ಕೊರೋನಾ ವೈರಸ್ ಎಫೆಕ್ಟ್: ಉರುಗ್ವೆ ಕೋಚ್ ಸೇರಿ 400 ಮಂದಿ ವಜಾ!
ಕೊರೋನಾ ವೈರಸ್ ಎಫೆಕ್ಟ್ ಇದೀಗ ಫುಟ್ಬಾಲ್ ತಂಡಕ್ಕೂ ತಟ್ಟಿದೆ. ಇದೀಗ ಉರುಗ್ವೆಯಲ್ಲಿ ಫುಟ್ಬಾಲ್ ಕೋಚ್ ಸೇರಿದಂತೆ ನಾನೂರು ಸಿಬ್ಬಂದಿಗಳನ್ನು ವಜಾ ಮಾಡಿದೆ ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಮೊಂಟೆವಿಡಿಯೋ(ಮಾ.29): ಕೊರೋನಾ ಸೋಂಕು ಕ್ರೀಡಾ ಜಗತ್ತಿಗೆ ಭಾರೀ ಪೆಟ್ಟು ನೀಡುತ್ತಿದ್ದು, ಉರುಗ್ವೆ ಫುಟ್ಬಾಲ್ ಸಂಸ್ಥೆ (ಎಯುಎಫ್) ತನ್ನ ರಾಷ್ಟ್ರೀಯ ತಂಡದ ಕೋಚ್ ಆಸ್ಕರ್ ತಬರೇಜ್ ಸೇರಿದಂತೆ 400 ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ.
ಕೊರೋನಾದಿಂದಾಗಿ ಆಟಗಾರರಿಗೆ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ
‘ಕೊರೋನಾದಿಂದ ಎಲ್ಲಾ ಫುಟ್ಬಾಟ್ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಭಾರೀ ಆರ್ಥಿಕ ನಷ್ಟಎದುರಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಸಮಸ್ಯೆಯನ್ನು ಸರಿಪಡಿಸಬೇಕಿದ್ದರೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ’ ಎಂದು ಎಯುಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಜಾಗೊಂಡ ಸಿಬ್ಬಂದಿಗೆ ನಿರುದ್ಯೋಗ ವಿಮೆಗೆ ಅರ್ಜಿ ಹಾಕುವಂತೆ ಸೂಚಿಸಲಾಗಿದೆ.
ಕಚ್ಚಾ ತೈಲ ಬೆಲೆ ಭಾರಿ ಕುಸಿತ : ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?
ತಬರೇಜ್ 2006ರಿಂದಲೂ ಉರುಗ್ವೆ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಬರೇಜ್ ಮಾರ್ಗದರ್ಶನದಲ್ಲಿ ಉರುಗ್ವೆ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನು ಕೋಪಾ ಅಮೆರಿಕಾ ಪ್ರಶಸ್ತಿಯನ್ನು ಉರುಗ್ವೆ ತಂಡ ಬಾಚಿಕೊಂಡಿತ್ತು.
ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಉರುಗ್ವೆಗೂ ಇದರ ಬಿಸಿ ತಟ್ಟಿದೆ. ಶುಕ್ರವಾರದ ಅಂತ್ಯದ ವೇಳೆಗೆ ಉರುಗ್ವೆಯಲ್ಲಿ 274 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