* ಎಎಫ್‌ಸಿ ಫುಟ್ಬಾಲ್ ಕ್ರೀಡಾಕೂಟದಲ್ಲಿ ಬಿಎಫ್‌ಸಿ-ಎಟಿಕೆ ಮುಖಾಮುಖಿ* ಕಳೆದ 2 ವರ್ಷಗಳಿಂದ ಎಟಿಕೆ ವಿರುದ್ಧ ಬಿಎಫ್‌ಸಿ ಐಎಸ್‌ಎಲ್‌ನಲ್ಲಿ ಗೆಲುವು ಸಾಧಿಸಿಲ್ಲ* ಸುನಿಲ್‌ ಚೆಟ್ರಿ ಪಡೆಗೆ ಕಠಿಣ ಸವಾಲು ನಿರೀಕ್ಷಿಸಲಾಗಿದೆ.

ಮಾಲೆ(ಆ.18): 2021ರ ಎಎಫ್‌ಸಿ ಕಪ್‌ ಗುಂಪು ಹಂತಕ್ಕೆ ಪ್ರವೇಶಿಸಿರುವ ಬೆಂಗಳೂರು ಎಫ್‌ಸಿ, ಬುಧವಾರ ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತದ್ದೇ ತಂಡ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಸೆಣಸಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 2 ವರ್ಷಗಳಿಂದ ಎಟಿಕೆ ವಿರುದ್ಧ ಬಿಎಫ್‌ಸಿ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನಲ್ಲಿ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಸುನಿಲ್‌ ಚೆಟ್ರಿ ಪಡೆಗೆ ಕಠಿಣ ಸವಾಲು ನಿರೀಕ್ಷಿಸಲಾಗಿದೆ. ‘ಡಿ’ ಗುಂಪಿನಲ್ಲಿ ಒಟ್ಟು 4 ತಂಡಗಳಿಗದ್ದು, ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ಅಂತರ-ವಲಯ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.

ಫುಟ್ಬಾಲ್‌ ಎಎಫ್‌ಸಿ ಕಪ್‌: ಗುಂಪು ಹಂತಕ್ಕೆ ಲಗ್ಗೆಯಿಟ್ಟ ಬಿಎಫ್‌ಸಿ

Scroll to load tweet…

ಎಎಫ್‌ಸಿ ಫ್ಲೇ ಆಫ್‌ ಹಂತದ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಈಗಲ್ಸ್ ಎಫ್‌ಸಿ ಎದುರು ಬಿಎಫ್‌ಸಿ 1-0 ಗೋಲಿನ ಗೆಲುವು ದಾಖಲಿಸಿ ಗ್ರೂಪ್‌ ಹಂತಕ್ಕೆ ಲಗ್ಗೆಯಿಟ್ಟಿತ್ತು. 'ಡಿ' ಗುಂಪಿನಲ್ಲಿ ಬಿಎಫ್‌ಸಿ, ಎಟಿಕೆ, ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಹಾಗೂ ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್ ತಂಡಗಳಿವೆ.