ರೆಗೆ ದುಡ್ಡಿಲ್ಲದೇ ಜ್ವರದಲ್ಲಿ ಮನೆಯಲ್ಲೇ ಒದ್ದಾಡಿದ್ದಿದೆ. ಅಸಲಿಗೆ ಸ್ಕೂಲ್‌ಗೆ ದುಡ್ಡಿಲ್ಲದೇ‌ ಶಿಕ್ಷಣವೇ ಆಗಲಿಲ್ಲ. ಆದರೆ ತಬ್ಬಿಕೊಂಡೇ ಮಲಗಿದ್ದ ಫುಟ್ ಬಾಲ್ ಇತ್ತಲ್ಲ. ಅದು ಶ್ರೀಮಂತಿಕೆ ಅವನ‌‌ ಕಾಲಬುಡದಲ್ಲಿ ಒದ್ದಾಡುವಂತೆ ಮಾಡಿತ್ತು. ತುಂಡು ಬ್ರೆಡ್ಡಿಗೆ ಗತಿಯಿಲ್ಲದೇ ನೀರನ್ನೇ ಕುಡಿದು ಮಲಗಿದವನು ಸದಿಯೋ ಮಾನೆ. ಈಗ ಮನಸ್ಸು ಮಾಡಿದರೆ ಹತ್ತು ಬಣ್ಣ ಬಣ್ಣದ ಫೆರಾರಿ ಕಾರುಗಳಲ್ಲಿ ಅಡ್ಡಾಡಬಲ್ಲ. ಆದರೆ ಅವನು ಹಾಗಲ್ಲ.

inspiration story on Liverpool football legend Sadio mane by ramakanth aryan

'ನನಗೆ 10 ಫೆರಾರಿ, 20 ಡೈಮಂಡ್ ವಾಚ್ ಅಥವಾ 2 Plane ಯಾಕೆ‌ ಬೇಕು. ಇದು ನನಗೆ ಅಥವಾ ಪ್ರಪಂಚಕ್ಕೆ ಏನು ಮಾಡಬಲ್ಲದು. ಹಸಿದೇ ಮಲಗಿದ್ದೇನೆ. ಅಸಲಿಗೆ ಓದಲೇ ಇಲ್ಲ. ನನ್ನ ಜನಕ್ಕೆ‌ ಸಹಾಯ ಮಾಡುವಷ್ಟು ಶಕ್ತಿಯನ್ನ ಫುಟ್ಬಾಲ್ ಕೊಟ್ಟಿದೆ. ಅಷ್ಟೇ ಸಾಕು' ಎಂದು ಬಿಡುತ್ತಾನೆ. ಇವನು ಮಾಡುತ್ತಿರೋ ಕೆಲಸಗಳೇನು ಗೊತ್ತಾ? ಇವನ ಊರಿನ ಜನಕ್ಕೆ ಸ್ಕೂಲ್‌ ಕಟ್ಟಿದ್ದಾನೆ. ಆಸ್ಪತ್ರೆ ಕಟ್ಟಿದ್ದಾನೆ. ಚಂದದ ಸ್ಟೇಡಿಯಂ ಇವನೇ ನಿಂತು ನಿರ್ಮಿಸಿದ್ದಾನೆ. ಬಟ್ಟೆ ಇಲ್ಲದವರಿಗೆ ಬಟ್ಟೆ. ಅಂಗಾಲು ಹರಿದೇ ಓಡಾಡುವವರಿಗೆ ಶೂ, ಹಸಿವೆಂದವರಿಗೆ ಅನ್ನವೇ ಆಗಿದ್ದಾನೆ. ಹಸಿವೇ‌ ಕಲಿಸಿದ ಪಾಠಗಳಿರಬೇಕು!

'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!

ಸೆನೆಗಲ್‌ನ ಕಡುಕೆಟ್ಟ ಬಡತನದ ಜಾಗಕ್ಕೆ ಹೋಗಿ 70 ಯೂರೋಗಳನ್ನ ಪ್ರತಿಯೊಬ್ಬರಿಗೂ ಕೊಟ್ಟು ಬರುತ್ತಾನೆ. ಅಷ್ಟರ ಮಟ್ಟಿಗೆ ಅವನ ಮನಸೇ‌ ಧನ್ಯ. ಉಂಡವರ ಕಣ್ಣ ಆನಂದದಲ್ಲಿ ಆತ್ಮತೃಪ್ತಿ ಕಂಡುಕೊಳ್ಳುತ್ತಾನೆ. ನನಗೆ luxury cars, luxury homes, trips ಮತ್ತು plane ಗಳ ಶೋಕಿ ಇಲ್ಲ. ನನ್ನ ಜನ ನನ್ನ ಆದಾಯದ ಸಣ್ಣ ಪಾಲನ್ನ ಪಡೆದುಕೊಂಡರೆ ಅಷ್ಟಕ್ಕೇ‌ ನಾನು ಧನ್ಯ ಎಂದು ಬಿಡುತ್ತಾನೆ. ಅದು ಸದಿಯೋ ಮಾನೆಯ ತಾಯಿ ಹೃದಯಕ್ಕೆ ಮಾತ್ರ ಸಾಧ್ಯವಾಗುವಂತದ್ದು. ನಾನಷ್ಟೇ ಗೆಲ್ಲಬೇಕು ಅಂದುಕೊಳ್ಳುವವನು ಚಾಂಪಿಯನ್. ನನ್ನವರೆಲ್ಲರೂ ಗೆಲ್ಲಬೇಕು ಎಂದುಕೊಳ್ಳುವವನು ಜೀವನದ‌ ಚಾಂಪಿಯನ್...

ಇರುವುದೆಲ್ಲವ ಬಿಟ್ಟು ಇರದವರೆಡೆಗೆ ಮಿಡಿಯುವುದೇ ಜೀವನ ಅಂತ ಹೇಳುತ್ತಿದ್ದಾನಾ ಸದಿಯೋ?...ಗೊತ್ತಿಲ್ಲ. ಸಾಧ್ಯವಾದರೆ ಹಂಚಿ. ಹೃದಯಗಳು ಶ್ರೀಮಂತವಾಗಲಿ.

ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios