MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Football
  • FIFA World Cup: 234 ಕೋಟಿ ಮೌಲ್ಯದ 4 ಬಂಗಲೆ, ಮನೆಯಲ್ಲೇ ಫುಟ್‌ಬಾಲ್‌ ಗ್ರೌಂಡ್‌, ಇದು ಮೆಸ್ಸಿಯ ಐಷಾರಾಮಿ ಜೀವನ!

FIFA World Cup: 234 ಕೋಟಿ ಮೌಲ್ಯದ 4 ಬಂಗಲೆ, ಮನೆಯಲ್ಲೇ ಫುಟ್‌ಬಾಲ್‌ ಗ್ರೌಂಡ್‌, ಇದು ಮೆಸ್ಸಿಯ ಐಷಾರಾಮಿ ಜೀವನ!

ಜಗತ್ತು ಫಿಫಾ ವಿಶ್ವಕಪ್‌ನ ಫೈನಲ್‌ನ ನಿರೀಕ್ಷೆಯಲ್ಲಿದೆ. ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ವಿಶ್ವಕಪ್‌ ಗೆಲ್ತಾರಾ ಅನ್ನೋ ನಿರೀಕ್ಷೆಯಲ್ಲಿ ಅವರ ಅಪಾರ ಅಭಿಮಾನಿ ಬಳಗವಿದೆ. ಇನ್ನು ಮೆಸ್ಸಿ ಪಾಲಿಗೆ ಅಪಾರ ಸಂಪತ್ತಿದ್ದರೂ ಅವರಿಗೆ ಕಡಿಮೆ ಆಗಿರುವುದು ವಿಶ್ವಕಪ್‌ ಟ್ರೋಫಿ ಮಾತ್ರ. ವಿಶ್ವದ ಮೂರು ಭಿನ್ನ ದೇಶಗಳಲ್ಲಿ ನಾಲ್ಕು ಮನೆಗಳನ್ನು ಮೆಸ್ಸಿ ಹೊಂದಿದ್ದು ಇದರ ಮೌಲ್ಯವೇ 234 ಕೋಟಿ ಎನ್ನಲಾಗಿದೆ. 

2 Min read
Author : Santosh Naik
| Updated : Dec 16 2022, 12:25 PM IST
Share this Photo Gallery
  • FB
  • TW
  • Linkdin
  • Whatsapp
18

ಅರ್ಜೆಂಟೀನಾ ತಂಡದ ನಾಯಕ ಮತ್ತು ವಿಶ್ವದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಹಾಗೂ ಅವರ ಅಭಿಮಾನಿಗಳಿ ಅಪಾರ ಸಂಭ್ರಮ. ವಿಶ್ವಕಪ್‌ನಂಥ ವೇದಿಕೆಯಲ್ಲಿ ಅರ್ಜೆಂಟೀನಾ ಮಾಂತ್ರಿಕ ಆಟವಾಡುತ್ತಿದ್ದರೆ, ಅದಕ್ಕೆ ಸೂತ್ರಧಾರನಾಗಿರುವುದು ಲಿಯೋನೆಮ್‌ ಮೆಸ್ಸಿ. ತಂಡ ವಿಶ್ವಕಪ್‌ ಫೈನಲ್‌ಗೇರಲು ನಾಯಕ ಮೆಸ್ಸಿ ಆಟ ಅಪಾರವಾದ ಕೊಡುಗೆ ನೀಡಿದೆ.

28

ಇದು ತಮ್ಮ ಕೊನೆಯ ವಿಶ್ವಕಪ್ ಎಂದು 35 ವರ್ಷದ ಮೆಸ್ಸಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ತಮ್ಮ ನಾಯಕತ್ವದಲ್ಲಿ ಮೊದಲನೆಯ ಹಾಗೂ ಮೂರನೇ ಬಾರಿ ವಿಶ್ವಕಪ್‌ ಗೆಲ್ಲುವ ಇರಾದೆಯಲ್ಲಿ ಅರ್ಜೆಂಟೀನಾ ತಂಡವಿದೆ. ಅದ್ಭುತ ಆಟವಾಡಿರುವ ಮೆಸ್ಸಿ ಟೂರ್ನಿಯಲ್ಲಿ ಈವರೆಗೂ 5 ಗೋಲು ಬಾರಿಸಿದ್ದಾರೆ.
 

