Asianet Suvarna News Asianet Suvarna News

ಫುಟ್ಬಾಲ್ ಪಂದ್ಯದಲ್ಲಿ ಸಿಕ್ಸ್‌-ಪ್ಯಾಕ್ ತೋರಿಸಿದ ಇಬ್ರಾಹಿಂ ಅಲಿ ಖಾನ್‌..! 90ರ ದಶಕದ ಸೈಫ್ ಎಂದ ಫ್ಯಾನ್ಸ್‌

ಸಿಕ್ಸ್‌ ಪ್ಯಾಕ್ಸ್‌ ತೋರಿಸಿ ಮಿಂಚಿದ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್
ಭಾನುವಾರ ಫುಟ್ಬಾಲ್ ಆಡಿ, ಬಳಿಕ ಶರ್ಟ್‌ಲೆಸ್ ಪೋಸ್‌ ನೀಡಿದ ಇಬ್ರಾಹಿಂ ಅಲಿ ಖಾನ್
ಈತ 90ರ ದಶಕದ ಸೈಫ್ ಅಲಿ ಖಾನ್ ಎಂದು ಬಣ್ಣಿಸಿದ ನೆಟ್ಟಿಗರು

Ibrahim Ali Khan goes shirtless post football match flaunts six pack abs video goes viral kvn
Author
First Published Jul 31, 2023, 2:23 PM IST

ಮುಂಬೈ(ಜು.31): ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಹಾಗೂ ಅಮ್ರಿತಾ ಸಿಂಗ್ ಪುತ್ರ. ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಅಲಿ ಖಾನ್ ಅವರ ಸಹೋದರ ಆಗಾಗ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದ ಭಾನುವಾರ, ಜುಲೈ 30ರಂದು ಜುಹು ಸ್ಪೋರ್ಟ್ಸ್‌ ಮೈದಾನದಲ್ಲಿ ಮಳೆಯ ನಡುವೆಯೂ ಇಬ್ರಾಹಿಂ ಅಲಿ ಖಾನ್‌, ಫುಟ್ಬಾಲ್ ಆಡಿ ಗಮನ ಸೆಳೆದಿದ್ದಾರೆ. ಇನ್ನು ಪಂದ್ಯ ಮುಕ್ತಾಯದ ಬಳಿಕ, ಮೈದಾನದಿಂದ ಹೊರಬರುವ ವೇಳೆಯಲ್ಲಿ ಶರ್ಟ್‌ಲೆಸ್ ಆಗಿ ಸಿಕ್ಸ್‌-ಪ್ಯಾಕ್‌ ತೋರಿಸುತ್ತಾ ವಾಪಾಸ್ಸಾಗುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬಿಳಿ ಟಿ ಶರ್ಟ್‌ ತೊಟ್ಟಿದ್ದ ಇಬ್ರಾಹಿಂ ಅಲಿ ಖಾನ್, ಫುಟ್ಬಾಲ್ ಆಡಿ ಮೈದಾನದಿಂದ ವಾಪಾಸ್ಸಾಗುವ ವೇಳೆಯಲ್ಲಿ, ತಮ್ಮ ಮಳೆಯಲ್ಲಿ ತೊಯ್ದಿದ್ದ ಟಿ ಶರ್ಟ್ ಹಿಂಡುತ್ತಾ ಬರುವ ವೇಳೆ ಅವರ ಸುಂದರ ಸಿಕ್ಸ್‌ ಪ್ಯಾಕ್‌ ದರ್ಶನವಾಗಿದೆ. ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಇಬ್ರಾಹಿಂ ಅಲಿ ಖಾನ್ ಅವಕಾಶ ಮಾಡಿಕೊಟ್ಟಿದ್ದಾರೆ.

ತಾನೇ ತೋಡಿಕೊಂಡ ಹಳ್ಳಕ್ಕೆ ತಾವೇ ಬಿದ್ದರಾ ಶುಭ್‌ಮನ್ ಗಿಲ್..?

ವೈರಲ್ ಭವಾನಿ ಎನ್ನುವ ನೆಟ್ಟಿಗನೊಬ್ಬ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಇದರ ಜತೆಗೆ "ಬೇಸಿಗೆ ಕಾಲ ಬಂದಿದೆಯೋ ಏನೋ?, ಅಬ್ಬಾ ನಾನು ಕಳೆದ 5 ಗಂಟೆಗಳಿಂದ ಇದನ್ನು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

 
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಹಲವು ನೆಟ್ಟಿಗರು ಇಬ್ರಾಹಿಂ ಅಲಿ ಖಾನ್ ಅವರು ತಂದೆ ಸೈಫ್ ಅಲಿ ಖಾನ್ ಅವರ ರೀತಿಯಲ್ಲೇ ಹೋಲಿಕೆ ಹೊಂದಿರುವುದನ್ನು ಗಮನಿಸಿದ್ದಾರೆ. ಈ ಪೈಕಿ ಓರ್ವ ನೆಟ್ಟಿಗ ತಂದೆಗಿಂತಲೂ ಹೆಚ್ಚು ಹ್ಯಾಂಡ್ಸಮ್‌ ಆಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೋರ್ವ ನೆಟ್ಟಿಗ, ಸೈಫ್ ಅಲಿ ಖಾನ್ ಅವರ ಜೆರಾಕ್ಸ್ ಕಾಫಿ ಎಂದು ಕಮೆಂಟ್ ಮಾಡಿದ್ದಾನೆ. ಮತ್ತೋರ್ವ ನೆಟ್ಟಿಗ, ಈತನಂತೂ ನಮ್ಮ ನಿಮ್ಮ ಕಾಲದ ಸೈಫ್ ರೀತಿಯಲ್ಲಿಯೇ ಕಾಣುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.

Kylian Mbappe:ಸೌದಿ ಕ್ಲಬ್‌ ರಾಜಾತಿಥ್ಯ ತಿರಸ್ಕರಿಸಿ ಎಂಬಾಪೆ ಕಳೆದುಕೊಂಡಿದ್ದೇನು?

ಫಲಕ್‌ ತಿವಾರಿ ಜತೆ ಇಬ್ರಾಹಿಂ ಡೇಟಿಂಗ್?

ಹಿಂದಿ ಕಿರಿತೆರೆ ನಟಿ ಶ್ವೇತಾ ತಿವಾರಿ ಪುತ್ರಿ ಫಲಕ್‌ ತಿವಾರಿ ಜತೆ ಸೈಫ್ ಅಲಿ ಖಾನ್‌ ಪುತ್ರ ಇಬ್ರಾಹಿಂ ಅಲಿ ಖಾನ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಫಲಕ್ ತಿವಾರಿ, ಸಲ್ಮಾನ್ ಖಾನ್  ನಟನೆಯ ಕಿಸಿ ಕಾ ಬಾಯ್, ಕಿಸಿ ಕಾ ಜಾನ್ ಎನ್ನುವ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಇಬ್ರಾಹಿಂ ಅಲಿ ಖಾನ್ ಜತೆಗೆ ಫಲಕ್ ತಿವಾರಿ ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಈ ಇಬ್ಬರು ಒಟ್ಟಾಗಿಯೇ ಸಿನಿಮಾವೊಂದನ್ನು ವೀಕ್ಷಿಸಿದ್ದರು. ಹೀಗಾಗಿ ಇಬ್ರಾಹಿಂ ಅಲಿ ಖಾನ್ ಹಾಗೂ ಫಲಕ್ ತಿವಾರಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವಂತ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಚರ್ಚೆಯಾಗುತ್ತಿದೆ.

Follow Us:
Download App:
  • android
  • ios