Asianet Suvarna News Asianet Suvarna News

ಗೆಲುವಿನ ಗೋಲು ಬಾರಿಸಿ ತಂದೆಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ಸುನಿಲ್ ಚೆಟ್ರಿ..! ವಿಡಿಯೋ ವೈರಲ್

ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ಮಿಂಚಿನ ಆಟ
ಗೋಲು ಬಾರಿಸಿ ತಾವು ತಂದೆಯಾಗುತ್ತಿರುವ ಗುಡ್‌ ನ್ಯೂಸ್ ಕೊಟ್ಟ ಚೆಟ್ರಿ
ಸಾಮಾಜಿಕ ಜಾಲತಾಣಗಳಲ್ಲಿ ಸುನಿಲ್ ಚೆಟ್ರಿ ಸೆಲಿಬ್ರೇಷನ್ ವೈರಲ್

Football Star Sunil Chhetri Announces Wife Preganancy In Epic Manner kvn
Author
First Published Jun 13, 2023, 3:50 PM IST

ಭುವನೇಶ್ವರ(ಜೂ.13): ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್‌ ಚೆಟ್ರಿ, ಇಂಟರ್‌ಕಾಂಟಿನೆಂಟರ್ ಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಾನವಾಟು ಎದುರಿನ ಪಂದ್ಯದಲ್ಲಿ ಸುನಿಲ್ ಚೆಟ್ರಿ ಗೆಲುವಿನ ಗೋಲು ಬಾರಿಸುವ ಮೂಲಕ ತಮ್ಮ ಪತ್ನಿ ಗರ್ಭಿಣಿಯಾಗಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಜೂನ್‌ 12ರಂದು ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ಭಾರತ ಹಾಗೂ ವಾನವಾಟು ತಂಡಗಳು ಮುಖಾಮುಖಿಯಾಗಿದ್ದವು. ಭಾರತದ ಫುಟ್ಬಾಲ್ ದಂತಕಥೆ ಸುನಿಲ್ ಚೆಟ್ರಿ, ಎಂದಿನಂತೆ ತಮ್ಮ ಅದ್ಭುತ ಕಾಲ್ಚಳಕದ ಮೂಲಕ ಮೂಲಕ ಪಂದ್ಯದ 81ನೇ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಫ್ರೆಂಚ್‌ ಓಪನ್‌ ಗೆದ್ದ ಜೋಕೋವಿಚ್, ಇಗಾ ಸ್ವಿಯಾಟೆಕ್‌ಗೆ ನಂ.1 ಪಟ್ಟ

ಸುನಿಲ್ ಚೆಟ್ರಿ ಆಕರ್ಷಕ ಗೋಲು ಬಾರಿಸುತ್ತಿದ್ದಂತೆಯೇ ಕುಣಿದುಕುಪ್ಪಳಿಸಿದರು. ಗೋಲು ಪಟ್ಟಿ ಸೇರಿದ ಚೆಂಡನ್ನು ಹಿಡಿದುಕೊಂಡ ಚೆಟ್ರಿ, ಜರ್ಸಿಯ ಒಳಗಡೆ ಹೊಟ್ಟೆಯ ಭಾಗದಲ್ಲಿ ಹಾಕಿಕೊಂಡು ಭಾವನಾತ್ಮಕವಾಗಿ ತಮ್ಮ ಪತ್ನಿ ಗರ್ಭಿಣಿಯಾಗಿರುವ ಸಿಹಿ ಸುದ್ದಿಯನ್ನು ಫುಟ್ಬಾಲ್ ಜಗತ್ತಿಗೆ ಅನಾವರಣ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.

ಇನ್ನು ಈ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಸುನಿಲ್ ಚೆಟ್ರಿ, "ನಾನು ಹಾಗೂ ನನ್ನ ಪತ್ನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಚಾರವನ್ನು ಇಡೀ ಜಗತ್ತಿಗೆ ಈ ರೀತಿ ವಿಷಯ ಮುಟ್ಟಿಸಿದ್ದೇನೆ" ಎಂದು ಹೇಳಿದ್ದಾರೆ.

ಫೈನಲ್‌ಗೇರಿದ ಭಾರತ: ಭಾರತ ತಂಡದ ಅನುಭವಿ ಸ್ಟ್ರೈಕರ್ ಸುನಿಲ್ ಚೆಟ್ರಿ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಭಾರತ ತಂಡವು 2023ನೇ ಸಾಲಿನ ಇಂಟರ್‌ಕಾಂಟಿನೆಂಟಲ್ ಟೂರ್ನಿಯಲ್ಲಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿತ್ತು. ಭಾರತ ಹಾಗೂ ವಾನವಾಟು ತಂಡಗಳ ನಡುವಿನ ಪಂದ್ಯವು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. 80 ನಿಮಿಷಗಳ ವರೆಗೂ ಯಾವೊಂದು ತಂಡವು ಗೋಲು ಬಾರಿಸಲು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಗುವ ಸಾಧ್ಯತೆಯಿತ್ತು. ಈ ಸಂದರ್ಭದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಸುನಿಲ್‌ ಚೆಟ್ರಿ ಸಮಯೋಚಿತ ಗೋಲು ಬಾರಿಸುವ ಮೂಲಕ ತಂಡಕ್ಕೆ 3 ಅಂಕಗಳ ಉಡುಗೊರೆ ನೀಡಿದರು. ಈ ಗೆಲುವಿನೊಂದಿಗೆ ಭಾರತ ತಂಡವು ತವರಿನಲ್ಲಿ ಸತತ 7ನೇ ಬಾರಿಗೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. 

ಸದ್ಯ ಭಾರತ ತಂಡವು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಜೂನ್ 15ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಲೆಬನಾನ್ ತಂಡವನ್ನು ಎದುರಿಸಲಿದೆ. 

Follow Us:
Download App:
  • android
  • ios