ಏಷ್ಯನ್ ಕಪ್ ಫುಟ್ಬಾಲ್: ಅರ್ಹತಾ ಸುತ್ತಿನ 3ನೇ ಹಂತಕ್ಕೆ ಭಾರತ ಲಗ್ಗೆ
* ಆಫ್ಘಾನಿಸ್ತಾನ ಎದುರು ರೋಚಕ ಡ್ರಾ ಸಾಧಿಸಿದ ಭಾರತ ಫುಟ್ಬಾಲ್ ತಂಡ
* ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ 3ನೇ ಹಂತದ ಅರ್ಹತಾ ಸುತ್ತಿಗೆ ಭಾರತ ಲಗ್ಗೆ
* ಆಫ್ಭಾನ್ ವಿರುದ್ದದ ಪಂದ್ಯ 1-1ರ ಡ್ರಾನಲ್ಲಿ ಅಂತ್ಯ
ದೋಹಾ(ಜೂ.17): ಆಫ್ಘಾನಿಸ್ತಾನದ ಗೋಲ್ ಕೀಪರ್ ಸ್ವಂತ ಗೋಲು ಗಳಿಸಿ ನೆರವಾಗಿದ್ದರ ಪರಿಣಾಮವಾಗಿ, 1-1 ಗೋಲುಗಳಲ್ಲಿ ಡ್ರಾ ಸಾಧಿಸಿದ ಭಾರತ ಫುಟ್ಬಾಲ್ ತಂಡವು 2023ರ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ 3ನೇ ಹಂತದ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದೆ.
‘ಇ’ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ಸೋಲು ತಪ್ಪಿಸಿಕೊಂಡಿದ್ದರ ಪರಿಣಾಮ, ಗುಂಪಿನಲ್ಲಿ 3ನೇ ಸ್ಥಾನ ಪಡೆಯಿತು. ಆಫ್ಘಾನಿಸ್ತಾನ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಗರಿಷ್ಠ ಫುಟ್ಬಾಲ್ ಗೋಲು: ಟಾಪ್ 10 ಪಟ್ಟಿ ಸೇರಲು ಚೆಟ್ರಿ ತವಕ
75ನೇ ನಿಮಿಷದಲ್ಲಿ ಆಫ್ಘಾನಿಸ್ತಾನ ಗೋಲ್ ಕೀಪರ್ ಓವೈಸ್ ಅಜೀಜಿ ಸ್ವಂತ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ಬಿಟ್ಟುಕೊಟ್ಟರು. ಬಳಿಕ 81ನೇ ನಿಮಿದಲ್ಲಿ ಹುಸೇನ್ ಜಮಾನಿ ಗೋಲು ಬಾರಿಸಿ ಆಫ್ಘನ್ ಸಮಬಲ ಸಾಧಿಸಲು ನೆರವಾದರು. 2022ರಲ್ಲಿ ಅರ್ಹತಾ ಸುತ್ತಿನ 3ನೇ ಹಂತ ನಡೆಯಲಿದೆ.