ಬೆಂಗಳೂರು(ಫೆ.13): ಸೆಂಬಾಯ್‌ ಹಾಕಿಪ್‌ ಹಾಗೂ ಡೆಶ್‌ಹಾರ್ನ್‌ ಬ್ರೌನ್‌ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಬೆಂಗಳೂರು ಎಫ್‌ಸಿ, 2020ರ ಎಎಫ್‌ಸಿ ಕಪ್‌ನ ಅರ್ಹತಾ ಸುತ್ತಿನ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದೆ. ಬುಧವಾರ ಇಲ್ಲಿ ನಡೆದ ಅರ್ಹತಾ ಸುತ್ತಿನ 2ನೇ ಚರಣದ ಪಂದ್ಯದಲ್ಲಿ ಭೂತಾನ್‌ನ ಪಾರೋ ಎಫ್‌ಸಿ ವಿರುದ್ಧ 9-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೊದಲ ಚರಣದಲ್ಲಿ 1-0 ಗೋಲಿನಿಂದ ಜಯಿಸಿದ್ದ ಬಿಎಫ್‌ಸಿ, ಒಟ್ಟಾರೆ 10-1 ಅಂತರದ ಜಯ ಪಡೆದು ಮುನ್ನಡೆಯಿತು.

ಇದನ್ನೂ ಓದಿ: ಸುನಿಲ್ ಚೆಟ್ರಿ ಆಬ್ಬರ, ಗೋವಾ ವಿರುದ್ಧ BFCಗೆ ಗೆಲುವು!

ಬೆಂಗಳೂರು ಎಫ್‌ಸಿ ಕ್ಲಬ್‌ಗೆ ಇದು ಅತಿದೊಡ್ಡ ಗೆಲುವು. ಅರ್ಹತಾ ಸುತ್ತಿನ ಅಂತಿಮ ಹಂತದ ಪ್ಲೇ-ಆಫ್‌ ಪಂದ್ಯದಲ್ಲಿ ಬಿಎಫ್‌ಸಿ, ಮಾಲ್ಡೀವ್ಸನ ಮಾಝಿಯಾ ಸ್ಪೋಟ್ಸ್‌ರ್‍ ಕ್ಲಬ್‌ ವಿರುದ್ಧ ಎರಡು ಚರಣದ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಎಎಫ್‌ಸಿ ಕಪ್‌ನ ಗುಂಪು ಹಂತಕ್ಕೆ ಪ್ರವೇಶಿಸಲಿದೆ. ಮೊದಲ ಚರಣದ ಪಂದ್ಯ ಮಾಲ್ಡೀವ್‌್ಸನಲ್ಲಿ ಫೆ.19ಕ್ಕೆ ನಡೆಯಲಿದ್ದು, 2ನೇ ಚರಣದ ಪಂದ್ಯ ಫೆ.26ಕ್ಕೆ ಬೆಂಗಳೂರಲ್ಲಿ ನಡೆಯಲಿದೆ.

ಇದನ್ನೂ ಓದಿ: ಐಎಸ್‌ಎಲ್‌: ಬಿಎಫ್‌ಸಿಗೆ 2-0 ಜಯ

ಮೊದಲ ಚರಣದ ಪಂದ್ಯದಲ್ಲಿ ಬಿಎಫ್‌ಸಿ ಪರ ಏಕೈಕ ಗೋಲು ಬಾರಿಸಿದ್ದ ಹಾಕಿಪ್‌, ಬುಧವಾರ 4 ಗೋಲು (6ನೇ ನಿ., 26ನೇ ನಿ., 67ನೇ ನಿ. ಹಾಗೂ 85ನೇ ನಿ.) ಬಾರಿಸಿದರು. ಜಮೈಕಾದ ಬ್ರೌನ್‌ 3 ಬಾರಿ (29ನೇ ನಿ., 54ನೇ ನಿ., ಹಾಗೂ 64ನೇ ನಿ.) ಗೋಲು ಪೆಟ್ಟಿಗೆಗೆ ಚೆಂಡನ್ನು ಸೇರಿಸಿದರು. ಇನ್ನುಳಿದ 2 ಗೋಲುಗಳನ್ನು ಜುವಾನನ್‌ ಗೊಂಜಾಲೆಜ್‌ (14ನೇ ನಿ.) ಹಾಗೂ ನಿಲಿ ಪೆಡ್ರೊಮೊ (79ನೇ ನಿ.) ಬಾರಿಸಿದರು. ಪಾರೋ ಎಫ್‌ಸಿ ಪರ ಬಿಎಫ್‌ಸಿ ಮಾಜಿ ಆಟಗಾರ ಚೆಂಚೊ ಗೈಲ್ಟ್‌ಶೆನ್‌ 16ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

ಐಎಸ್‌ಎಲ್‌: ಸೆಮೀಸ್‌ ಪ್ರವೇಶಿಸಿದ ಬಿಎಫ್‌ಸಿ!
ಬೆಂಗಳೂರು ಎಫ್‌ಸಿಗೆ ಬುಧವಾರ ಡಬಲ್‌ ಸಂಭ್ರಮ. ಎಎಫ್‌ಸಿ ಕಪ್‌ ಪಂದ್ಯದಲ್ಲಿ ಜಯಿಸಿ, ಪ್ಲೇ-ಆಫ್‌ ಪಂದ್ಯಕ್ಕೇರಿದ್ದಲ್ಲದೆ 6ನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿತು. ಬುಧವಾರ ಗೋವಾ ಎಫ್‌ಸಿ ವಿರುದ್ಧ ಮುಂಬೈ ಎಫ್‌ಸಿ 2-5 ಗೋಲುಗಳಲ್ಲಿ ಸೋಲುಂಡ ಕಾರಣ, ಹಾಲಿ ಚಾಂಪಿಯನ್‌ ಬಿಎಫ್‌ಸಿ, ರೌಂಡ್‌ ರಾಬಿನ್‌ ಹಂತದಲ್ಲಿ ಇನ್ನು 2 ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲ್‌ಗೇರಿತು.