38

ವಿಶ್ವಕಪ್‌ನಲ್ಲಿ ಗೋಲ್ಡನ್‌ ಬೂಟ್‌ ರೇಸ್‌ನ ಪ್ರಬಲ ಸ್ಪರ್ಧಿಯಾಗಿರುವ ಮೆಸ್ಸಿ ಮೈದಾನದ ಹೊರಗೆ ಕೂಡ ಅದ್ದೂರಿ ಜೀವನವನ್ನು ನಡೆಸುತ್ತಿದ್ದಾರೆ. ಮೆಸ್ಸಿ ಪ್ರಪಂಚದಾದ್ಯಂತ 23 ಮಿಲಿಯನ್‌ ಪೌಂಡ್‌ (234 ಕೋಟಿ ರೂಪಾಯಿ) ಮೌಲ್ಯದ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ.
 

48

ಗೋಲ್‌ ಡಾಟ್‌ ಕಾಮ್‌ ವರದಿಯ ಪ್ರಕಾರ, ಮೆಸ್ಸಿನ ಪ್ರಸ್ತುತ ಮೌಲ್ಯ ಅಂದಾಜು 400 ಮಿಲಿಯನ್‌ ಡಾಲರ್‌ (3268 ಕೋಟಿ ರೂಪಾಯಿ). ವಿಶ್ವದ ಗರಿಷ್ಠ ಆದಾಯದ ಫುಟ್ಬಾಲ್‌ ಆಟಗಾರರ ಫೋರ್ಬ್ಸ್‌ ಪಟ್ಟಿಯಲ್ಲಿ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ಅದರ ಆದಾಯವೇ ಅಂದಾಜು 130 ಮಿಲಿಯನ್‌ ಡಾಲರ್‌ (1062 ಕೋಟಿ ರೂಪಾಯಿ) ಆಗಿದೆ.
 

58

ವಿಶ್ವದ ಮೂರು ದೇಶಗಳ ನಾಲ್ಕು ಪ್ರದೇಶಗಳಲ್ಲಿ ಮೆಸ್ಸಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಇದರಲ್ಲಿ ಅತ್ಯಂತ ದುಬಾರಿಯಾದ ಮನೆ, ಸ್ಪೇನ್‌ನ ದೇಶದ ಇಬಿಜಾ ದ್ವೀಪದಲ್ಲಿದೆ. ಇದರ ಮೌಲ್ಯ ಅಂದಾಜು 9.5 ಮಿಲಿಯನ್‌ ಪೌಂಡ್‌ (97 ಕೋಟಿ ರೂಪಾಯಿ). ಇದನ್ನು ರಜಾ ದಿನಗಳಲ್ಲಿ ಮಾತ್ರವೇ ಮೆಸ್ಸಿ ಬಳಸುತ್ತಾರೆ. ಆದರೆ, ಈ ಮನೆ ಇನ್ನೂ ಸಂಪುರ್ಣವಾಗಿ ವಾಸಕ್ಕೆ ಬಳಕೆ ಆಗಿಲ್ಲ. ಮನೆಯ ಕೆಲಸ ಕಾರ್ಯಗಳು ಇನ್ನೂ ನಡೆಯುತ್ತಿವೆ.
 

68

ಅದರೊಂದಿಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಮೆಸ್ಸಿ ಮತ್ತೊಂದು ವಿಲಾಸಿ ಬಂಗಲೆ ಹೊಂದಿದ್ದಾರೆ. ಇದರ ಮೌಲ್ಯ 5.5 ಮಿಲಿಯನ್‌ ಪೌಂಡ್‌ (56 ಕೋಟಿ ರೂ). ಈ ಮನೆಯು ಬಾರ್ಸಿಲೋನಾ ಎಫ್‌ಸಿಯ ತವರು ಮೈದಾನವಾದ ಕಾಂಪ್‌ ನು ಸ್ಟೇಡಿಯಂನಿಂದ ಬರೀ 12 ಕಿಲೋಮೀಟರ್‌ ದೂರದಲ್ಲಿದೆ. ಮೆಸ್ಸಿಯ ಪತ್ನಿ ಅಂಟೋನೆಲ್ಲಾ ರಕ್ಕುಜೋ ಹಾಗೂ ಅವರ ಮೂವರು ಪುತ್ರರು ಕೂಡ ಈ ಮನೆಯನ್ನು ಬಹಳ ಇಷ್ಟಪಡುತ್ತಾರೆ. ಇಲ್ಲಿ ಚಿನ್ನ ಫುಟ್‌ಬಾಲ್‌ ಮೈದಾನ, ಇಂಡೋರ್‌ ಜಿಮ್‌ ಹಾಗೂ ಆಟದ ಮೈದಾನಗಳಿವೆ.

78

ಅಮೆರಿಕದ ಮಿಯಾಮಿಯಲ್ಲೂ ಕೂಡ ಮೆಸ್ಸಿ ಫ್ಲ್ಯಾಟ್‌ ಹೊಂದಿದ್ದಾರೆ. ಇದರ ಮೌಲ್ಯ 5 ಮಿಲಿಯನ್‌ ಪೌಂಡ್‌ (50 ಕೋಟಿ). ಸನ್ನಿ ಐಸ್ಲೆಸ್‌ ಬೀಚ್‌ಗೆ ಮುಖವಾಗಿ ಈ ಅಪಾರ್ಟ್‌ಮೆಂಟ್‌ ಇದೆ. ವಿಶ್ವದ ಅತ್ಯಂತ ವಿಲಾಸಿ ಮಿಯಾಮಿ ಬೀಚ್‌ನಿಂದ ಕೇವಲ 10 ಕಿಲೋಮೀಟರ್‌ ದೂರದಲ್ಲಿ ಈ ಫ್ಲ್ಯಾಟ್‌ ಇದೆ.

88

ಮೆಸ್ಸಿ ತಮ್ಮ 13ನೇವಯಸ್ಸಿನಲ್ಲಿಯೇ ಅರ್ಜೆಂಟೀನಾದ ರೊಸಾರಿಯೋವನ್ನು ತೊರೆದು ಬಾರ್ಸಿಲೋನಾಗೆ ತೆರಳಿದ್ದರು. ಆದರೆ, ಇತ್ತೀಚೆಗೆ ಅಂದಾಜು 3 ಮಿಲಿಯನ್‌ ಪೌಂಡ್‌ (30 ಕೋಟಿ ರೂ) ನೀಡಿ, ರೊಸಾರಿಯೋದಲ್ಲಿ ಬಂಗಲೆ ಖರೀದಿ ಮಾಡಿದ್ದಾರೆ. ಇದಕ್ಕೆ ದಿ ಫಾರ್ಟೆಸ್‌ ಎಂದು ಹೆಸರಿಟ್ಟಿದ್ದಾರೆ. ಇದು ರೊಸಾರಿಯೋದ ಗ್ರಾಮಾಂತರವಾಗಿದ್ದು, ಇಲ್ಲಯೇ ಮೆಸ್ಸಿ ಜನಿಸಿದ್ದರು. ಬರೋಬ್ಬರಿ 15 ಕಾರ್‌ಗಳನ್ನು ಇಡಬಹುದಾದ ಅಂಡರ್‌ಗ್ರೌಂಡ್‌ ಪಾರ್ಕಿಂಗ್‌ ವ್ಯವಸ್ಥೆ ಇಲ್ಲಿದೆ. ಒಟ್ಟಾರೆ 20 ರಿಂದ 25 ಕೋಣೆಗಳು ಇಲ್ಲಿರಬಹುದು ಎಂದು ಅಂದಾಜಿಸಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಫುಟ್‌ಬಾಲ್
ಜೀವನಶೈಲಿ
ಲಿಯೋನೆಲ್ ಮೆಸ್ಸಿ
ಫಿಫಾ ವಿಶ್ವಕಪ್

Latest Videos
Recommended Stories
Recommended image1
ಈ ಫುಟ್ಬಾಲಿಗನ ಬಳಿ ಇದೆ ಬರೋಬ್ಬರಿ 91 ಕೋಟಿ ರೂಪಾಯಿ ಕಾರು ಕಲೆಕ್ಷನ್
Recommended image2
ಇಂಡಿಯನ್ ಸೂಪರ್ ಲೀಗ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್; ಎಲ್ಲಾ 14 ತಂಡಗಳು ಭಾಗಿ!
Recommended image3
FIFA ವಿಶ್ವಕಪ್ ಗೆದ್ರೆ ₹452 ಕೋಟಿ ಬಹುಮಾನ! ಕಳೆದ ಬಾರಿಗಿಂತ 100 ಕೋಟಿ ಹೆಚ್ಚಳ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved