Asianet Suvarna News Asianet Suvarna News

ಸೈಕಲ್‌ನಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ Zomato ಡಲಿವರಿ ಬಾಯ್‌, ಬೈಕ್ ಕೊಡಿಸಲು ಮುಂದಾದ ನೆಟ್ಟಿಗರು

12 ವರ್ಷ ಶಿಕ್ಷಕರಾಗಿದ್ದವರು ಈಗ Zomato ಡಲಿವರಿ ಬಾಯ್‌ (Delivery Boy). ಸುಡು ಬಿಸಿಲಿನಲ್ಲೂ ಸೈಕಲ್‌ ತುಳಿದುಕೊಂಡೇ ಹೋಗಿ ಫುಡ್ ಡೆಲಿವರಿ ಮಾಡ್ತಾರೆ. ವ್ಯಕ್ತಿಯ ಪರಿಶ್ರಮವನ್ನು ಟ್ವಿಟರ್ (Twitter) ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ನೆಟ್ಟಿಗರು ಹಣ ಸೇರಿಸಿ ಬೈಕ್ (Bike) ಕೊಡಿಸಲು ಮುಂದಾಗಿದ್ದಾರೆ.

Zomato Boy Delivers Food On A CycleIn Heat Twitter Assembled To Buy Him A Bike Vin
Author
Bengaluru, First Published Apr 12, 2022, 5:04 PM IST | Last Updated Apr 12, 2022, 5:04 PM IST

ದೇಶಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಉತ್ತರಭಾರತವಂತೂ ಅತ್ಯಧಿಕ ತಾಪಮಾನದ (Heat) ದಿನಗಳನ್ನು ಎದುರಿಸುತ್ತಿದೆ. ಜನರು ಮನೆಯಿಂದ ಹೊರಬರಲೇ ಹಿಂಜರಿಯುತ್ತಿದ್ದಾರೆ. ಅನಿವಾರ್ಯವಾಗಿ ಮನೆಯಿಂದ ಹೊರ ಬರಬೇಕಾದವರು ಛತ್ರಿ, ಶಾಲ್‌ ಇಲ್ಲದೆ ಹೊರಬರುತ್ತಿಲ್ಲ. ಇನ್ನು ಕೆಲವರು ಕಾರಿಲ್ಲದೆ ಮನೆಯಿಂದ ಹೊರಗೆ ಕಾಲಿಡುತ್ತಲೇ ಇಲ್ಲ. ಆದ್ರೆ ಜನಸಾಮಾನ್ಯರ ಪರಿಸ್ಥಿತಿ ಹಾಗಿಲ್ಲ. ಹೊತ್ತಿನ ಊಟಕ್ಕೆ ದುಡಿಯುವವರು ದುಡಿಯಲೇಬೇಕು. ಮಳೆ, ಗಾಳಿ, ಬಿಸಿಲಿನ ಲೆಕ್ಕವಿಡದೆ ಕೆಲಸ ಮಾಡಬೇಕು. ಹೀಗೆ ವಿಪರೀತ ಬಿಸಿಲನ್ನೂ ಲೆಕ್ಕಿಸದೆ ಫುಡ್ ಡೆಲಿವರಿ ಮಾಡಲು ಬಂದ ಡೆಲಿವರಿ ಬಾಯ್‌ (Delivery Boy) ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಝೊಮಾಟೊ (Zomato) ಡೆಲಿವರಿ ಬಾಯ್‌ ಸುಡುಬಿಸಿಲಿನಲ್ಲೂ ಸೈಕಲ್‌ (Bicycle)ನಲ್ಲಿ ಫುಡ್ ತಂದು ಡೆಲಿವರಿ ಮಾಡಿದ್ದಾರೆ. ಈ ವಿಚಾರವನ್ನು 18 ವರ್ಷದ ಆದಿತ್ಯ ಶರ್ಮಾ ಎಂಬವರು ಟ್ವಿಟರ್‌ನಲ್ಲಿ(Twitter) ಹಂಚಿಕೊಂಡಿದ್ದು, ಘಟನೆ ತಮ್ಮಲ್ಲಿ ದಿಗ್ಭ್ರಮೆ ಮೂಡಿಸಿದ್ದಾಗಿ ಹೇಳಿದ್ದಾರೆ. ರಾಜಸ್ಥಾನದ ತಾಪಮಾನವು ಸುಮಾರು 42 ಡಿಗ್ರಿ ಸೆಲ್ಸಿಯಸ್ ಆಗಿದೆ. ಮನೆಯಿಂದ ಹೊರಬರಲು ಎಲ್ಲರೂ ಹಿಂಜರಿಯುತ್ತಿದ್ದಾರೆ. ಆದರೆ ನಾನು ಆರ್ಡರ್‌ ಮಾಡಿದ ಫುಡ್‌ ನನ್ನ ಮನೆ ಬಾಗಿಲಿಗೆ ಬಂದು ತಲುಪಿದ್ದು, ಸೈಕಲ್ ಸವಾರನ ಮೂಲಕ ಎಂದವರು ಹೇಳಿದ್ದಾರೆ. 

ಭಾರತದ ಕೆಲವು ಭಾಗಗಳಲ್ಲಿ ಝೊಮಾಟೊ, ಸ್ವಿಗ್ಗಿ ಸೇವೆ ವ್ಯತ್ಯಯ: ಬಳಕೆದಾರರ ಪರದಾಟ

ಇಂದು ನನ್ನ ಆರ್ಡರ್ ನನಗೆ ಸರಿಯಾದ ಸಮಯಕ್ಕೆ ತಲುಪಿತು ಮತ್ತು ನನಗೆ ಆಶ್ಚರ್ಯವಾಯಿತು, ಈ ಸಮಯದಲ್ಲಿ ಡೆಲಿವರಿ ಬಾಯ್ ಸೈಕಲ್‌ನಲ್ಲಿ ಇದ್ದರು. ಬಿಸಿಲಿನ ಬೇಗೆ ನಡುವೆಯೇ ಅವರು ಸೈಕಲ್‌ನಲ್ಲಿ ಬಂದು ಆಹಾರವನ್ನು ನೀಡಿದರು. ನಾನು ಕುತೂಹಲದಿಂದ ಅವರ ಜೀವನದ ಬಗ್ಗೆ ವಿಚಾರಿಸಿದೆ ಎಂದು ಆದಿತ್ಯ ಶರ್ಮಾ ಹೇಳಿದ್ದಾರೆ.

12 ವರ್ಷಗಳಿಂದ ಶಿಕ್ಷಕರಗಾಗಿ ಕೆಲಸ ಮಾಡುತ್ತಿದ್ದರು
ಅವರ ಹೆಸರು ದುರ್ಗಾ ಮೀನಾ, 31 ವರ್ಷ. ಕಳೆದ 4 ತಿಂಗಳಿನಿಂದ ಝೊಮೇಟೋ ಮೂಲಕ ಆಹಾರ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಸುಮಾರು 10 ಸಾವಿರ ಗಳಿಸುತ್ತಿದ್ದಾರೆ. ಡೆಲಿವರಿ ಬಾಯ್‌ ಆಗಿರುವ ಇವರು ಈ ಹಿಂದೆ ಶಿಕ್ಷಕರೂ ಆಗಿದ್ದರು. 12 ವರ್ಷಗಳಿಂದ ಶಿಕ್ಷಕರಗಾಗಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸಮಯದಲ್ಲಿ, ಶಿಕ್ಷಕ ಕೆಲಸವನ್ನು ಕಳೆದುಕೊಂಡರು. ಹೀಗಾಗಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡರು. ಅವರು ನನ್ನೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು ಎಂದು ಆದಿತ್ಯ ಶರ್ಮಾ ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದ್ಯೋಗಿ ಪತ್ನಿಗೆ ಉದ್ಯೋಗದ ಭರವಸೆ ನೀಡಿದ Zomato

ಬಿಕಾಂನಲ್ಲಿ ತಮ್ಮ ಪದವಿಯನ್ನು ಮಾಡಿದ್ದಾರೆ ಮತ್ತು ಎಂಕಾಂ ಅನ್ನು ಮುಂದುವರಿಸಲು ಬಯಸುತ್ತಾರೆ ಆದರೆ ಅವರ ಆರ್ಥಿಕ ಸ್ಥಿತಿಯಿಂದಾಗಿ ಅವರು zomato ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಇಂಟರ್ನೆಟ್ ಬಗ್ಗೆ ಎಲ್ಲವನ್ನೂ ತಿಳಿದಿದ್ದಾರೆ. ದುರ್ಗಾ ಅವರು ಉತ್ತಮ ವೈಫೈ ಹೊಂದಿರುವ ಸ್ವಂತ ಲ್ಯಾಪ್‌ಟಾಪ್ ಹೊಂದಲು ಬಯಸುತ್ತಾರೆ ಆದ್ದರಿಂದ ಅವರು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಕಲಿಸಬಹುದು ಎಂದು ಹೇಳಿದರು ಎಂಬುದಾಗಿ ಆದಿತ್ಯ ಶರ್ಮಾ ಹೇಳಿದ್ದಾರೆ.

ಬೈಕ್ ಕೊಡಿಸಲು ಮುಂದಾದ ನೆಟ್ಟಿಗರು
ಬಿಸಿಲಿನಲ್ಲಿ ಸೈಕಲ್ ಓಡಿಸಿ ಫುಡ್‌ ಡೆಲಿವರಿ ಮಾಡುತ್ತಿರುವ ವ್ಯಕ್ತಿಗೆ ನೆರವು ನೀಡಲು ನೆಟ್ಟಿಗರು ಮುಂದಾಗಿದ್ದರೆ. ಆದಿತ್ಯ ಶರ್ಮಾ ಟ್ವೀಟ್ ಮಾಡಿ 75 ಸಾವಿರ ಫಂಡಿಂಗ್‌ ಅನ್ನು ಸಂಗ್ರಹಿಸಲು ಬಯಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯು 1 ರೂಗಳನ್ನು ನೀಡಿದರೆ ನಾವು ಅವರ ಬೈಕ್ ಹೊಂದುವ ಬಯಕೆಯನ್ನು ಪೂರೈಸಬಹುದು ಎಂದು ಹೇಳಿದ್ದಾರೆ. ನೆಟ್ಟಿಗರು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿ, ನೆರವು ನೀಡಲು ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios