Asianet Suvarna News Asianet Suvarna News

ಮಾಧ್ಯಮದವರೇ, ನಾನು ಪಂಜಾಬ್ ಮಾಜಿ ಸಿಎಂ ಅಲ್ಲವೆಂದ ಫುಟ್ಬಾಲಿಗ ಅಮ್ರಿಂದರ್‌ ಸಿಂಗ್‌..!

* ಪತ್ರಕರ್ತರಲ್ಲಿ ಹಾಗೂ ಮಾಧ್ಯಮದವರಲ್ಲಿ ವಿನೂತನವಾಗಿ ಮನವಿ ಮಾಡಿಕೊಂಡ ಅಮ್ರೀಂದರ್‌ ಸಿಂಗ್

* ನಾನು ಪಂಜಾಬ್‌ ಮಾಜಿ ಸಿಎಂ ಅಮರೀಂದರ್ ಸಿಂಗ್ ಅಲ್ಲವೆಂದ ಫುಟ್ಬಾಲಿಗ

* ಅಮ್ರೀಂದರ್ ಸಿಂಗ್ ಭಾರತ ಫುಟ್ಬಾಲ್ ತಂಡದ ಗೋಲು ಕೀಪರ್

My name is Amrinder Singh and I am not Punjab ex CM Says Indian Football Goal Keeper kvn
Author
New Delhi, First Published Oct 1, 2021, 4:53 PM IST
  • Facebook
  • Twitter
  • Whatsapp

ನವದೆಹಲಿ(ಅ.01): ಪಂಜಾಬ್‌ನ ರಾಜಕೀಯ ಬಿಕ್ಕಟ್ಟು ಇನ್ನೊಂದು ರೀತಿಯ ಅಚಾತುರ‍್ಯವನ್ನು ಸೃಷ್ಟಿಸಿದೆ. ಟ್ವೀಟರ್‌ನಲ್ಲಿ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ (Captain Amarinder Singh) ಅವರನ್ನು ಟ್ಯಾಗ್‌ ಮಾಡುವ ಬರದಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರು ಭಾರತೀಯ ಫುಟ್‌ಬಾಲ್‌ ತಂಡದ ಗೋಲ್‌ಕೀಪರ್‌ ಅಮ್ರಿಂದರ್‌ ಸಿಂಗ್‌ (Amrinder Singh) ಅವರಿಗೆ ಪಂಜಾಬ್‌ ಸುದ್ದಿಗಳನ್ನು ಟ್ಯಾಗ್‌ ಮಾಡಲಾಗುತ್ತಿದೆ. 

ಈ ಬಗ್ಗೆ ಮನವಿ ಮಾಡಿರುವ ಫುಟ್‌ಬಾಲ್‌ (Football) ಅಮ್ರಿಂದರ್‌ ‘ಮಾಧ್ಯಮ ಮತ್ತು ಪತ್ರಕರ್ತರೇ ನಾನು ಭಾರತೀಯ ಫುಟ್‌ಬಾಲ್‌ ತಂಡದ ಗೋಲ್‌ಕೀಪರ್‌. ಪಂಜಾಬ್‌ ರಾಜ್ಯದ ಮಾಜಿ ಮುಖ್ಯಮಂತ್ರಿ ಅಲ್ಲ. ದಯವಿಟ್ಟು ನನ್ನನ್ನು ಟ್ಯಾಗ್‌ ಮಾಡುವುದನ್ನು ನಿಲ್ಲಿಸಿ’ ಎಂದು ಮನವಿ ಮಾಡಿದ್ದಾರೆ. 

ಈ ಟ್ವೀಟ್‌ ಅನ್ನು ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಸಹ ರೀಟ್ವೀಟ್‌ ಮಾಡಿದ್ದು, ನಿಮಗೆ ನಾನು ಸಹಾನುಭೂತಿ ವ್ಯಕ್ತಪಡಿಸುತ್ತೇನೆ, ಮುಂದಿನ ಪಂದ್ಯಗಳಿಗೆ  ಶುಭ ಹಾರೈಕೆಗಳು ನನ್ನ ಯುವ ಸಹೋದರ ಎಂದು ಕ್ಯಾಪ್ಟನ್‌ ಅಮರೀಂದರ್ ಸಿಂಗ್ ಟ್ವೀಟ್‌ ಮಾಡಿದ್ದಾರೆ. 

ಕಾಂಗ್ರೆಸ್‌ಗೆ ಅಮರೀಂದರ್‌ ಗುಡ್‌ಬೈ : ಬಿಜೆಪಿ ಸೇರಲ್ಲವೆಂದು ಸ್ಪಷ್ಟನುಡಿ

ಅಮ್ರಿಂದರ್‌ ಸಿಂಗ್‌ ಇಂಡಿಯನ್ ಸೂಪರ್‌ ಲೀಗ್ (Indian Super League) ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಮೋಹನ್ ಬಗಾನ್ ಹಾಗೂ ಭಾರತ ತಂಡದ ಫುಟ್‌ಬಾಲ್‌ ಗೋಲ್‌ ಕೀಪರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್ 22 ರಂದು ನಡೆದ ಇಂಟರ್ ಝೋನಲ್‌ ಸಮಿಫೈನಲ್‌ನಲ್ಲಿ ಅಮ್ರಿಂದರ್‌ ನಸಾಪ್ ತಂಡದ ವಿರುದ್ದ ಕೊನೆಯ ಬಾರಿಗೆ ಕಣಕ್ಕಿಳಿದ್ದರು. ಈ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ತಂಡವು 6-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.

ಕಾಂಗ್ರೆಸ್‌ (Congress) ನಾಯಕ ಅಮರೀಂದರ್‌ ಸಿಂಗ್ ಈಗಾಗಲೇ ಪಂಜಾಬ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರು ಪ್ರತಿಪಕ್ಷ ಬಿಜೆಪಿಯನ್ನು ಸೇರಲಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು. ಇದಕ್ಕೆ ಪುಷ್ಠಿ ಕೊಡುವಂತೆ ಅಮರೀಂದರ್ ಸಿಂಗ್ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಸ್ಪಷ್ಟನೆ ಕೊಟ್ಟ ಅಮರೀಂದರ್ ಸಿಂಗ್ ಬಿಜೆಪಿ  ಪಕ್ಷ ಸೇರುವುದಿಲ್ಲ ಎಂದಿದ್ದಾರೆ. ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆದದ್ದು ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

Follow Us:
Download App:
  • android
  • ios