ಪಂದ್ಯದ ನಡುವೆ ಮೈದಾನದಲ್ಲೇ ಬಿಯರ್ ಕುಡಿದ ಫುಟ್ಬಾಲ್ ಪಟು ಗೋಲು ಸಿಡಿಸಿಸಿದ ಸಂಭ್ರಮಿಸಿದ ಪ್ರವಾಸಿ ತಂಡದ ಪಟು ಜ್ಯೂಡ್ ಆಕ್ರೋಶಗೊಂಡ ಅಭಿಮಾನಿಗಳಿಂದ ಬಿಯರ್ ಎಸೆತ ಸ್ಲಿಪ್ ಫೀಲ್ಡರ್‌ನಂತೆ ಕ್ಯಾಚ್ ಹಿಡಿದು ಬಿಯರ್ ಕುಡಿದ ಜ್ಯೂಡ್  

ಜರ್ಮನಿ(ಸೆ.12): ಸಂದರ್ಭ ಯಾವುದೇ ಆದರೂ ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಕಲೆ ಗೊತ್ತಿದ್ದರೆ ಎಲ್ಲೂ ಬದಕುಬಹುದು. ವಿರೋಧ, ಪ್ರತಿಭಟನೆ, ಟೀಕೆಯನ್ನೇ ಮೆಟ್ಟಿಲು ಮಾಡಿಕೊಂಡರೆ ಸಾಧನೆ ಸುಲಭ ಅನ್ನೋ ಮಾತಿದೆ. ಇದೀಗ ಬಯರ್ ಲೆವರ್‌ಕುಸೆನ್‌ನಲ್ಲಿ ನಡೆದ ಬಂಡೆಸ್ಲಿಗಾ ಫುಟ್ಬಾಲ್ ಪಂದ್ಯದಲ್ಲಿ ಇದೇ ರೀತಿ ಘಟನೆ ನಡೆದಿದೆ. 

Scroll to load tweet…

ಕೆಎಲ್ ರಾಹುಲ್ ಮೇಲೆ ಬಿಯರ್ ಬಾಟಲಿ ಕಾರ್ಕ್ ಎಸೆತ; ಇಂಗ್ಲೆಂಡ್ ಅಭಿಮಾನಿಗಳ ವರ್ತನೆಗೆ ಆಕ್ರೋಶ!

ಬೊರಿಸಿಯಾ ಡೊರ್ಟ್‌ಮಂಡ್ ತಂಡದ 18 ವರ್ಷದ ಫುಟ್ಬಾಲ್ ಪಟು ಜ್ಯೂಡ್ ಬೆಲ್ಲಿಂಗ್ಯಾಮ್ ಗೋಲಿನ ಸಂಭ್ರಮ ಆಚರಿಸಿದ್ದಾರೆ. ತಂಡದ ಸಹ ಆಟಗಾರರ ಜೊತೆ ಸೇರಿ ಸಂಭ್ರಮ ಆಚರಿಸಿದ್ದಾರೆ. ಆದರೆ ಮೈದಾನದಲ್ಲಿ ಆತಿಥೇಯ ತಂಡದ ಪ್ರೇಕ್ಷಕರು ಬೊರಿಸಿಯಾ ಡೊರ್ಟ್‌ಮಂಡ್ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಣಾಣ ಕೈಯಲ್ಲಿದ್ದ ಬಿಯರ್ ತುಂಬಿದ ಗ್ಲಾಸ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to load tweet…

ಸಂಭ್ರಮದಲ್ಲಿದ್ದ ಜ್ಯೂಡ್ ಕ್ರಿಕೆಟ್ ಫೀಲ್ಡರ್‌ನಂತೆ ಬಿಯರ್ ಗ್ಲಾಸ್ ಕ್ಯಾಚ್ ಹಿಡಿದು ಕುಡಿದಿದ್ದಾನೆ. ಆದರೆ ಮೊದಲ ಬಾರಿ ಬಿಯರ್ ಸವಿ ಕಂಡ ಜ್ಯೂಡ್‌ಗೆ ರುಚಿಸಿಲ್ಲ. ತಕ್ಷಣವೇ ಬಿಯರ್ ಹೊರಹಾಕಿದ್ದಾನೆ. ಇಷ್ಟೇ ಅಲ್ಲ ಗ್ಲಾಸ್ ಎಸೆದಿದ್ದಾನೆ. ಈ ಘಟನೆ ಆಕ್ರೋಶಗೊಂಡಿದ್ದ ಅಭಿಮಾನಿಗಳಲ್ಲಿ ನಗು ಮೂಡಿಸಿತು.

Scroll to load tweet…

ಮೈಕೈ ನೋವಿಗೆ ಬಿಯರ್ ಮದ್ದು! ಇದು ಪ್ಯಾರಾಸಿಟಮಾಲ್‌ಗಿಂತ ಹೆಚ್ಚು ಎಫೆಕ್ಟಿವ್!

ಪಂದ್ಯದ ಬಳಿಕ ಸ್ವತಃ ಜ್ಯೂಡ್ ತಮ್ಮ ಮೊದಲ ಬಿಯರ್ ಅನುಭವವನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ತಾವು ಕ್ಯಾಚ್ ಹಿಡಿದು ಬಿಯರ್ ಕುಡಿಯುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ.