Asianet Suvarna News Asianet Suvarna News

ಮರ್ಸಿಸೈಡ್, ಮ್ಯಾಂಚೆಸ್ಟರ್ ಡರ್ಬಿ ಬಳಿಕ ಕೋಲ್ಕತಾ ಡರ್ಬಿಗೆ ಸಜ್ಜಾದ ಫ್ಲವರ್!

ರಾಬಿ ಫ್ಲವರ್‌ಗೆ ಫುಟ್ಬಾಲ್ ಬದುಕು ಡರ್ಬಿಗಳಿಂದಲೇ ಸ್ಮರಣೀಯವಾದುದು. ಮರ್ಸಿಸೈಡ್ ಡರ್ಬಿಯ ಮೊದಲ ಪಂದ್ಯದಲ್ಲೇ ಗೋಲು ಗಳಿಸಿದ ಕೀರ್ತಿ ಫ್ಲವರ್ ಗೆ ಸಲ್ಲುತ್ತದೆ. ಇದೀಗ ರಾಬಿ ಕೋಲ್ಕತಾ ಡರ್ಬಿಗೆ ಸಜ್ಜಾಗಿದ್ದಾರೆ.

English footballer Robbie fowler geared for the Kolkata Derby after merseyside and Manchester ckm
Author
Bengaluru, First Published Nov 26, 2020, 9:53 PM IST

ಗೋವಾ(ನ.26):   ಇಂಡಿಯನ್ ಸೂಪರ್ ಲೀಗ್ ನಲ್ಲಿ ಲೀಗ್ ನಲ್ಲಿ ಶುಕ್ರವಾರ ಮೊದಲ ಡರ್ಬಿ ನಡೆಯಲಿದ್ದು, ಆ ಪಂದ್ಯದಲ್ಲಿ ಡರ್ಬಿಗಳ ರಾಜ ಕೋಲ್ಕೊತಾ ಆಡಲಿರುವುದು ವಿಶೇಷ.  ಆರಂಭಿಕ ಪಂದ್ಯವನ್ನಾಡಲು ಇಂಗ್ಲೀಷ್ ಪುಟ್ಬಾಲರ್ ರಾಬಿ ಫ್ಲವರ್ ಗೆ ಇದಕ್ಕಿಂತ ಉತ್ತಮ ಪಂದ್ಯದ ಉತ್ತಮ ಪಂದ್ಯ ಸಿಗುವುದು ಕಷ್ಟಸಾಧ್ಯ. 

ಜೆಮ್‌ಶೆಡ್‌ಪುರ ವಿರುದ್ಧ ಮಿಂಚಿದ ಥಾಪ, ಚೆನ್ನೈಯನ್FC ಶುಭಾರಂಭ!.

ರಾಬಿ ಫ್ಲವರ್‌ಗೆ ಫುಟ್ಬಾಲ್ ಬದುಕು ಡರ್ಬಿಗಳಿಂದಲೇ ಸ್ಮರಣೀಯವಾದುದು. ಮರ್ಸಿಸೈಡ್ ಡರ್ಬಿಯ ಮೊದಲ ಪಂದ್ಯದಲ್ಲೇ ಗೋಲು ಗಳಿಸಿದ ಕೀರ್ತಿ ಫ್ಲವರ್ ಗೆ ಸಲ್ಲುತ್ತದೆ. ಮ್ಯಾಂಚೆಸ್ಟರ್ ಡರ್ಬಿಯಲ್ಲಿ ಮ್ಯಾಂಚೆಸ್ಟರ್ ಸಿಟಿ ಪರ ಹಲವು ಬಾರಿ ಗೋಲು ಗಳಿಸಿದವರು.  ಪೆನ್ನಿನಸ್ ಡರ್ಬಿಯಲ್ಲಿ ಗೋಲುಗಳಿಸಲು ನೆರವಾದವರು, ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಲೀಡ್ಸ್ ಯುನೈಟೆಡ್ ನಲ್ಲೂ ಮಿಂಚಿದವರು. ಈಗ ಅಪಾರ ಅನುಭವದೊಂದಿಗೆ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೊಂದು ಡರ್ಬಿಯ ಅನುಭವ ಗಳಿಸಲಿದ್ದಾರೆ. ಆದರೆ ಈ ಬಾರಿ ಅವರು ಡಗೌಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್ ಸಿ ಈಸ್ಟ್ ಬೆಂಗಾಲ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಒಡಿಶಾ ವಿರುದ್ಧ ಹೈದರಾಬಾದ್‌ಗೆ ಮೊದಲ ಗೆಲುವು!

