Weird News: ಕೇರಳ ಪೊಲೀಸ್ ಜೀಪ್‌ಗೆ ಬಡಿದ ಚೆಂಡು; ಪೊಲೀಸರಿಂದ ಫುಟ್ಬಾಲ್ ಆರೆಸ್ಟ್!
* ಕೇರಳ ಪೊಲೀಸ್ ಜೀಪ್‌ಗೆ ಬಡಿದ ಫುಟ್ಬಾಲ್; ಚೆಂಡನ್ನು ಆರೆಸ್ಟ್ ಮಾಡಿದ ಪೊಲೀಸರು
* ಎರ್ನಾಕುಲಂ ಸಮೀಪದ ನೆಟ್ಟೂರಿನಲ್ಲಿ ನಡೆದ ವಿಚಿತ್ರ ಘಟನೆ
* ಚೆಂಡು ಆರೆಸ್ಟ್‌ಗೆ ವಿಚಿತ್ರ ಕಾರಣ ಕೊಟ್ಟ ಪೊಲೀಸರು
ಕೊಚ್ಚಿ(ಜು.31): ಭೂಮಿ ಮೇಲೆ ಕೆಲವೊಮ್ಮೆ ಎಂತೆಂಥಾ ಘಟನೆಗಳು ನಡೆಯುತ್ತೆ ಅಂದ್ರೆ, ಕೆಲವೊಮ್ಮೆ ಅಂತಹ ಘಟನೆಗಳನ್ನು ನಂಬಲೂ ಸಾಧ್ಯವಿಲ್ಲ. ಇದೀಗ ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳದಲ್ಲಿ ಮಕ್ಕಳು ಆಡುತ್ತಿದ್ದ ಫುಟ್ಬಾಲ್ ಅನ್ನೇ ಪೊಲೀಸರು ಆರೆಸ್ಟ್ ಮಾಡಿದ ವಿಚಿತ್ರ ಘಟನೆ ನಡೆದಿದೆ.
ಹೌದು, ಇಲ್ಲಿನ ಎರ್ನಾಕುಲಂ ಸಮೀಪದ ನೆಟ್ಟೂರು ಎಂಬಲ್ಲಿ ಮಕ್ಕಳು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದರು. ಆಗ ಅವರು ಆಡುತ್ತಿದ್ದ ಫುಟ್ಬಾಲ್, ಪೊಲೀಸರ ಜೀಪಿಗೆ ಬಡಿದಿದೆ. ಆಗ ಪೊಲೀಸರು ಫುಟ್ಬಾಲ್ ಅನ್ನು ವಶಕ್ಕೆ ಪಡೆದಿದ್ದಾರೆ. ದಾರಿಹೋಕರಿಗೆ ತೊಂದರೆಯಾಗುವ ರೀತಿಯಲ್ಲಿ ಅಸುರಕ್ಷಿತವಾಗಿ ಆಟವಾಡುತ್ತಿದ್ದರು, ಹೀಗಾಗಿ ಚೆಂಡನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪಣಂಗಾಡು ಪೊಲೀಸರು ತಿಳಿಸಿದ್ದಾರೆ. ಕಳೆದ ಶುಕ್ರವಾರ ಮಕ್ಕಳು ನೆಟ್ಟೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಫುಟ್ಬಾಲ್ ಆಡುತ್ತಿದ್ದಾಗ ಪೊಲೀಸರು ಫುಟ್ಬಾಲ್ ಆರೆಸ್ಟ್ ಮಾಡಿದ್ದಾರೆ.
ಮಕ್ಕಳು ಆಟವಾಡುತ್ತಾ ಇದ್ದ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀಪನ್ನು ಮೈದಾನದಲ್ಲಿಯೇ ನಿಲ್ಲಿಸಿದ್ದಾರೆ. ಆಗ ಮಕ್ಕಳು ಫುಟ್ಬಾಲ್, ಜೀಪಿಗೆ ಬಡಿಯಬಹುದು ಎಂದು ತಿಳಿಸಿದರೂ ಸಹಾ ಅದನ್ನು ನಿರ್ಲಕ್ಷಿಸಿ ಅಲ್ಲಿಯೇ ಜೀಪನ್ನು ನಿಲ್ಲಿಸಿದ್ದರು.
ಫುಟ್ಬಾಲ್ ಪಂದ್ಯದಲ್ಲಿ ಸಿಕ್ಸ್-ಪ್ಯಾಕ್ ತೋರಿಸಿದ ಇಬ್ರಾಹಿಂ ಅಲಿ ಖಾನ್..! 90ರ ದಶಕದ ಸೈಫ್ ಎಂದ ಫ್ಯಾನ್ಸ್
ಇದಾದ ಬಳಿಕ ಮಕ್ಕಳು ಫುಟ್ಬಾಲ್ ಆಟ ಮುಂದುವರೆಸಿದ್ದಾರೆ. ಆಗ ಚೆಂಡು ಪೊಲೀಸರ ಜೀಪಿನ ಕಿಟಕಿಗೆ ಅಪ್ಪಳಿದೆ. ಇದಾದ ಬಳಿಕ ಅಲ್ಲಿನ ಪರಿಸ್ಥಿತಿ ಬದಲಾಗಿ ಹೋಗಿದೆ. ಈ ಘಟನೆಯಿಂದ ಕೆರಳಿದ ಪೊಲೀಸರು ಸಿಟ್ಟಾಗಿ ಮಕ್ಕಳ ಆಟವನ್ನು ನಿಲ್ಲಿಸಿದ್ದು ಮಾತ್ರವಲ್ಲದೇ ಚೆಂಡನ್ನು ಸೀಜ್ ಮಾಡಿದ್ದಾರೆ. ನೆಟ್ಟೂರಿನ ಸಬ್‌ಇನ್‌ಸ್ಪೆಕ್ಟರ್ ನೇತೃತ್ವದಲ್ಲಿಯೇ ಈ ಘಟನೆ ನಡೆದಿದೆ. ಮೈದಾನದಲ್ಲಿ ಆಡುತ್ತಿದ್ದ ಮಕ್ಕಳು ತಮಗೆ ಫುಟ್ಬಾಲ್ ವಾಪಾಸ್ ನೀಡಿ ಎಂದು ಪ್ರತಿಭಟಿಸಿದರೂ. ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳು ಫುಟ್ಬಾಲ್ ವಾಪಾಸ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವ ಈ ವಿಚಿತ್ರ ಘಟನೆಯನ್ನು ದಾರಿಹೋಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮಕ್ಕಳು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿರುವುದರಿಂದ ದಾರಿಹೋಕರಿಗೆ ಅಸುಕ್ಷಿತ ಭಾವನೆ ಮೂಡುವಂತೆ ಮಾಡಿದೆ. ಈ ಕಾರಣಕ್ಕಾಗಿಯೇ ಚೆಂಡನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿಚಿತ್ರ ಕಾರಣ ನೀಡಿ ಸಮರ್ಥಿಸಿಕೊಂಡಿದ್ದಾರೆ. ಮಕ್ಕಳು ತಾವು ಮಾಡಿದ ತಪ್ಪನ್ನು ಅರಿತುಕೊಳ್ಳಲು ಫುಟ್ಬಾಲ್ ಅನ್ನು ತೆಗೆದುಕೊಂಡು ಹೋಗಲಾಗಿದೆ. ಇನ್ನು ಈ ಹಿಂದೆ ಅಮಲಿನ ಕಾರಣಕ್ಕೆ ವಿಚಾರಣೆಗೊಳಗಾಗಿದ್ದ ಹುಡುಗ ಕೂಡಾ ಫುಟ್ಬಾಲ್ ಆಡುವವರ ಗುಂಪಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ ಹುಡುಗ ಉದ್ದೇಶಪೂರ್ವಕವಾಗಿಯೇ ಪೊಲೀಸರ ಜೀಪಿಗೆ ಚೆಂಡು ಅಪ್ಪಳಿಸುವಂತೆ ಮಾಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಏಕದಿನ ವಿಶ್ವಕಪ್‌ಗೆ ಈ ನಾಲ್ವರ ಪೈಕಿ ಯಾರಾಗಲಿದ್ದಾರೆ ಟೀಂ ಇಂಡಿಯಾ ವಿಕೆಟ್ ಕೀಪರ್?
ಇನ್ನು ಇದೇ ಸಂದರ್ಭದಲ್ಲಿ ಪೊಲೀಸರು, ನಾವು ಮಕ್ಕಳು ಫುಟ್ಬಾಲ್ ಆಡುವುದರ ವಿರುದ್ದವಾಗಿ ಇಲ್ಲ. ಅವರು ಯಾವಾಗ ಬೇಕಾದರೂ ಸ್ಟೇಷನ್‌ಗೆ ಬಂದು ಚೆಂಡನ್ನು ತೆಗೆದುಕೊಂಡು ಹೋಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.