ಲೆಬನಾನ್‌ ತಂಡವನ್ನು ಸೋಲಿಸಿ ಇಂಟರ್‌ಕಾಂಟಿನೆಂಟಲ್‌ ಕಪ್‌ ಗೆದ್ದ ಭಾರತ

ಇಂಟರ್‌ಕಾಂಟಿನೆಂಟಲ್ ಕಪ್ 2023 ರ ಫೈನಲ್‌ನಲ್ಲಿ ಸುನಿಲ್ ಛೆಟ್ರಿ ಮತ್ತು ಲಾಲಿಯನ್ಜುವಾಲಾ ಚಾಂಗ್ಟೆ ಅವರು ಬಾರಿಸಿದ  ಗೋಲುಗಳ ನೆರವಿನಿಂದ ಭಾರತ ತಂಡ 2-0 ಗೋಲುಗಳಿಂದ ಲೆಬನಾನ್‌ ತಂಡವನ್ನು ಸೋಲಿಸಿ ಚಾಂಪಿಯನ್‌ ಆಯಿತು.
 

Chhetri and Chhangte Helps India Beat  Lebanon in Intercontinental Cup Football final san

ಭುವನೇಶ್ವರ (ಜೂ.18): ಅದ್ಭುತ ಪ್ರದರ್ಶನ ತೋರಿದ ಭಾರತ ತಂಡ ಭಾನುವಾರ ನಡೆದ ಇಂಟರ್‌ ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಲೆಬನಾನ್‌ ತಂಡವನ್ನು ಸೋಲಿಸಿ ಚಾಂಪಿಯನ್‌ ಆಗಿದೆ. ಭಾರತ ತಂಡದ ನಾಯಕ ಸುನೀಲ್‌ ಛೇಟ್ರಿ ಫೈನಲ್‌ ಪಂದ್ಯದ ಮೊದಲ ಗೋಲನ್ನು ಸಿಡಿಸುವ ಮೂಲಕ ಇಗೋರ್‌ ಸ್ಟಿಮಾಕ್‌ ತರಬೇತಿಯ ಬ್ಲ್ಯೂ ಟೈಗರ್ಸ್‌ ತಂಡ ಯುವ ಲೆಬನಾನ್‌ ತಂಡವನ್ನು ಬಗ್ಗುಬಡಿಯಲು ನೆರವಾದರು. ಭುವನೇಶ್ವರದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತದ ಸಾರ್ವಕಾಲಿಕ ಗರಿಷ್ಠ ಗೋಲು ಸ್ಕೋರರ್‌f ಆಗಿರುವ ಸುನೀಲ್‌ ಛೇಟ್ರಿ ತಮ್ಮ ನಾಯಕನ ನಿರೀಕ್ಷೆಯನ್ನು ಉಳಿಸಿಕೊಂಡರು. ಅದರೊಂದಿಗೆ ಭಾರತ ತಂಡ 2-0 ಗೋಲುಗಳಿಂದ ಲೆಬನಾನ್‌ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇಂಟರ್‌ಕಾಂಟಿನೆಂಟಲ್‌ ಕಪ್‌ನಲ್ಲಿ ಭಾರತ ಹಾಗೂ ಲೆಬನಾನ್‌ ತಂಡಗಳು ಇದಕ್ಕೂ ಮುನ್ನ ಕೂಡ ಭೇಟಿಯಾಗಿದ್ದವು. ಆದರೆ, ಅಲ್ಲಿ ಸುನೀಲ್‌ ಛೇಟ್ರಿ ಗೋಲು ಬಾರಿಸಲು ವಿಫಲವಾಗಿದ್ದರು. ಆದರೆ, ಫೈನಲ್‌ ಪಂದ್ಯದಲ್ಲಿ ಮೊದಲ ಅವಧಿಯ ಆಟದಲ್ಲಿ ಸುನೀಲ್‌ ಛೇಟ್ರಿ ಆಕರ್ಷಕ ನಿರ್ವಹಣೆ ತೋರಿದರು. ಛೇಟ್ರಿ ಮೂಲಕ ಭಾರತ ಪಂದ್ಯದಲ್ಲಿ ಮೊದಲ ಗೋಲು ಬಾರಿಸಿದ್ದರು. ಲಾಲಿಯನ್ಜುವಾಲಾ ಚಾಂಗ್ಟೆ ನೀಡಿದ ಆಕರ್ಷಕ ಪಾಸ್‌ನಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಛೇಟ್ರಿ ಗಮನಸೆಳೆದಿದ್ದರು.

