ಐಎಸ್‌ಎಲ್: ಬಿಎಫ್‌ಸಿ, ಹೈದ್ರಾಬಾದ್ 1-1 ಡ್ರಾ
ಹೈದ್ರಾಬಾದ್‌ನ ಯಾಸಿರ್ 35ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ರ್‍ಯಾನ್ ವಿಲಿಯಮ್ಸ್ 58ನೇ ನಿಮಿಷದಲ್ಲಿ ಗೋಲು ಹೊಡೆದು ಬಿಎಫ್‌ಸಿಗೆ ಸಮಬಲಗೊಳಿಸಲು ನೆರವಾದರು. ಬಿಎಫ್‌ಸಿ ಈ ವರೆಗೆ 6 ಪಂದ್ಯಗಳನ್ನಾಡಿದ್ದು, ಕೇವಲ 1 ಪಂದ್ಯ ಗೆದ್ದು 5 ಅಂಕದೊಂದಿಗೆ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಹೈದರಾಬಾದ್: ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್(ಐಎಸ್‌ಎಲ್)ನಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ನೀರಸ ಪ್ರದರ್ಶನ ಮುಂದುವರಿಸಿದೆ. ಶನಿವಾರ ಹೈದರಾಬಾದ್ ಎಫ್‌ಸಿ ವಿರುದ್ಧ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ 1-1 ಗೋಲಿನ ಡ್ರಾಗೆ ತೃಪ್ತಿಪಟ್ಟುಕೊಂಡಿತು.
ಹೈದ್ರಾಬಾದ್‌ನ ಯಾಸಿರ್ 35ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ರ್‍ಯಾನ್ ವಿಲಿಯಮ್ಸ್ 58ನೇ ನಿಮಿಷದಲ್ಲಿ ಗೋಲು ಹೊಡೆದು ಬಿಎಫ್‌ಸಿಗೆ ಸಮಬಲಗೊಳಿಸಲು ನೆರವಾದರು. ಬಿಎಫ್‌ಸಿ ಈ ವರೆಗೆ 6 ಪಂದ್ಯಗಳನ್ನಾಡಿದ್ದು, ಕೇವಲ 1 ಪಂದ್ಯ ಗೆದ್ದು 5 ಅಂಕದೊಂದಿಗೆ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಒಂದೂ ಗೆಲುವು ಕಾಣದ ಹೈದ್ರಾಬಾದ್ 2 ಅಂಕದೊಂದಿಗೆ 11ನೇ ಸ್ಥಾನದಲ್ಲೇ ಬಾಕಿಯಾಗಿದೆ.
ರಾಜ್ಯ ಬಾಸ್ಕೆಟ್‌ಬಾಲ್: ಡಿವೈಇಎಸ್‌ಗೆ ಗೆಲುವು
ಬೆಂಗಳೂರು: ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಅಸೋಸಿಯೇಷನ್ ಕಪ್ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ದಾವಣಗೆರೆ ಬಿಸಿ, ಹೊಯ್ಸಳ ಹಾಸನ, ಡಿವೈಇಸ್ ಬೆಂಗಳೂರು, ರೋವರ್ಸ್ ಧಾರವಾಡ, ಯಂಗ್ ಬುಲ್ಸ್, ವಿಬಿಸಿ ಮಂಡ್ಯ ತಂಡಗಳು ಗೆಲುವು ಸಾಧಿಸಿದವು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ವ್ಯಾನ್‌ಗಾರ್ಡ್ಸ್, ದೇವಾಂಗ, ಡಿವೈಇಸ್ ಬೆಂಗಳೂರು ಹಾಗೂ ಸಿಜೆಸಿ ತಂಡ ಜಯಗಳಿಸಿದವು.
ICC World Cup 2023: ಅಗ್ರಸ್ಥಾನಕ್ಕೆ ಭಾರತ vs ದಕ್ಷಿಣ ಆಫ್ರಿಕಾ ಫೈಟ್!
ಬೋಪಣ್ಣ ಪ್ಯಾರಿಸ್ ಮಾಸ್ಟರ್ಸ್ ಫೈನಲ್‌ಗೆ
ಪ್ಯಾರಿಸ್: ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್ ಬೋಪಣ್ಣ ಅವರು ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಕಣಕ್ಕಿಳಿದಿರುವ 43ರ ಬೋಪಣ್ಣ, ಶನಿವಾರ ಸೆಮಿಫೈನಲ್‌ನಲ್ಲಿ ಫಿನ್ಲೆಂಡ್‌ನ ಹ್ಯಾರಿ ಹೆಲಿಯೊವಾರ-ಕ್ರೊವೇಷಿಯಾದ ಮೇಟ್ ಪಾವಿಚ್ ವಿರುದ್ಧ 6-7(3), 6-4, 10-6 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಒಂದು ವೇಳೆ ಬೋಪಣ್ಣ-ಎಬ್ಡೆನ್ ಜೋಡಿ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದರೆ ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವ ಸಾಧ್ಯತೆಯಿದೆ.
'ಪ್ರತಿ ಬಾಲ್‌ಗೂ....': ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶ..!
ವನಿತಾ ಏಷ್ಯನ್ ಹಾಕಿ: 4ನೇ ಬಾರಿ ಫೈನಲ್ ಪ್ರವೇಶಿಸಿದ ಭಾರತ!
ರಾಂಚಿ: 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಶನಿವಾರ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತಕ್ಕೆ, 3 ಬಾರಿ ಚಾಂಪಿಯನ್ ದಕ್ಷಿಣ ಕೊರಿಯಾ ವಿರುದ್ಧ 00 ಗೋಲುಗಳ ಗೆಲುವು ಲಭಿಸಿತು. ಪಂದ್ಯದಲ್ಲಿ ಭಾರತದ ಪರ 0000 ಗೋಲು ದಾಖಲಿಸಿದರು. ಇದರೊಂದಿಗೆ ಭಾರತ ಟೂರ್ನಿಯ ಇತಿಹಾಸದಲ್ಲಿ 4ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿತು. 2013ರಲ್ಲಿ ರನ್ನರ್-ಅಪ್ ಆಗಿದ್ದ ಭಾರತ, 2016ರಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಆ ಬಳಿಕ 2018ರಲ್ಲಿ 3ನೇ ಬಾರಿ ಫೈನಲ್‌ಗೇರಿದ್ದ ತಂಡ, ದ.ಕೊರಿಯಾ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 4ನೇ ಬಾರಿ ಫೈನಲ್‌ಗೇರುವ ದ.ಕೊರಿಯಾ ಕನಸು ಭಗ್ನಗೊಂಡಿತು.