* ಎಎಫ್‌ಸಿ ಕಪ್ ಟೂರ್ನಿಯಲ್ಲಿ ಗುಂಪುಹಂತ ಪ್ರವೇಶಿಸಿದ ಬಿಎಫ್‌ಸಿ* 'ಡಿ' ಗುಂಪಿನಲ್ಲಿ ಸ್ಥಾನ ಪಡೆದ ಬೆಂಗಳೂರು ಎಫ್‌ಸಿ* ಗುಂಪು ಹಂತದ ಮೊದಲ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ಸವಾಲು

ಮಾಲೆ(ಆ.16): 2021ರ ಎಎಫ್‌ಸಿ ಕಪ್‌ ಫುಟ್ಬಾಲ್ ಟೂರ್ನಿಯ ಗುಂಪು ಹಂತಕ್ಕೆ ಬೆಂಗಳೂರು ಫುಟ್ಬಾಲ್ ಕ್ಲಬ್‌(ಬಿಎಫ್‌ಸಿ) ತಂಡ ಅರ್ಹತೆ ಪಡೆದಿದೆ. ಭಾನುವಾರ ಇಲ್ಲಿ ನಡೆದ ಪ್ಲೇ-ಆಫ್‌ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಈಗಲ್ಸ್ ಎಫ್‌ಸಿ ತಂಡದ ವಿರುದ್ದ ಬೆಂಗಳೂರು ಎಫ್‌ಸಿ ತಂಡವು 1-0 ಗೋಲಿನ ಗೆಲುವು ದಾಖಲಿಸಿತು.

ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಪಡೆ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬುಧವಾರ ನಡೆಯಲಿರುವ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತದ ಎಟಿಕೆ ಮೋಹನ್ ಬಗಾನ್ ತಂಡವನ್ನು ಎದುರಿಸಲಿದೆ. ಭಾರತದ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Scroll to load tweet…

ಅಭಿಮಾನಿಗಳಿಗೆ ಶಾಕ್; ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ಲಿಯೋನೆಲ್ ಮೆಸ್ಸಿ ಗುಡ್ ಬೈ!

Scroll to load tweet…

ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಬಿಎಫ್‌ಸಿ ಪರ 26ನೇ ನಿಮಿಷದಲ್ಲಿ ಜಯೇಶ್‌ ರಾಣೆ ಆಕರ್ಷಕ ಗೋಲು ಬಾರಿಸಿದರು. ಬಿಎಫ್‌ಸಿಯ ರಕ್ಷಣಾ ಪಡೆಯನ್ನು ದಾಟಿ ಗೋಲು ಗಳಿಸಲು ಈಗಲ್ಸ್‌ ತಂಡಕ್ಕೆ ಸಾಧ್ಯವಾಗಲಿಲ್ಲ. 'ಡಿ' ಗುಂಪಿನಲ್ಲಿ ಬಿಎಫ್‌ಸಿ, ಎಟಿಕೆ ತಂಡಗಳ ಜತೆ ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಹಾಗೂ ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್‌ ತಂಡಗಳಿವೆ.