ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದ್ಯೋಗಿ ಪತ್ನಿಗೆ ಉದ್ಯೋಗದ ಭರವಸೆ ನೀಡಿದ Zomato

  • ರಸ್ತೆ ಅಪಘಾತದಲ್ಲಿ ಮೃತಪಟ್ಟ ಜೊಮ್ಯಾಟೊ ಉದ್ಯೋಗಿ ಕುಟುಂಬಕ್ಕೆ ಹಣಕಾಸು ನೆರವು
  • ಪತ್ನಿಗೆ ಉದ್ಯೋಗದ ಭರವಸೆ ನೀಡಿದ ಜೊಮ್ಯಾಟೊ
  • ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಭರವಸೆ
Zomato founder offers job to wife of delivery executive killed in accident gow

ಬೆಂಗಳೂರು(ಜ.14): ದೆಹಲಿಯ ರೋಹಿಣಿ ಸೆಕ್ಟರ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 36 ವರ್ಷದ ಜೊಮ್ಯಾಟೊ ಡೆಲಿವರಿ ಎಕ್ಸಿಕ್ಯೂಟಿವ್(Zomato delivery executive) ಸಲೀಲ್ ತ್ರಿಪಾಠಿ (Salil Tripathi) ಸಾವನ್ನಪ್ಪಿದ ಕೆಲವು ದಿನಗಳ ನಂತರ, ಜೊಮ್ಯಾಟೊ (Zomato) ಸಂಸ್ಥಾಪಕ ದೀಪಿಂದರ್ ಗೋಯಲ್ (Deepinder Goyal) ಗುರುವಾರ ಸಲೀಲ್ ಅವರ ಕುಟುಂಬಕ್ಕೆ ಸಹಾಯ ಮತ್ತು ಅವರ ಪತ್ನಿ ಸುಚೇತಾ ತ್ರಿಪಾಠಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ. ಸುಚೇತಾ ಅವರಿಗೆ ವಿಮಾ ಪರಿಹಾರ ಮೊತ್ತವಾಗಿ 10 ಲಕ್ಷ ರೂ, ಜೊಮ್ಯಾಟೊ ಸಿಬ್ಬಂದಿ ಒಗ್ಗೂಡಿಸಿ ನೀಡಿರುವ 12 ರೂ ಲಕ್ಷವನ್ನು ಕೂಡ ನೀಡಲಾಗುವುದು ಎಂದು ದೀಪಿಂದರ್ ಗೋಯಲ್  ಟ್ವೀಟ್ ಮಾಡಿ ತಿಳಿಸಿದ್ದಾರೆ.

ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರರಾಗಿರುವ ಸಲೀಲ್, ಲಾಕ್‌ಡೌನ್ ಸಮಯದಲ್ಲಿ ರೆಸ್ಟೋರೆಂಟ್ ಮ್ಯಾನೇಜರ್ ಆಗಿ ಕೆಲಸ ಕಳೆದುಕೊಂಡ ನಂತರ ತಮ್ಮ ಸಂಸಾರ ಸಾಗಿಸಲು ಇತ್ತೀಚೆಗೆ ಜೊಮ್ಯಾಟೊಗೆ ಸೇರಿದ್ದರು. ಅವರು ಪತ್ನಿ ಮತ್ತು ಅವರ 10 ವರ್ಷದ ಮಗನನ್ನು ಅಗಲಿದ್ದಾರೆ.

ಏನಿದು ಘಟನೆ: ಕಳೆದ ಶನಿವಾರ ರಾತ್ರಿ ಆಸ್ಪತ್ರೆಯೊಂದರ ಬಳಿ ಫುಡ್ ಆರ್ಡರ್ ಗೆ  ನಿಂತಿದ್ದಾಗ ದೆಹಲಿ ಪೊಲೀಸ್ ಪೇದೆಯೊಬ್ಬರು ಚಲಾಯಿಸುತ್ತಿದ್ದ ಎಸ್‌ಯುವಿ  ಸಲೀಲ್  ಬೈಕ್‌ ಗೆ  ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದರು.  ಸಲೀಲ್ ತ್ರಿಪಾಠಿ ಸಾವಿಗೆ ಪಾನಮತ್ತರಾಗಿ ವಾಹನ ಚಲಾಯಿಸಿದ ಹೆಡ್‌ ಕಾನ್ಸ್‌ಟೇಬಲ್ ಜಿಲೇ ಸಿಂಗ್ ಅವರೇ ಕಾರಣ ಎಂದು ತ್ರಿಪಾಠಿ ಮನೆಯವರು ಆರೋಪಿಸುತ್ತಿದ್ದಾರೆ. 

PRASAR BHARATI RECRUITMENT 2022: ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ರಿಕೊ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದ ಸಲೀಲ್ ಕೆಲಸ ಕಳೆದುಕೊಂಡ ಬಳಿಕ ಸಂಸಾರ ಮುನ್ನಡೆಸಲು ಜೊಮ್ಯಾಟೊ ಸೇರಿದ್ದರು. ತನ್ನ ತಾಯಿ, ಹೆಂಡತಿ ಹಾಗೂ ಮಗುವಿನ ಜೊತೆ ವಾಸವಾಗಿದ್ದ ಅವರು ಇತ್ತೀಚೆಗೆ ತಮ್ಮ ತಂದೆಯನ್ನು ಕೋವಿಡ್‌ನಿಂದ ಕಳೆದುಕೊಂಡಿದ್ದರು. 

ಇನ್ನು ಅಪಘಾತ ನಡೆದ ಸಂದರ್ಭದಲ್ಲಿ ಹೆಡ್‌ ಕಾನ್ಸ್‌ಟೇಬಲ್ ಜಿಲೇ ಸಿಂಗ್ ಸಂಪೂರ್ಣ ಪಾನಮತ್ತರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ತ್ರಿಪಾಠಿ ಕುಟುಂಬದವರು ಆರೋಪಿಸುತ್ತಿದ್ದಾರೆ. ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ಜಿಲೇ ಸಿಂಗ್‌ರನ್ನು ಬಂಧಿಸಿ, ಅವರು ಆಲ್ಕೋಹಾಲ್ ಸೇವಿಸಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Karnataka Village Accountant Recruitment 2022: 355 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

ಆನ್‌ಲೈನ್‌ ಫುಡ್‌ ಡೆಲಿವರಿ ಇನ್ನು ದುಬಾರಿ: ಕೊರೊನಾ ವೈರಸ್‌ ಸಂಕಷ್ಟದಲ್ಲಿ ಹಣದುಬ್ಬರವೂ ಇದೆ. ಈ ನಡುವೆ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳು ಆಹಾರದ ಮೇಲಿನ ಬೆಲೆಯನ್ನು ಅಧಿಕ ಮಾಡುವ ಚಿಂತನೆ ನಡೆಸುತ್ತಿದೆ. ಹೀಗಾಗಿ ಜೊಮ್ಯಾಟೊ, ಸ್ವಿಗ್ಗಿನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರವನ್ನು ಆರ್ಡರ್‌ ಮಾಡುವುದು ಈ ವರ್ಷ ಹೆಚ್ಚು ದುಬಾರಿ ಆಗಬಹುದು.

ಕಳೆದ ವರ್ಷದಲ್ಲಿ, ತರಕಾರಿಗಳು, ಖಾದ್ಯ ತೈಲ ವೆಚ್ಚದಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚಿನ ಬೆಲೆಗಳು ಸಾರಿಗೆ ವೆಚ್ಚವನ್ನು ಹೆಚ್ಚಿಸಿವೆ. ಇದಲ್ಲದೆ, ಕೊರೊನಾ ವೈರಸ್‌ ಸೋಂಕು ಹಿನ್ನೆಲೆಯಿಂದಾಗಿ ನಗರಗಳಾದ್ಯಂತ ವಿಧಿಸಲಾಗುತ್ತಿರುವ ನಿರ್ಬಂಧಗಳ ಕಾರಣದಿಂದಾಗಿ ಹಣದುಬ್ಬರವು ಇನ್ನಷ್ಟು ಅಧಿಕವಾಗುತ್ತಿದೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ.

ದೆಹಲಿಯಂತಹ ನಗರಗಳು ಡೈನ್-ಇನ್ ಸೌಲಭ್ಯಗಳನ್ನು ಸ್ಥಗಿತ ಮಾಡಲಾಗಿದ್ದು, ಇದರಿಂದಾಗಿ ಜನರು ಆನ್‌ಲೈನ್‌ ಆರ್ಡರ್‌ಗೆ ಶರಣಾಗಬೇಕಾಗಿದೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್‌ಗಳು ತಮಗಾಗುವ ನಷ್ಟವನ್ನು ಸರಿದೂಗಿಸಲು ಬೇರೆ ಆಯ್ಕೆ ಇಲ್ಲದೆ ಆಹಾರದ ಬೆಲೆಯನ್ನು ಹೆಚ್ಚಳ ಮಾಡಲು ಮುಂದಾಗಿದ್ದಾರೆ. ಇದು ಗ್ರಾಹಕರ ಮೇಲೆ ಇನ್ನಷ್ಟು ಚಾಟಿ ಏಟು ಬೀಳುವಂತೆ ಮಾಡಿದೆ.

Latest Videos
Follow Us:
Download App:
  • android
  • ios