ಜಾರ್ಖಂಡ್(ಮೇ.23): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣಕ್ಕೆ ಹೊಡೆತಕ್ಕೆ ಅದೆಷ್ಟೋ ಜೀವಗಳು ನಲುಗುತ್ತಿದೆ. ಇದರಲ್ಲಿ ಒಂದೆರೆಡು ಬೆಳಕಿಗೆ ಬಂದರೆ ಇನ್ನುಳಿದ ಸಂಕಷ್ಟ ಸರಮಾಲೆಗಳು ಯಾರ ಕಣ್ಣಿಗೂ ಕಾಣದೆ ಉಳಿಯುತ್ತಿದೆ. ಇದೀಗ ಭಾರತೀಯ ಫುಟ್ಬಾಲ್ ತಂಡದ ಪ್ರತಿಭಾನ್ವಿತ ಆಟಗಾರ್ತಿ ಸಂಗೀತಾ ಸೊರೆನ್ ಕತೆ ಹೀಗೆ ಆಗಿದೆ. ಭಾರತ ತಂಡದಲ್ಲಿ ಮಿಂಚಬೇಕಿದ್ದ ಪ್ರತಿಭೆ ಇದೀಗ ಜೀವನ ನಿರ್ವಹಣೆಗೆ  ಇಟ್ಟಿಗೆ ತಯಾರಿಕೆ ಕಂಪನಿಯಲ್ಲಿ ದಿನಗೂಲಿ ಕೆಲಸ ಮಾಡುವ ಸ್ಥಿತಿ ಬಂದೊದಿಗಿದೆ.

2022ರಲ್ಲಿ ಭಾರತದಲ್ಲಿ ಫಿಫಾ ಅಂಡರ್‌ 17 ವಿಶ್ವಕಪ್‌

ಸಂಗೀತಾ ಸೊರೆನ್. ಈ ಹೆಸರು ಭಾರತಕ್ಕೆ ಕೊರೋನಾ ವಕ್ಕರಿಸುವ ಮೊದಲು ಭಾರಿ ಸದ್ದು ಮಾಡಿತ್ತು. ಕಾರಣ 20 ವರ್ಷದ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ್ತಿಯ ಮಿಂಚಿನ ಪ್ರದರ್ಶನದಿಂದ ಎಲ್ಲರ ಗಮನಸೆಳೆದಿದ್ದರು. ಇಷ್ಟೇ ಅಲ್ಲ ಕಳೆದ ವರ್ಷ ಭಾರತ ಹಿರಿಯ ಮಹಿಳಾ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಳು. ಭಾರತ ಸಾಲು ಸಾಲು ಸರಣಿಗೆ ಸಂಗೀತಾ ಉಪಸ್ಥಿತಿ ತಂಡಕ್ಕೆ ಅತ್ಯವಶ್ಯಕ ಅನ್ನೋ ಮಟ್ಟಿಗೆ ಆಯ್ಕೆ ಸಮಿತಿ ಈ ಪ್ರತಿಭೆ ಮೇಲೆ ಭರವಸೆ ಇಟ್ಟಿದೆ.

ಅಂಡರ್ 17, ಅಂಡರ್ 19 ತಂಡದ ಮೂಲ ಭಾರತ ಪ್ರತಿನಿಧಿಸಿದ್ದ ಸಂಗೀತಾ, ಏಷ್ಯನ್ ಅಂಡರ್ 17 ತಂಡಕ್ಕೆ ಆಯ್ಕೆಯಾದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದರೆ ಪರಿಸ್ಥಿತಿ ಹಾಗಿಲ್ಲ ನೋಡಿ. ಕೊರೋನಾ ವಕ್ಕರಿಸಿತು. ಇತ್ತ ಫುಟ್ಬಾಲ್ ಸೇರಿದಂತೆ ಎಲ್ಲಾ ಟೂರ್ನಿಗಳು ಸ್ಥಗಿತಗೊಂಡಿತು. ಪರಿಣಾಣ ಸಂಗೀತಾ ಮನೆಯಲ್ಲೇ ಉಳಿಯಬೇಕಾಯಿತು. ಸಂಗೀತಾ ಕಡು ಬಡತನದಲ್ಲೇ ಬೆಳೆದ ಪ್ರತಿಭೆ.

ಕೊರೋನಾ ನಿಯಮ ಉಲ್ಲಂಘನೆ; ತಕ್ಷಣವೆ ಮಾಲ್ಡೀವ್ಸ್ ತೊರೆಯಲು ಬೆಂಗಳೂರು FCಗೆ ವಾರ್ನಿಂಗ್!.

ಸಂಗೀತಾ ತಂದೆ ದಿಬು ಸೊರೆನೆಗೆ ಕಣ್ಣಿನ ಸಮಸ್ಯೆ ಇದೆ. ಹೀಗಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಂಗೀತಾ ತಾಯಿ ಹಾಗೂ ಸಹೋದರ ಜಾರ್ಖಂಡ್‌ನ ಧನಬಾದ್‌ನಲ್ಲಿ ಇಟ್ಟಿಗೆ ತಯಾರಿಕೆ ಘಟಕದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕುಟಂಬ ನಿರ್ವಹಣೆ, ತಂದೆಯ ಚಿಕಿತ್ಸೆ, ತನ್ನ ಫುಟ್ಬಾಲ್ ಅಭ್ಯಾಸ, ಶೂ, ಸೇರಿದಂತೆ ಇತರ ಖರ್ಚುಗಳಿಗೆ ಆದಾಯ ಸಾಕಾಗುತ್ತಿಲ್ಲ. ಹೀಗಾಗಿ ಸಂಗೀತಾ ಕೂಡ ತಾಯಿ, ಸಹೋದರನ ಜೊತೆ ದಿನಗೂಲಿ ನೌಕರಳಾಗಿ ಇಟ್ಟಿಗೆ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ದಿನಗೂಲಿ ಕೆಲಸಕ್ಕೆ ಸೇರಿಕೊಂಡಿರುವ ಸಂಗೀತಾ ತನ್ನ ಅಭ್ಯಾಸ ನಿಲ್ಲಿಸಿಲ್ಲ. ಮುಂದೊಂದು ದಿನ ಪರಿಸ್ಥಿತಿ ಸುಧಾರಿಸಲಿದೆ. ತಾನು ಭಾರತದ ಪರ ಅತ್ಯುತ್ತಮ ಫುಟ್ಬಾಲ್ ಆಟಗಾರ್ತಿಯಾಗಿ ಮಿಂಚಲಿದ್ದೇನೆ ಅನ್ನೋ ವಿಶ್ವಾಸದ್ಲಿ ಸಂಗೀತಾ ಪ್ರತಿದಿನ ಮುಂಜಾನೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಅಭ್ಯಾಸದ ಬಳಿಕ ಇಟ್ಟಿಗೆ ಘಚಕದಲ್ಲಿ ಕೆಲಸಕ್ಕೆ ತೆರಳುವ ದಿನಚರಿಗೆ ಇದೀಗ ಸಂಗೀತಾ ಒಗ್ಗಿಕೊಂಡಿದ್ದಾರೆ.