2022ರಲ್ಲಿ ಭಾರತದಲ್ಲಿ ಫಿಫಾ ಅಂಡರ್ 17 ವಿಶ್ವಕಪ್
* 2022ರಲ್ಲಿ ಅಂಡರ್ 17 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
* 2020ರಲ್ಲಿ ನಡೆಯಬೇಕಿದ್ದ ಫಿಫಾ ವಿಶ್ವಕಪ್ ಟೂರ್ನಿ ಎರಡನೇ ಬಾರಿ ಮುಂದೂಡಿಕೆ.
* 2022ರ ಅಕ್ಟೋಬರ್ 11ರಿಂದ 30ರ ವರೆಗೂ ಟೂರ್ನಿ ನಡೆಯಲಿದೆ
ನವದೆಹಲಿ(ಮೇ.22): 2020ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್-17 ಮಹಿಳಾ ವಿಶ್ವಕಪ್ ಟೂರ್ನಿಯನ್ನು 2020ರಲ್ಲಿ ನಡೆಸುವುದಾಗಿ ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫಿಫಾ) ತಿಳಿಸಿದೆ.
ಕೊರೋನಾ ವೈರಸ್ ಭೀತಿದಿಂದಾಗಿ 2020ರ ಟೂರ್ನಿಯನ್ನು 2021ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಟೂರ್ನಿ ಮುಂದೂಡಲ್ಪಟ್ಟಿದೆ. 2022ರ ಅಕ್ಟೋಬರ್ 11ರಿಂದ 30ರ ವರೆಗೂ ಟೂರ್ನಿ ನಡೆಯಲಿದೆ ಎಂದು ಫಿಫಾ ತಿಳಿಸಿದೆ. ಈ ಮೊದಲು 2017ರಲ್ಲಿ ಭಾರತವು ಕೋಲ್ಕತ, ನವದೆಹಲಿ ಸೇರಿದಂತೆ 6 ನಗರಗಳಲ್ಲಿ ಅಂಡರ್ 17 ಫಿಫಾ ವಿಶ್ವಕಪ್ ಟೂರ್ನಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿ ಸೈ ಎನಿಸಿಕೊಂಡಿತ್ತು.
ಜೂನಿಯರ್ ಮಹಿಳಾ ಫುಟ್ಬಾಲ್ ವಿಶ್ವಕಪ್ ಮತ್ತೆ ಮುಂದಕ್ಕೆ..?
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ 71ನೇ ಫಿಫಾ ಕಾಂಗ್ರೆಸ್ ಕೌನ್ಸಿಲ್ ಸಭೆಯಲ್ಲಿ 2023ರ ಮಹಿಳಾ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಯಿತು. 2023ರ ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ದೇಶಗಳು ಆತಿಥ್ಯವನ್ನು ವಹಿಸಿದ್ದು, ಜುಲೈ 20ರಿಂದ ಆಗಸ್ಟ್ 20ರವರೆಗೆ ನಡೆಯಲಿದೆ.