ಗೋವಾ(ನ.23) ಅರಿದಾನೆ ಸ್ಯಾಂಟನಾ (34ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಹೈದರಾಬಾದ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಒಡಿಶಾ ವಿರುದ್ಧ ತಾನು ಆಡಿದ ಮೊದಲ ಪಂದ್ಯದಲ್ಲಿ 1-0 ಗೋಲಿನಿಂದ ಜಯ ಗಳಿಸಿ ಶುಭ ಆರಂಭ ಕಂಡಿದೆ. ಒಡಿಶಾದ ಡಿಫೆನ್ಸ್ ವಿಭಾಗ ಸಂಪೂರ್ಣವಾಗಿ ವಿಫಲವಾಗಿರುವುದು ದಿಟ್ಟ ಹೋರಾಟದ ನಡುವೆ ಗೋಲು ಗಳಿಸುವಲ್ಲಿ ವಿಫಲವಾಗಲು ಪ್ರಮುಖ ಕಾರಣವಾಯಿತು.

ISL 7: ಎರಡೆರಡು ಗೋಲು ಸಿಡಿಸಿದ್ರೂ ಬೆಂಗಳೂರು FC ಗೆಲ್ಲಲಿಲ್ಲ, ಗೋವಾ FC ಸೋಲಲಿಲ್ಲ!...

ಹೈದರಾಬಾದ್ ಗೆ ಮುನ್ನಡೆ
ಅರಿದಾನೆ 34ನೇ ನಿಮಿಷದಲ್ಲಿ ಗಳಿಸಿದ ಪೆನಾಲ್ಟಿ ಗೋಲಿನಿಂದ ಹೈದರಾಬದ್ ತಂಡ ಇಲ್ಲಿ ನಡೆಯುತ್ತಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಒಡಿಶಾ ವಿರುದ್ಧ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿತು.

ಆರಂಭದಿಂದಲೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಹೈದರಾಬಾದ್ ತಂಡಕ್ಕೆ ಹೆಡರ್ ಮೂಲಕ ಗೋಲು ಗಳಿಸುವ ಅವಕಾಶ ಲಭಿಸಿತ್ತು ಆದರೆ ಚೆಂಡು ಗೋಲ್ ಬಾಕ್ಸ್ ನಿಂದ ಹೊರ ಸಾಗಿದ ಕಾರಣ ಹೈದರಾಬಾದ್ ಗೆ ಆರಂಭಿಕ ಮುನ್ನಡೆ ಸಿಗಲಿಲ್ಲ.

ಒಡಿಶಾ ಎಫ್ ಸಿ ತಂಡದ ಡಿಫೆನ್ಸ್ ವಿಭಾಗ ಈ ಬಾರಿಯೂ ಸುಧಾರಣೆ ಆದಂತೆ ಕಾಣಲಿಲ್ಲ. 34ನೇ ನಿಮಿಷದಲ್ಲಿ ಒಡಿಶಾದ ಸ್ಟೀವನ್ ವಿನ್ಸೆಂಟ್ ಅವರ ಕೈಗೆ ಚೆಂಡು ತಗಲಿದ ಕಾರಣ ಹೈದರಾಬಾದ್ ಗೆ ಪೆನಾಲ್ಟಿ ಅವಕಾಶ ಸಿಕ್ಕಿತು, ಅರಿದಾನೆ ಸ್ಯಾಂಟನಾ ಯಾವುದೇ ಪ್ರಮಾದ ಎಸಗದೆ ಅರ್ಶ್ ದೀಪ್ ಸಿಂಗ್ ಅವರನ್ನು ವಂಚಿಸಿ ತಂಡಕ್ಕೆ ಅಮೂಲ್ಯ ಮುನ್ನಡೆ ತಂದುಕೊಟ್ಟರು.