FIFA World cup ಮೊರಕ್ಕೊ ಮಣಿಸಿದ ಕ್ರೋವೇಶಿಯಾಗೆ 3ನೇ ಸ್ಥಾನ, 223 ಕೋಟಿ ಬಹುಮಾನ!
ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಕಾತರ ಹೆಚ್ಚಾಗಿದೆ. ಇದರ ನಡುವೆ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕ್ರೋವೇಶಿಯಾ ಗೆಲುವಿನ ನಗೆ ಬೀರಿದೆ. ಫ್ರಾನ್ಸ್‌ನಿಂದ ಸೋಲು ಕಂಡ ಮೊರಕ್ಕೊ ಇದೀಗ ಕ್ರೋವೇಶಿಯಾದಿಂದಲೂ ಹಿನ್ನಡೆ ಅನುಭವಿಸಿದೆ.
ಖತಾರ್(ಡಿ.17): ಫಿಫಾ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯಕ್ಕಾಗಿ ಕೌಂಟ್‌ಡೌನ್ ಶುರುವಾಗಿದೆ. ಎಲ್ಲರ ಚಿತ್ತ ಇದೀಗ ಅರ್ಜೆಂಟೀನಾ ಹಾಗೂ ಫ್ರಾನ್ಸ್ ತಂಡದ ಮೇಲೆ ನೆಟ್ಟಿದೆ. ಚಾಂಪಿಯನ್ ತಂಡ ಜಗತ್ತಿನ ನಂಬರ್ 1 ಫುಟ್ಬಾಲ್ ತಂಡ ಎನಿಸಿಕೊಂಡರೆ, ರನ್ನರ್ ಅಪ್ ತಂಡ 2ನೇ ಸ್ಥಾನ ಅಲಂಕರಿಸಿದೆ. ಈ ಪ್ರಶಸ್ತಿ ಸುತ್ತಿನ ಹೋರಾಟಕ್ಕೂ ಮೊದಲು 3ನೇ ಸ್ಥಾನಕ್ಕಾಗಿ ಮೊರಕ್ಕೊ ಹಾಗೂ ಕ್ರೋವೇಶಿಯಾ ಪೈಪೋಟಿ ನಡೆಸಿತ್ತು. ಈ ಮಹತ್ವದ ಪಂದ್ಯದಲ್ಲಿ ಕ್ರೋವೇಶಿಯಾ 2-1 ಅಂತರದಲ್ಲಿ ಗೆಲುವು ಸಾಧಿಸಿದೆ. ರೋಚಕ ಹೋರಾಟ ನೀಡಿದ ಮೊರಕ್ಕೊಗೆ ಗೆಲುವಿನ ಸಿಹಿ ಸಿಗಲಿಲ್ಲ. ಮಿಸ್ಲಾವ್ ಒರ್ಸಿಕ್ ಸಿಡಿಸಿದ ಗೋಲು ಕ್ರೋವೇಶಿಯಾ ತಂಡಕ್ಕೆ ಗೆಲುವಿನ ಸಿಂಚನ ನೀಡಿತು.
ಮೊರಕ್ಕೊ ಮಣಿಸಿ 3ನೇ ಸ್ಥಾನ ಅಲಂಕರಿಸಿದ ಕ್ರೋವೇಶಿಯಾ ತಂಡಕ್ಕೆ 223 ಕೋಟಿ ರೂಪಾಯಿ(27 ಮಿಲಿಯನ್ ಡಾಲರ್) ಬಹುಮಾನ ಲಭಿಸಿಸಿದೆ. ಇನ್ನು ಸೋಲು ಅನಭವಿಸುವ ಮೂಲಕ 4ನೇ ಸ್ಥಾನಕ್ಕೆ ತಪ್ತಿಪಟ್ಟುಕೊಂಡು ಮೊರಕ್ಕೊ ತಂಡಕ್ಕೆ 25 ಮಿಲಿಯನ್ ಡಾಲರ್ (ಅಂದಾಜು 206 ಕೋಟಿ ರು.) ಬಹುಮಾನ ಮೊತ್ತ ಪಡೆಯಲಿದೆ.
ಫಿಫಾ ಫೈನಲ್ ಪಂದ್ಯಕ್ಕೂ ಮುನ್ನ ಫ್ರಾನ್ಸ್‌ಗೆ ಶಾಕ್, ಆಟಗಾರರಲ್ಲಿ ವೈರಸ್ ಪತ್ತೆ!
