Asianet Suvarna News Asianet Suvarna News

FIFA ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ದ ಭಾರತಕ್ಕೆ 0-3 ಸೋಲು..!

ಮೊದಲ ಪಂದ್ಯದಲ್ಲಿ ಕುವೈತ್ ವಿರುದ್ಧ ಗೆದ್ದಿದ್ದ ಕಾರಣ ಮೊದಲ ಬಾರಿಗೆ 3ನೇ ಸುತ್ತಿಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತನ್ನ 3ನೇ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ 2024ರ ಮಾ.21ರಂದು ತಜಿಕಿಸ್ತಾನದ ದುಶಾನ್ಬೆ ಯಲ್ಲಿ ಆಡಲಿದೆ.

FIFA World Cup 2026 Qualifier Mashaal Moez Ali and Abdurisag goals seal India defeat kvn
Author
First Published Nov 22, 2023, 10:56 AM IST

ಭುವನೇಶ್ವರ(ನ.22): 2026ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ 2ನೇ ಹಂತದ ಪಂದ್ಯದಲ್ಲಿ ಮಂಗಳವಾರ ಬಲಿಷ್ಠ ಕತಾರ್ ವಿರುದ್ಧ ಭಾರತ 0-3 ಗೋಲುಗಳ ಸೋಲು ಅನುಭವಿಸಿತು. ವಿಶ್ವ ರ್ಯಾಂಕಿಂಗ್‌ನಲ್ಲಿ 61ನೇ ಸ್ಥಾನದಲ್ಲಿರುವ, ಹಾಲಿ ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಭಾರತ ಉತ್ತಮ ಹೋರಾಟ ಪ್ರದರ್ಶಿಸಿದರೂ, ಹಲವು ಗೋಲು ಬಾರಿಸುವ ಅವಕಾಶಗಳನ್ನು ಕೈಚೆಲ್ಲಿ ಸೋಲಿಗೆ ಶರಣಾಯಿತು.

ಈ ಸೋಲಿನ ಹೊರತಾಗಿಯೂ ಭಾರತ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಕುವೈತ್ ವಿರುದ್ಧ ಗೆದ್ದಿದ್ದ ಕಾರಣ ಮೊದಲ ಬಾರಿಗೆ 3ನೇ ಸುತ್ತಿಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತನ್ನ 3ನೇ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ 2024ರ ಮಾ.21ರಂದು ತಜಿಕಿಸ್ತಾನದ ದುಶಾನ್ಬೆ ಯಲ್ಲಿ ಆಡಲಿದೆ. ಆ ಬಳಿಕ 2ನೇ ಚರಣದ ಪಂದ್ಯಗಳು ಶುರುವಾಗಲಿದ್ದು, ಮಾ.26ರಂದು ಅಫ್ಘಾನಿಸ್ತಾನ ವಿರುದ್ಧ ಗುವಾಹಟಿ, ಜೂ.6ರಂದು ಕುವೈತ್ ವಿರುದ್ಧ ಕೊಚ್ಚಿ, ಜೂ.11 ರಂದು ಕತಾರ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಆತಿಥ್ಯ ವಹಿಸುವ ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ.

ವಿಜಯಪುರ: ಗೊಂದಲಗಳ ಮಧ್ಯೆ ಕೊನೆಗೊಂಡ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ..!

ಚೀನಾ ಮಾಸ್ಟರ್ಸ್‌: 2ನೇ ಸುತ್ತಿಗೇರಿದ ಪ್ರಣಯ್

ಶೆನ್ಝೆನ್: ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಇಲ್ಲಿ ಮಂಗಳವಾರ ಆರಂಭಗೊಂಡ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ 2ನೇ ಸುತ್ತು ಪ್ರವೇಶಿಸಿದ್ದಾರೆ. ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಚೌ ಟಿಯಾನ್ ಚೆನ್ ವಿರುದ್ಧ 21-18, 22-20 ಗೇಮ್‌ಗಳಲ್ಲಿ ಗೆದ್ದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿಯು ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಬೆನ್ ಲೇನ್ ಹಾಗೂ ಶಾನ್ ವೆಂಡಿ ವಿರುದ್ಧ 21-13, 21-10ರಲ್ಲಿ ಜಯಿಸಿತು.

ಪಂಕಜ್ ಅಡ್ವಾಣಿಗೆ 26ನೇ ವಿಶ್ವ ಕಿರೀಟ..!

ದೋಹಾ: ಭಾರತದ ಪಂಕಜ್ ಅಡ್ವಾಣಿ 26ನೇ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿ ನಡೆದ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ ಫೈನಲ್ ನಲ್ಲಿ ಪಂಕಜ್, ಭಾರತದವರೇ ಆದ ಸೌರವ್ ಕೊಠಾರಿ ವಿರುದ್ಧ 1000-416 ಅಂತರದಲ್ಲಿ ಗೆಲುವು ಸಾಧಿಸಿದರು. ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಈ ಇಬ್ಬರು ಆಟಗಾರರೇ ಸೆಣಸಿದ್ದರು. 2005ರಲ್ಲಿ ಮೊದಲ ಬಾರಿಗೆ ವಿಶ್ವ ಕೂಟದಲ್ಲಿ ಪ್ರಶಸ್ತಿ ಗೆದ್ದಿದ್ದ ಪಂಕಜ್, ಬಿಲಿಯರ್ಡ್ಸ್‌ನ ಲಾಂಗ್ ಫಾರ್ಮ್ಯಾಟ್‌ನಲ್ಲಿ 9 ಬಾರಿ, ಪಾಯಿಂಟ್ ಫಾರ್ಮ್ಯಾಟ್‌ನಲ್ಲಿ 8 ಬಾರಿ ಚಾಂಪಿಯನ್ ಆಗಿದ್ದಾರೆ. ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಡ್ವಾಣಿ, ಭಾರತದವರೇ ಆದ ರೂಪೇಶ್ ಶಾ ವಿರುದ್ಧ 900-273ರ ಅಂತರದಲ್ಲಿ ಗೆದ್ದಿದ್ದರು.

ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌, 'ಅಗೌರವವಲ್ಲ, ಅದು ಆತನ ವಿಶ್ರಾಂತಿ ರೀತಿ' ಎಂದ ಚೇತನ್‌ ಅಹಿಂಸಾ!

ಟೆನಿಸ್‌ ಡಬಲ್ಸ್‌: ವಿಶ್ವ ನಂ.3 ಸ್ಥಾನಕ್ಕೆ ಬೋಪಣ್ಣ

ಲಂಡನ್‌: ಕನ್ನಡಿಗ ರೋಹನ್‌ ಬೋಪಣ್ಣ ವಿಶ್ವ ಟೆನಿಸ್‌ ಪುರುಷರ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ದಶಕದ ಬಳಿಕ ಅಗ್ರ-3ರಲ್ಲಿ ಸ್ಥಾನ ಪಡೆದಿದ್ದಾರೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ರ್‍ಯಾಂಕಿಂಗ್‌ ಆಗಿದೆ. ಎಟಿಪಿ ಫೈನಲ್ಸ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆ ಸೆಮಿಫೈನಲ್‌ ಪ್ರವೇಶಿಸಿದ್ದ 43 ವರ್ಷದ ಬೋಪಣ್ಣ, ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ 2013ರಲ್ಲಿ ಬೋಪಣ್ಣ 3ನೇ ಸ್ಥಾನ ಪಡೆದಿದ್ದರು.
 

Follow Us:
Download App:
  • android
  • ios