ಫ್ಲವರ್ ಅವರಿಗಿಂತ ಡರ್ಬಿಯ ಸಂಭ್ರಮ ಮುಖ್ಯವಾದುದು, “ಅವರಿಗೆ ಇದೊಂದು ದೊಡ್ಡ ಪಂದ್ಯ, ಫುಟ್ಬಾಲ್ ಅಭಿಮಾನಿಗಳಿಗೆ ಇದೊಂದು ದೊಡ್ಡ ಪಂದ್ಯ, ಅದೇ ರೀತಿ ಆಟಗಾರರಿಗೂ, ಎಲ್ಲಕ್ಕಿಂತ ಮುಖ್ಯವಾದುದು ನೀವು ಅಲ್ಲಿ ಹೋಗಿ ನಿಮ್ಮ ಪ್ರೋತ್ಸಾಹ ನೀಡುವುದು. ನಿಮ್ಮಲ್ಲಿ ಸಂವೇದನಾಶೀಲತೆ ಇರಲಿ. ಈ ರೀತಿಯ ಪಂದ್ಯಗಳಲ್ಲಿ ಆಟಗಾರರು ಹಗುರವಾಗಿ ಪರಿಗಣಿಸುವಂತಿಲ್ಲ. ಅತ್ಯಂತ ಉತ್ಸಾಹದಿಂದ ಕೂಡಿರಬೇಕು. ಈ ಸಂದರ್ಭದಲ್ಲಿ ಆಟಗಾರರು ಅರ್ಥಪೂರ್ಣ ಆಟ ಆಡಬೇಕು,’’ ಎಂದು ಫ್ಲವರ್ ಹೇಳಿದರು.

ಈ ಡರ್ಬಿ ತನ್ನ ಬದುಕಿನಲ್ಲಿ ಅತ್ಯಂತ ಪ್ರಮುಖವಾದುದು ಎಂದು ನಂಬಿದ್ದಾರೆ. ಈ ಪಂದ್ಯ ಯಾವ ರೀತಿಯಲ್ಲಿ ಫುಟ್ಬಾಲ್ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಆಧರಿಸಿಯಲ್ಲ, ಬದಲಾಗಿ ಇದು ಋತುವಿನ ಮೊದಲ ಪಂದ್ಯ. ಇಲ್ಲಿ ಜಯದೊಂದಿಗೆ ಆರಂಭ ಕಾಣಬೇಕು ಎಂಬುದನ್ನು ಕೋಚ್ ಆಗಿ ಅವರು ಬಲ್ಲರು. ಜಯದ ಆರಂಭದ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತು, ‘’ಎಟಿಕೆ ಮೋಹನ್ ಬಾಗನ್ ವಿರುದ್ಧ ಆಡುತ್ತಿದ್ದೇವೆ ಎಂಬ ಕಾರಣಕ್ಕೆ ಅದು ಮುಖ್ಯವಲ್ಲ. ಬದಲಾಗಿ ಇದು ನಮ್ಮ ಮೊದಲ ಪಂದ್ಯ ಈ ಕಾರಣಕ್ಕಾಗಿ ಪ್ರಮುಖವಾದುದು. ಇದು ಅತ್ಯಂತ ಪ್ರಮುಖ ಪಂದ್ಯ, ಫುಟ್ಬಾಲ್ ಆಭಿಮಾನಿಗಳ ಪಾಲಿಗೆ  ದೊಡ್ಡ ಪಂದ್ಯ. ಭಾರತದ ಫುಟ್ಬಾಲ್ ನಲ್ಲೂ ಇದು ಅತ್ಯಂತ  ಕುತೂಹಲದ ಪಂದ್ಯ. ನಾವು ಯಾವ ರೀತಿಯ ತಂಡ ಎಂಬುದನ್ನು ತೋರಿಸಲು ಪ್ರತಿಯೊಬ್ಬರು ಅಲ್ಲಿ ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ತೋರಬೇಕಾಗಿದೆ. ನಮ್ಮದು ಯಾವ ರೀತಿಯ ತಂಡ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಈ ರೀತಿಯ ಪಂದ್ಯಗಳಲ್ಲಿ ನಾವು ನಮ್ಮ ಛಾಪನ್ನು ಮೂಡಿಸಬೇಕಾಗಿದೆ, ಮತ್ತು ತರಬೇತಿಯ ಪಿಚ್ ನಲ್ಲಿ ಕಲಿತದ್ದನ್ನು ಕಾರ್ಯರೂಪಕ್ಕೆ ತರಬೇಕಾಗಿದೆ,’’ ಎಂದರು.

ಋತುವಿನ ಸಿದ್ಧತೆ ಆರಂಭ ತಡವಾಗಿ ಆಗಿರುವುದು ತಂಡಕ್ಕೆ ಹಿನ್ನಡೆ ಎನಿಸುವುದು. ಆದರೆ ತಮ್ಮ ತಂಡಕ್ಕೆ ಅಗತ್ಯ ಇರುವ ಸ್ಫೂರ್ತಿ ಸಿಕ್ಕಿದ್ದು ಮಾತ್ರವಲ್ಲದೆ ಕೆಲಸದ ನೀತಿಯ ಬಗ್ಗೆಯೂ ನಮ್ಮಲ್ಲಿ ಯಾವುದೇ ರೀತಿಯ ಕುಂದು ಇರದು, “ಇದು ಆರಂಭದಲ್ಲೇ ನಮಗೆ ಎದುರಾದ ಅತ್ಯಂತ ಕಠಿಣ ಪಂದ್ಯ. ನಾನು ತಂಡದ ತರಬೇತಿಯ ವಿಷಯದಲ್ಲಿ ನಾವು ಎಲ್ಲ ತಂಡಗಳಿಗಿಂತ ಹಿಂದೆ ಇದ್ದೇವೆ. ಸರಿಯಾಗಿ ಅಭ್ಯಾಸ ಪಂದ್ಯಗಳು ಸಿಗದಿರುವದೇ ಇದಕ್ಕೆ ಕಾರಣ. ಎಟಿಕೆಎಂಬಿ ತಂಡ ಪಂದ್ಯ ಆಡಿದೆ, ಆದರೆ ನಮಗೆ ಇನ್ನೂ ಅವಕಾಶ ಸಿಗಲಿಲ್ಲ. ಆದ್ದರಿಂದ ನಾವು ಹೊಸದಾಗಿ ಋತುವನ್ನು ಆರಂಭಿಸುತ್ತಿದ್ದೇವೆ. ನಾವು ಹೇಗೆ ಆಡಲಿದ್ದೇವೆ ಎಂಬುದರ ಬಗ್ಗೆ ಯಾರಿಗೂ ಅರಿವಿಲ್ಲ. ಅಂಗಣದಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸುವುದು ನಮ್ಮ ಮುಂದಿರುವ ಸವಾಲು. ನಮ್ಮ ಕಾರ್ಯ ನೀತಿಯ ಬಗ್ಗೆ ನಂಬಿಕೆ ಇದೆ, ಆದ್ದರಿಂದ ಉತ್ತಮವಾಗಿ ಆಡಬಲ್ಲೆವು. ಆಟಗಾರರ ಆತ್ಮವಿಶ್ವಾಸ ಮತ್ತು ಅವರ ವರ್ತನೆ ಉತ್ತಮವಾಗಿದೆ, ಆರಂಭಕ್ಕಾಗಿ ನಾವು ಉತ್ಸುಕರಾಗಿದ್ದೇವೆ. ನಾವು ನಮ್ಮಿಂದಾದ ಎಲ್ಲ ಕೆಲಸವನ್ನು ಮಾಡಿದ್ದೇವೆ. ಬಹಳ ದೂರದಿಂದ ಸಾಗಿ ಬಂದ ನಾವು ಪಂದ್ಯಕ್ಕೆ ನಾವು ಸಜ್ಜಾಗಿದ್ದೇವೆ, ‘’ ಎಂದರು.

‘’ಅಂಗಣದಲ್ಲಿ ಪ್ರೇಕ್ಷಕರಿಗೆ ಅವಕಾಶವಿಲ್ಲ ಎಂಬುದು ಚೆನ್ನಾಗಿ ಗೊತ್ತು, ಆದರೆ ನಮಗೆ ಉತ್ತಮ ರೀತಿಯ ಬೆಂಬಲ ಇದೆ ಎಂದು ಫ್ಲವರ್ ಹೇಳಿದ್ದಾರೆ. ಆದರೆ ಪ್ರೇಕ್ಷಕರ ಸ್ಫೂರ್ತಿ ನಮ್ಮ ಮೇಲೆ 120 ಪ್ರತಿಶತ ಇರುತ್ತದೆ.ನಾವು ಪ್ರೇಕ್ಷಕರ ಬೆಂಬಲ ಮತ್ತು ಪ್ರೀತಿಯನ್ನು ಗ್ರಹಿಸಬಲ್ಲೆವು. ನಾವು ಸಿಬ್ಬಂದಿಯಾಗಿ ತಂಡದೊಂದಿಗೆ ಇರುವುದೇ ಹೆಮ್ಮೆಯ ಸಂಗತಿ, ಒಂದು ಕ್ಲಬ್ ನ ಯಶಸ್ಸಿನಲ್ಲಿ ಅಭಿಮಾನಿಗಳ ಪಾತ್ರ ಪ್ರಮುಖವಾದುದು,’’ ಎಂದರು.

Follow Us:
Download App:
  • android
  • ios