ಬೆಂಗಳೂರು(ಜ.10): ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಜಯದ ಓಟ ಮುಂದುವರಿಸಿದೆ. 

ISL ಫುಟ್ಬಾಲ್: ಬಿಎಫ್‌ಸಿಗಿಂದು ಜೆಮ್ಶೆಡ್‌ಪುರ ಚಾಲೆಂಜ್‌

ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಜಮ್ಶೆಡ್‌ಪುರ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. 

ಪಂದ್ಯದ 8ನೇ ನಿಮಿಷದಲ್ಲೇ ಎರಿಕ್‌ ಪಾರ್ತಲು ಗೋಲಿನ ಖಾತೆ ತೆರೆದರು. 63ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ, ಮುನ್ನಡೆಯನ್ನು 2-0ಗೇರಿಸಿದರು. ಜಮ್ಶೆಡ್‌ಪುರ ತಂಡಕ್ಕಿದು ಸತತ 3ನೇ ಸೋಲಾಗಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಉಳಿದಿದೆ. ಬಿಎಫ್‌ಸಿ ಜ.17ರಂದು ಮುಂಬೈ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.

ಸುನಿಲ್ ಚೆಟ್ರಿ ಆಬ್ಬರ, ಗೋವಾ ವಿರುದ್ಧ BFCಗೆ ಗೆಲುವು!