ಪಂದ್ಯದ ಆರಂಭದಿಂದಲೇ ಕ್ರೋವೇಶಿಯಾ ತಂಡ ಹಿಡಿತ ಸಾಧಿಸಿತು. 7ನೇ ನಿಮಿಷದಲ್ಲಿ ಜೋಸ್ಕೋ ಗಾರ್ಡಿಯಲ್ ಸಿಡಿಸಿದ ಗೋಲಿನಿಂದ ಕ್ರೋವೇಶಿಯಾ ತಂಡ ಆರಂಭಿಕ ಮುನ್ನಡೆ ಪಡೆಯಿತು. ಕ್ರೋವೇಶಿಯಾ ಸಂಭ್ರಮವನ್ನು 2ನೇ ನಿಮಿಷಕ್ಕೆ ಮೊರಕ್ಕೊ ಮುರಿಯಿತು. 9ನೇ ನಿಮಿಷದಲ್ಲಿ ದ್ದಾರಿ ಅಶ್ರಫ್ ಗೋಲು ಸಿಡಿಸಿ 1-1 ಅಂತರದಲ್ಲಿ ಸಮಬಗೊಳಿಸಿದರು. ಬಳಿಕ ಎರಡೂ ತಂಡಗಳು ಆಕ್ರಮಣಕಾರಿ ಜೊತೆಗೆ ಯಾರಿಗೂ ಗೋಲಿಗೆ ಅವಕಾಶ ನೀಡಲಿಲ್ಲ.
42 ನೇ ನಿಮಿಷದಲ್ಲಿ ಮಿಸ್ಲಾವ್ ಒರ್ಸಿಕ್ ಸಿಡಿಸಿದ ಗೋಲು ಕ್ರೋವೇಶಿಯಾ ತಂಡಕ್ಕೆ 2-1 ಅಂತರದ ಮುನ್ನಡೆ ತಂದುಕೊಟ್ಟಿತು. ಮುನ್ನಡೆ ಬೆನ್ನಲ್ಲೇ ಮೊರಕ್ಕೊ ಗೋಲು ಸಿಡಿಸಿ ಸಮಬಲ ಸಾಧಿಸುವ ಪ್ರಯತ್ನ ನಡೆಸಿತು. ಆದರೆ ಇದಕ್ಕೆ ಕ್ರೋವೇಶಿಯಾ ಅವಕಾಶ ನೀಡಲಿಲ್ಲ.
FIFA WORLD CUP ಫ್ರಾನ್ಸ್ VS ಅರ್ಜೆಂಟೀನಾ ಹೋರಾಟಕ್ಕೆ ಕಾತರ, ಯಾರಾಗ್ತಾರೆ ವಿಶ್ವ ಚಾಂಪಿಯನ್?
ಫಿಫಾ ವಿಶ್ವಕಪ್ 2022ರ ಟೂರ್ನಿಯಲ್ಲಿ ಮೊರಕ್ಕೊ ಹಾಗೂ ಕ್ರೋವೇಶಿಯಾ ತಂಡಕ್ಕೆ 2ನೇ ಪಂದ್ಯ ಇದಾಗಿತ್ತು. ‘ಎಫ್’ ಗುಂಪಿನಲ್ಲಿದ್ದ ತಂಡಗಳ ನಡುವಿನ ಮೊದಲ ಪಂದ್ಯ ಗೋಲು ರಹಿತ ಡ್ರಾಗೊಂಡಿತ್ತು. ಆ ಪಂದ್ಯದಲ್ಲಿ ಕ್ರೊವೇಷಿಯಾದ ತಾರಾ ಮಿಡ್ಫೀಲ್ಡರ್ಸ್ ಹಾಗೂ ಸ್ಟೆ್ರೖಕರ್‌ಗಳನ್ನು ನಿಯಂತ್ರಿಸುವಲ್ಲಿ ಮೊರಾಕ್ಕೊ ರಕ್ಷಣಾ ಪಡೆ ಯಶಸ್ವಿಯಾಗಿತ್ತು. ಮಹತ್ವದ 3ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಕ್ರೋವೇಶಿಯಾ 2 ಗೋಲು ಸಿಡಿಸುವ ಮೂಲಕ ಅಬ್ಬರಿಸಿದೆ.