Asianet Suvarna News Asianet Suvarna News

Lionel Messi Wins Ballon d'Or Award: ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೆಸ್ಸಿ..!

* ದಾಖಲೆಯ ಏಳನೇ ಬಾರಿಗೆ ಬಾಲನ್ ಡಿ ಓರ್ ಪ್ರಶಸ್ತಿ ಜಯಿಸಿದ್ದ ಮೆಸ್ಸಿ

* ಕ್ರಿಸ್ಟಿಯಾನೋ ರೊನಾಲ್ಡೋ ಹಿಂದಿಕ್ಕಿ ಹೊಸ ದಾಖಲೆ ಬರೆದ ಮೆಸ್ಸಿ

* ಸ್ಪೇನ್‌ನ ಅಲೆಕ್ಸಿಯಾ ಫುಟೆಲ್ಲಾಸ್‌ ಮಹಿಳಾ ವಿಭಾಗದಲ್ಲಿ ಬಾಲನ್‌ ಡಿ ಓರ್ ಪ್ರಶಸ್ತಿ

Football Legend Lionel Messi wins Ballon d Or for seventh time kvn
Author
Bengaluru, First Published Nov 30, 2021, 6:14 PM IST

ಪ್ಯಾರಿಸ್‌(ನ.30): ಫುಟ್ಬಾಲ್ ದಂತಕಥೆ ಹಾಗೂ ಅರ್ಜಿಂಟೀನಾ ತಂಡದ ತಾರಾ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಸೋಮವಾರ(ನ.29) ಪ್ಯಾರಿಸ್‌ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ದಾಖಲೆಯ ಏಳನೇ ಬಾರಿಗೆ ಪುರುಷರ ಬಾಲನ್ ಡಿ ಓರ್ (Ballon d'Or) ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಫುಟ್ಬಾಲ್‌ ಇತಿಹಾಸದಲ್ಲಿ ನಂ.10 ಜೆರ್ಸಿಯ ದಿಗ್ಗಜ ಫುಟ್ಬಾಲಿಗ ಹೊಸ ದಾಖಲೆ ನಿರ್ಮಿಸಿದ್ದಾರೆ. ಇನ್ನು ಸ್ಪೇನ್‌ನ ಅಲೆಕ್ಸಿಯಾ ಫುಟೆಲ್ಲಾಸ್‌ (Alexia Putellas) ಮಹಿಳಾ ವಿಭಾಗದಲ್ಲಿ ಬಾಲನ್‌ ಡಿ ಓರ್ ಪ್ರಶಸ್ತಿ ಬಾಚಿಕೊಂಡಿದ್ದಾರೆ. 

ಲಿಯೋನೆಲ್ ಮೆಸ್ಸಿ ಎರಡು ವರ್ಷಗಳ ಹಿಂದೆ, ಅಂದರೆ 2019ರಲ್ಲಿ ಕೊನೆಯ ಬಾರಿಗೆ ಬಾಲನ್ ಡಿ ಓರ್ ಪ್ರಶಸ್ತಿ ಜಯಿಸಿದ್ದರು. ಕಳೆದ ವರ್ಷ ಕೋವಿಡ್ ಭೀತಿಯಿಂದಾಗಿ (Coronavirus) ಬಾಲನ್ ಡಿ ಓರ್ ಪ್ರಶಸ್ತಿ ವಿತರಣ ಕಾರ್ಯಕ್ರಮ ರದ್ದುಪಡಿಸಲಾಗಿತ್ತು. ಲಿಯೋನೆಲ್ ಮೆಸ್ಸಿ ಈ ಮೊದಲು 2009, 2010, 2011, 2012 ಹಾಗೂ 2015ರಲ್ಲಿ ಬಾಲನ್ ಡಿ ಓರ್ ಪ್ರಶಸ್ತಿ ಜಯಿಸಿದ್ದರು. 

ಆಕ್ರೋಶದಿಂದ ಬಿಯರ್ ಎಸೆದ ಫ್ಯಾನ್ಸ್, ಕ್ಯಾಚ್ ಹಿಡಿದು ಮೈದಾನದಲ್ಲೇ ಕುಡಿದ ಫುಟ್ಬಾಲ್ ಪಟು!

34 ವರ್ಷದ ಚಿರಯುವಕ ಲಿಯೋನೆಲ್ ಮೆಸ್ಸಿ ಕಳೆದ ಆವೃತ್ತಿಯಲ್ಲಿ ಬಾರ್ಸಿಲೋನಾ ಪರ 48 ಪಂದ್ಯಗಳನ್ನಾಡಿ 38 ಗೋಲುಗಳನ್ನು ಗಳಿಸಿ ಗಮನ ಸೆಳೆದಿದ್ದರು. ಇನ್ನು ಕಳೆದ ಜುಲೈನಲ್ಲಿ ಅರ್ಜಿಂಟೀನಾ ತಂಡದ ಪರ ಪ್ರತಿಷ್ಠಿತ ಕೋಪಾ ಅಮೆರಿಕ ಟ್ರೋಫಿ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಟ್ರೋಫಿಯ ಬರ ನೀಗಿಸಿಕೊಂಡಿದ್ದರು. ಕೋಪಾ ಅಮೆರಿಕ ಟ್ರೋಫಿಯು (Copa America title) ಮಸ್ಸಿ ಸಾಧನೆಯ ಕ್ರಿರೀಟಕ್ಕೆ ಮತ್ತಷ್ಟು ರಂಗು ಹೆಚ್ಚಿಸಿತ್ತು. ಇನ್ನು ಆಗಸ್ಟ್‌ನಲ್ಲಿ ಮೆಸ್ಸಿ ಬಾರ್ಸಿಲೋನಾ ತಂಡ ತೊರೆಯುವ ಮೂಲಕ ಫುಟ್ಬಾಲ್‌  (Football)ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಬಾರ್ಸಿಲೋನಾ ಜತೆಗಿನ ದಶಕಗಳ ದೀರ್ಘಕಾಲಿಕ ಒಡನಾಡ ತೊರೆದು ಮೆಸ್ಸಿ ಆಗಸ್ಟ್‌ನಲ್ಲಿ ಪ್ಯಾರಿಸ್‌ ಸೈಂಟ್ ಜರ್ಮನ್ (Paris St Germain) ತಂಡ ಕೂಡಿಕೊಂಡಿದ್ದರು.

ಇಂಗ್ಲೆಂಡ್ ಮಣಿಸಿ ಯುರೋ ಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿ

ಲಿಯೋನೆಲ್ ಮೆಸ್ಸಿ ಇದುವರೆಗೂ ಪ್ಯಾರಿಸ್‌ ಸೈಂಟ್ ಜರ್ಮನ್ ಪರ 11 ಪಂದ್ಯಗಳನ್ನಾಡಿ 4 ಗೋಲುಗಳನ್ನು ಬಾರಿಸಿದ್ದಾರೆ. ಆದರೆ ಅಭಿಮಾನಿಗಳಿಗೆ ಮೆಸ್ಸಿ ಮೇಲಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಅಭಿಮಾನಿಗಳು ಮೆಸ್ಸಿಯನ್ನು ಈ ಹಿಂದೆ ಆರಾಧಿಸಿದಂತೆ ಈಗಲೇ ಮೆಸ್ಸಿಯನ್ನು ಮೈದಾನದಲ್ಲಿ ಬೆಂಬಲಿಸುತ್ತಿದ್ದಾರೆ. 

ಮದುವೆಯಾಗದೇ 6ನೇ ಮಗುವಿಗೆ ತಂದೆಯಾಗಲಿದ್ದಾರೆ Cristiano Ronaldo...!

ಈ ಬಾರಿ ಲಿಯೋನೆಲ್‌ ಮೆಸ್ಸಿ ತಮ್ಮ ಬದ್ದ ಎದುರಾಳಿ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗಿಂತ ಎರಡು ಬಾರಿಸಿ ಹೆಚ್ಚಿಗೆ ಬಾಲನ್‌ ಡಿ ಓರ್‌ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇದುವರೆಗೂ 13 ಆವೃತ್ತಿಗಳ ಪೈಕಿ 12 ಬಾರಿ ಪ್ರಶಸ್ತಿ ವಿತರಿಸಲಾಗಿದ್ದು, ಮಸ್ಸಿ 7 ಬಾರಿ ಪ್ರಶಸ್ತಿ ಜಯಿಸಿದ್ದರೇ, ಕ್ರಿಸ್ಟಿಯಾನೊ ರೊನಾಲ್ಡೋ 5 ಬಾರಿ ಪ್ರಶಸ್ತಿ ಮುತ್ತಿಕ್ಕಿದ್ದಾರೆ.

ಮಾಧ್ಯಮದವರೇ, ನಾನು ಪಂಜಾಬ್ ಮಾಜಿ ಸಿಎಂ ಅಲ್ಲವೆಂದ ಫುಟ್ಬಾಲಿಗ ಅಮ್ರಿಂದರ್‌ ಸಿಂಗ್‌..!

ಖ್ಯಾತ ಬೈರೆನ್ ಸ್ಟ್ರೈಕರ್ ರಾಬರ್ಡ್‌ ಲೆವಾಡವಾಸ್ಕಿ ವೋಟಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದರೆ, ಚೆಲ್ಸಾ ಮತ್ತು ಇಟಲಿ ಮಿಡ್‌ ಫೀಲ್ಡರ್ ಜೋರ್ಗಿನೋ ಮತಚಲಾವಣೆಯಲ್ಲಿ ಮೂರನೇ ಸ್ಥಾನಪಡೆದಿದ್ದಾರೆ. ಜಗತ್ತಿನಾದ್ಯಂತ ಪತ್ರಕರ್ತರು ಈ ಪ್ರಶಸ್ತಿಗೆ ಮತ ಚಲಾಯಿಸಿದ್ದರು. ಪೊಲೆಂಡ್‌ನ ರಾಬರ್ಡ್‌ ಲೆವಾಡವಾಸ್ಕಿ 2020ರಲ್ಲಿ 37 ಪಂದ್ಯಗಳನ್ನಾಡಿ 45 ಗೋಲುಗಳನ್ನು ಬಾರಿಸಿದ್ದಾರೆ. ರಾಬರ್ಡ್‌ ಲೆವಾಡವಾಸ್ಕಿ ಅವರಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

 

Follow Us:
Download App:
  • android
  • ios