2ನೇ ಅವಧಿಯ ಆಟದಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿದ ಛೇಟ್ರಿ 46ನೇ ನಿಮಿಷದಲ್ಲಿ ಗೋಲು ಸಿಡಿಸಿದ್ದರು. ಛೇಟ್ರಿ ಗೋಲಿನೊಂದಿಗೆ ಮುನ್ನಡೆ ಪಡೆದುಕೊಂಡ ಭಾರತ ಮತ್ತಷ್ಟು ಆಕ್ರಮಣಕಾರಿಯಾಗಿ ಆಟವಾಡಲು ಆರಂಭಿಸಿತು. ಇದರಿಂದಾಗಿ ಪಂದ್ಯದ 66ನೇ ನಿಮಿಷದಲ್ಲಿ ಲಾಲಿಯನ್ಜುವಾಲಾ ಚಾಂಗ್ಟೆ ಗೋಲು ಸಿಡಿಸುವ ಮೂಲಕ ಸ್ಕೋರ್‌ಶೀಟ್‌ನಲ್ಲಿ ತಮ್ಮ ಹೆಸರನ್ನು ಸೇರಿಸಿದರು.

ಛೇಟ್ರಿಯಿಂದ ಚೆಂಡನ್ನು ಪಡೆದುಕೊಂಡ ಮಹೇಶ್ ಅದನ್ನು ಗೋಲುಪೆಟ್ಟಿಗೆಗೆ ಬಾರಿಸಿದ್ದರು. ಆಸದರೆ, ಇದನ್ನು ಅಲಿ ಅಬೇಕ್‌ ತಡೆಯುವಲ್ಲಿ ಯಶ ಕಂಡಿದ್ದರು. ಸಬೇಕ್‌ ಮಹೇಶ್‌ ಅವರ ಪ್ರಯತ್ನವನ್ನು ವಿಫಲ ಮಾಡಿದರೂ, ಗೋಲು ಪೆಟ್ಟಿಗೆಯ ಸಮೀಪದಲ್ಲಿಯೇ ಇದ್ದ ಚಾಂಗ್ಟೆ ಚೆಂಡನ್ನು ಗುರಿ ಸೇರಿಸುವುದರೊಂದಿಗೆ ಭಾರತ 2-0 ಮುನ್ನಡೆ ಕಂಡಿತು.

ಇನ್ನು ಲೆಬನಾನ್‌ ತಂಡದ ಪಾಲಿಗೆ ಗೋಲು ಬಾರಿಸುವ ಉತ್ತಮ ಅವಕಾಶ 80ನೇ ನಿಮಿಷದಲ್ಲಿ ಬಂದಿತ್ತು. ನಾಯಕ ಹಸನ್‌ ಮಾಟೌಕ್‌ ಲೆಫ್ಟ್‌ ವಿಂಗ್‌ನಿಂದ ಬಂದ ಕೆಳಮಟ್ಟದ ಕ್ರಾಸ್‌ಅನ್ನು ಗೋಲುಪೆಟ್ಟಿಗೆಗೆ ಸೇರಿಸುವ ಹಾದಿಯಲ್ಲಿ ವಿಫಲವಾದರು.

2026ರ ಫಿಫಾ ವಿಶ್ವಕಪ್‌ನಲ್ಲಿ ಆಡಲ್ಲ: ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

ಕೊನೆಯ ಹಂತದಲ್ಲಿ ಸೂಪರ್‌ ಸ್ಟಾರ್‌ ಸಂದೇಶ್‌ ಜಿಂಗಾನ್‌ ಅವರ ರಕ್ಷಣಾತ್ಮಕ ಆಟ ಲೆಬನಾನ್‌ಗೆ ಗೋಲು ಬಾರಿಸುವ ಯಾವುದೇ ಅವಕಾಶ ನೀಡಲಿಲ್ಲ. ಇದರೊಂದಿಗೆ ಭಾರತ ಇಂಟರ್‌ ಕಾಂಟಿನೆಂಟಲ್‌ ಕಪ್‌ ಗೆದ್ದುಕೊಂಡಿತು. ಇದಕ್ಕೂ ಮುನ್ನ ಭಾರತ ತಂಡ ಮಂಗೋಲಿಯಾ, ವನೌಟು ತಂಡದ ವಿರುದಧ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಲೆಬನಾನ್‌ ವಿರುದ್ದ ಲೀಗ್‌ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿತ್ತು.

ಗೆಲುವಿನ ಗೋಲು ಬಾರಿಸಿ ತಂದೆಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ಸುನಿಲ್ ಚೆಟ್ರಿ..!

Latest Videos
Follow Us:
Download App:
  • android
  • ios