ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಫ್ರಾನ್ಸ್ ಹಾಗೂ ಅರ್ಜೆಂಟೀನಾ ತಂಡದ ನಡುವಿನ ಹೋರಾಟಕ್ಕೆ ವಿಶ್ವವೇ ಕಾಯುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಫ್ರಾನ್ಸ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. 

ಖತಾರ್(ಡಿ.17): ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಫ್ರಾನ್ಸ್ ಹಾಗೂ ಅರ್ಜೆಂಟೀನಾ ತಂಡ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟದಲ್ಲಿ ಯಾರಿಗೆ ಗೆಲುವು, ಯಾರಿಗೆ ಸೋಲು ಅನ್ನೋ ಲೆಕ್ಕಾಚಾರಗಳು ನಡೆಯುತ್ತಿದೆ. ಇತ್ತ ಉಭಯ ತಂಡಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಇದರ ನಡುವೆ ಫ್ರಾನ್ಸ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಫ್ರಾನ್ಸ್ ತಂಡದ ಪ್ರಮುಖ ಆಟಗಾರರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೆಲ ಆಟಗಾರರಲ್ಲಿ ವೈರಸ್ ಪತ್ತೆಯಾಗಿದೆ. ಫ್ರಾನ್ಸ್ ತಂಡದ ರಾಫೆಲ್ ವರಾನೆ ಹಾಗೂ ಇಬ್ರಾಹಿಂ ಕೊನಾಟೆಯಿಂದ ಆರಂಭಗೊಂಡ ಆರೋಗ್ಯ ಸಮಸ್ಯೆ ಇದೀಗ ತಂಡದ ಇತರರ ಆಟಗಾರರಿಗೆ ವಿಸ್ತರಿಸಿದೆ. ಇದೀಗ ಫ್ರಾನ್ಸ್ ತಂಡದ ಪ್ರಮುಖ ಆಟಗಾರರು ಅಭ್ಯಾಸದಿಂದ ಹೊರಗುಳಿದಿದ್ದಾರೆ. ಇದು ಫ್ರಾನ್ಸ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಡಯೋಟ್ ಉಪಮೆಕಾನೋ, ಆ್ಯಡ್ರಿನ್ ರಾಬೊಯ್ಟ್, ಕಿಂಗ್‌ಸ್ಲೆ ಕ್ಯಾಮನ್ ಅನಾರೋಗ್ಯದಿಂದ ಅಭ್ಯಾಸ ಪಂದ್ಯಕ್ಕೆ ಗೈರಾಗಿದ್ದಾರೆ. ಫ್ರಾನ್ಸ್ ಆಟಗಾರರಲ್ಲಿ ವೈರಸ್ ಪತ್ತೆಯಾಗಿದೆ ಅನ್ನೋ ವರದಿ ಬಹಿರಂಗವಾಗಿದೆ. ಇದೀಗ ಫ್ರಾನ್ಸ್ ಕೋಚ್ ಡಿಡಿಯರ್ ದೇಸ್ಚಾಮ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ತಂಡಕ್ಕೆ ದಾಳಿ ಇಟ್ಟಿರುವ ವೈರಸ್‌ನಿಂದ ಆಟಗಾರರಿಗೆ ರಕ್ಷಣೆ ಒದಗಿಸಲು ಎಲ್ಲಾ ಕ್ರಮಗಳನ್ನ ಕೈಗೊಂಡಿದ್ದೇವೆ. ವೈದ್ಯಕೀಯ ತಂಡ ನಿರಂತರ ನಿಗಾ ವಹಿಸಿದೆ. ಕೆಲ ಆಟಗಾರರು ಅಭ್ಯಾಸಕ್ಕೆ ಗೈರಾಗಿದ್ದಾರೆ ಎಂದಿದ್ದಾರೆ.

FIFA World Cup: 234 ಕೋಟಿ ಮೌಲ್ಯದ 4 ಬಂಗಲೆ, ಮನೆಯಲ್ಲೇ ಫುಟ್‌ಬಾಲ್‌ ಗ್ರೌಂಡ್‌, ಇದು ಮೆಸ್ಸಿಯ ಐಷಾರಾಮಿ ಜೀವನ!

ಫ್ರಾನ್ಸ್‌ 2002ರ ಬಳಿಕ ಫಿಫಾ ವಿಶ್ವಕಪ್‌ನಲ್ಲಿ ಸತತ 2ನೇ ಬಾರಿ ಫೈನಲ್‌ ಪ್ರವೇಶಿಸಿದ 2ನೇ ತಂಡ ಎನಿಸಿಕೊಂಡಿದೆ. ಬ್ರೆಜಿಲ್‌ 1994, 1998, 2002ರಲ್ಲಿ ಸತತ 3 ಬಾರಿ ಫೈನಲ್‌ ಪ್ರವೇಶಿಸಿತ್ತು. ಒಟ್ಟಾರೆ ಫ್ರಾನ್ಸ್‌ 1998ರ ಬಳಿಕ 4ನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. 1998, 2018ರಲ್ಲಿ ಚಾಂಪಿಯನ್‌ ಆಗಿದ್ದರೆ, 2006ರಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದಿತ್ತು.

ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ಫ್ರಾನ್ಸ್‌-ಅರ್ಜೆಂಟೀನಾ ಪ್ರಶಸ್ತಿಗಾಗಿ ಸೆಣಸಲಿವೆ. ಫ್ರಾನ್ಸ್‌ 4ನೇ ಬಾರಿ ಫೈನಲ್‌ಗೇರಿ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, 60 ವರ್ಷದಲ್ಲೇ ಸತತ 2ನೇ ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇನ್ನು 6ನೇ ಫೈನಲ್‌ ಆಡುತ್ತಿರುವ ಅರ್ಜೆಂಟೀನಾ ಕೂಡಾ 3ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ಕಾತರದಲ್ಲಿದೆ. ತಂಡ 1978, 1986ರಲ್ಲಿ ಚಾಂಪಿಯನ್‌ ಆಗಿದ್ದರೆ, 1930, 1990 ಹಾಗೂ 2014ರಲ್ಲಿ ರನ್ನರ್‌-ಆಪ್‌ ಆಗಿತ್ತು. ಅರ್ಜೆಂಟೀನಾ, 2002ರಲ್ಲಿ ಬ್ರೆಜಿಲ್‌ ಬಳಿಕ ಪ್ರಶಸ್ತಿ ಗೆದ್ದ ದಕ್ಷಿಣ ಅಮೆರಿಕದ ಮೊದಲ ತಂಡ ಎನಿಸಿಕೊಳ್ಳುವ ತವಕದಲ್ಲಿದೆ. ಕಳೆದ 4 ಆವೃತ್ತಿಗಳಲ್ಲಿ ಯುರೋಪಿನ ತಂಡಗಳು(ಸ್ಪೇನ್‌, ಇಟಲಿ, ಜರ್ಮನಿ, ಫ್ರಾನ್ಸ್‌) ಚಾಂಪಿಯನ್‌ ಆಗಿದ್ದವು.

FIFA World Cup 3ನೇ ಬಾರಿ ಚಾಂಪಿಯನ್‌ ಪಟ್ಟಕ್ಕೆ ಫ್ರಾನ್ಸ್‌-ಅರ್ಜೆಂಟೀನಾ ಸೆಣಸು

ಮೊರಕ್ಕೊ ಮಣಿಸಿ ಫೈನಲ್ ಪ್ರವೇಶಿಸಿದ್ದ ಫ್ರಾನ್ಸ್
ಫ್ರಾನ್ಸ್‌ ತಾನೇಕೆ ಹಾಲಿ ಚಾಂಪಿಯನ್‌ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಟೂರ್ನಿಯಲ್ಲಿ ಈ ವರೆಗೂ ಫ್ರಾನ್ಸ್‌ನ ಆಕ್ರಮಣಕಾರಿ ಆಟವನ್ನು ಹೆಚ್ಚಾಗಿ ನೋಡಿದ್ದ ಅಭಿಮಾನಿಗಳಿಗೆ ಈ ಪಂದ್ಯದಲ್ಲಿ ತಂಡದ ಬಲಶಾಲಿ ಡಿಫೆನ್ಸ್‌ನ ದರ್ಶನವಾಯಿತು. ಪಂದ್ಯದುದ್ದಕ್ಕೂ ಅತ್ಯಾಕರ್ಷಕ ರಕ್ಷಣಾ ಕೌಶಲ್ಯ ಪ್ರದರ್ಶಿಸಿದ ಫ್ರಾನ್ಸ್‌ ಆಟಗಾರರು ಮೊರಾಕ್ಕೊ ತಂಡದ ಹಲವು ಗೋಲು ಬಾರಿಸುವ ಅವಕಾಶಗಳಿಗೆ ಕಡಿವಾಣ ಹಾಕಿದರು. ಶೇ.62ರಷ್ಟುಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ, ಫ್ರಾನ್ಸ್‌ಗೆ ಹೋಲಿಸಿದರೆ 200ಕ್ಕೂ ಹೆಚ್ಚು ಪಾಸ್‌ಗಳನ್ನು ಪೂರೈಸಿದರೂ ಮೊರಾಕ್ಕೊ ಒಂದೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಫ್ರಾನ್ಸ್‌ನ ನಾಯಕ ಹಾಗೂ ಗೋಲ್‌ ಕೀಪರ್‌ ಹ್ಯುಗೊ ಲೊರಿಸ್‌ ಅವರ ಮುಂದಾಳತ್ವದ ರಕ್ಷಣಾ ಪಡೆಯನ್ನು ವಂಚಿಸಲು ಮೊರಾಕ್ಕೊ ಫಾರ್ವರ್ಡ್ಸ್ ಹಾಗೂ ಮಿಡ್‌ಫೀಲ್ಡರ್‌ಗಳು ವಿಫಲರಾದರು.