ಜೆಮ್‌ಶೆಡ್‌ಪುರ ವಿರುದ್ಧ ಮಿಂಚಿದ ಥಾಪ, ಚೆನ್ನೈಯನ್FC ಶುಭಾರಂಭ!
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಚೆನ್ನೈಯನ್ ಎಫ್‌ಸಿ ಶುಭಾರಂಭ ಮಾಡಿದೆ. ಅನಿರುದ್ ಥಾಪಾ ಆರಂಭದಲ್ಲೇ ಚೆನ್ನೈ ತಂಡಕ್ಕೆ ಮೇಲುಗೈ ತಂದುಕೊಟ್ಟ ಕಾರಣ ಚೆನ್ನೈ, ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು.
ಗೋವಾ(ನ.24): ಅನಿರುಧ್ ಥಾಪಾ (1ನೇ ನಿಮಿಷ) ಹಾಗೂ ಇಸ್ಮಾಯಿಲ್ ಗೊನ್ಸಾಲೀಸ್ (26ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಚೆನ್ನೈಯಿನ್ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಆರಂಭ ಕಂಡಿದೆ. ಜೆಮ್ಷೆಡ್ಪುರ ತಂಡದ ಪರ ನೆರಿಜಸ್ ವಾಸ್ಕಿಸ್ (37ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ದ್ವಿತಿಯಾರ್ಧದಲ್ಲಿ ಜೆಮ್ಷೆಡ್ಪುರ ಉತ್ತಮ ಹೋರಾಟ ನೀಡಿ ಚೆಂಡಿನ ಮೇಲೆ ಹಿಡಿತ ಸಾಧಿಸಿದರೂ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಫಲವಾಯಿತು.
ISL 7: ಒಡಿಶಾ ವಿರುದ್ಧ ಹೈದರಾಬಾದ್‌ಗೆ ಮೊದಲ ಗೆಲುವು!...
ಪ್ರಥಮಾರ್ಧದಲ್ಲಿ ಉತ್ತಮ ಹೋರಾಟ: ಅನಿರುಧ್ ಥಾಪಾ (1ನೇ ನಿಮಿಷ) ಮತ್ತು ಎಸ್ಮಾಯಿಲ್ ಗೊನ್ಸಾಲೀಸ್ (26ನೇ ನಿಮಿಷ) ಗಳಿಸಿದ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡ ಜೆಮ್ಷೆಡ್ಪುರ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 2-1 ಗೋಲುಗಳಿಂದ ಮುನ್ನಡೆ ಕಂಡಿದೆ, ಜೆಮ್ಷೆಡ್ಪುರ ಪರ ಭರವನಸೆಯ ಆಟಗಾರ ನೆರಿಜಸ್ ವಾಸ್ಕಿಸ್ (37ನೇ ನಿಮಿಷ) ಹೆಡರ್ ಮೂಲಕ ಗೋಲು ಗಳಿಸಿ ಪಂದ್ಯದ ಕುತೂಹಲ ಕಾಯ್ದರು.
ಚೆನ್ನೈಯಿನ್ ಗೆ 2-0 ಮುನ್ನಡೆ: ಪ್ರತಿಯೊಂದು ಹಂತದಲ್ಲೂ ಪಂದ್ಯದ ಮೇಲೆ ಮೇಲುಗೈ ಸಾಧಿಸಿದ ಚೆನ್ನೈಯಿನ್ ತಂಡಕ್ಕೆ 26ನೇ ನಿಮಿಷದಲ್ಲಿ ಮತ್ತೊಂದು ಯಶಸ್ಸು, ಈ ಬಾರಿ ಜೆಮ್ಷೆಡ್ಪುರ ತಂಡದ ಆಟಗಾರರೇ ಮಾಡಿದ ಪ್ರಮಾದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ವನಮಾಲ್ಸಾಮಾ ಛಕ್ಛುವಾಕ್ ಪೆನಾಲ್ಟಿ ವಲಯದಲ್ಲಿ ಚೆನ್ನೈಯಿನ್ ಆಟಗಾರನನ್ನು ಉದ್ದೇಶಪೂರ್ವಕವಾಗಿ ತಡೆ ಕಾರಣ ರೆಫರಿ ತಡಮಾಡದೆ ಪೆನಾಲ್ಟಿ ಘೋಷಿಸಿದರು. ಎಸ್ಮಾಯಿಲ್ ಗೊನ್ಸಾಲ್ವಿಸ್ ಯಾವುದೇ ಪ್ರಮಾದ ಎಸಗದೆ ಜೆಮ್ಷೆಡ್ಪುರ ಗೋಲ್ ಕೀಪರ್ ರೆಹನೇಶ್ ಅವರನ್ನು ವಂಚಿಸಿ ತಂಡದ ಪರ ಎರಡನೇ ಗೋಲು ಗಳಿಸಿದರು.
ಮೊದಲ ನಿಮಿಷದಲ್ಲೇ ಚೆನ್ನೈಗೆ ಯಶಸ್ಸು: ಪಂದ್ಯ ಆರಂಭಗೊಂಡ ಮೊಲ ನಿಮಿಷದಲ್ಲೇ ಅನಿರುಧ್ ಥಾಪಾ ಗಳಿಸಿ ಗೋಲಿನಿಂದ ಚೆನ್ನೈಯಿನ್ ತಂಡ ಮೇಲುಗೈ ಸಾಧಿಸಿತು. ಥಾಪಾ ಕಳೆದ ಋತುವಿನಲ್ಲೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಋತುವಿನಲ್ಲಿ ಇದುವರೆಗೂ ನಡೆದ ಪಂದ್ಯದಲ್ಲಿ ಮೊದಲ ನಿಮಿಷದಲ್ಲೇ ಗೋಲು ಗಳಿಸಿದ ತಂಡವೆಂದೆನಿಸಿತು. ಇದರೊಂದಿಗೆ ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಆರಂಭದಲ್ಲೇ ಆತಂಕಕ್ಕೆ ಈಡಾಯಿತು. ಥಾಪಾ ಪ್ರಸಕ್ತ ಋತುವಿನಲ್ಲಿ ಗೋಲು ಗಳಿಸಿದ ಮೊದಲ ಭಾರತೀಯ ಆಟಗಾರರೆನಿಸಿದರು. 7ನೇ ನಿಮಿಷದಲ್ಲಿ ಜೆಮ್ಷೆಡ್ಪುರ ತಂಡಕ್ಕೆ ಹೆಡರ್ ಮೂಲಕ ಗೋಲು ಗಳಿಸಿ ಸಮಬಲ ಸಾಧಿಸುವ ಅವಕಾಶ ಉತ್ತಮವಾಗಿತ್ತು, ಆದರೆ ನಾಯಕ ವಿಲಿಯಮ್ ಹಾರ್ಟ್ಲಿ ಯಶಸ್ಸು ಕಾಣುವಲ್ಲಿ ವಿಫಲರಾದರು.