ಅಬ್ಬಬ್ಬಾ..ಬರೋಬ್ಬರಿ ಮೂರು ಕೆಜಿಯ ಬೃಹತ್ ಬಾಳೆಹಣ್ಣು, ನವಜಾತ ಶಿಶುವಿನ ತೂಕಕ್ಕೆ ಸಮವಂತೆ!
ಬಾಳೆಹಣ್ಣು ಅತ್ಯಂತ ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಬಾಳೆಹಣ್ಣು ಸಾಮಾನ್ಯವಾಗಿ ಅಂಗೈಯಲ್ಲಿ ನಿಲ್ಲುವಷ್ಟು ಪುಟ್ಟದಾಗಿರುತ್ತದೆ. ಆದ್ರೆ ಈ ಬಾಳೆಹಣ್ಣು ಅದೆಷ್ಟು ದೊಡ್ಡದು ಅಂದ್ರೆ ಬರೋಬ್ಬರಿ 3 ಕೆಜಿ ತೂಗುತ್ತೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಬಾಳೆಹಣ್ಣು ಇಷ್ಟ ಪಡುವುದು ಸಾಮಾನ್ಯ. ಹಸಿದಾಗ ಈ ಒಂದು ಹಣ್ಣು ತಿಂದರೆ ಸಾಕು ಹಸಿವು ಕಡಿಮೆಯಾಗುತ್ತದೆ. ಮಾತ್ರವಲ್ಲ ಬಾಳೆಹಣ್ಣಿನಲ್ಲಿ ಹಲವು ಆರೋಗ್ಯಕರ ಗುಣಗಳಿವೆ. ಇದೊಂದು ನೈಸರ್ಗಿಕ ಆರೋಗ್ಯವರ್ಧಕ ಮಾತ್ರವಲ್ಲದೆ ರುಚಿಕರವಾದ ಹಣ್ಣೂ ಸಹ ಹೌದು. ಬಾಳೆಹಣ್ಣು ಸೇವನೆಯಿಂದ ಪೋಷಕಾಂಶಗಳು ಸಿಗುವುದಲ್ಲದೆ, ತೂಕ ಕಡಿಮೆ, ಜೀರ್ಣಕ್ರಿಯೆ, ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಬಾಳೆಹಣ್ಣಿನಲ್ಲಿ (Banana) ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ ಹೊಂದಿದ್ದು, ಕೆಲವು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು(Minerals) ಹೊಂದಿದೆ. ಇದು ಶೇ.6ರಷ್ಟು ಫೈಬರ್ ಅನ್ನು ಒದಗಿಸುತ್ತದೆ. ಅಲ್ಲದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳುತ್ತದೆ.
ಬರೋಬ್ಬರಿ ಮೂರು ಕೆಜಿ ತೂಗುವ ಬೃಹತ್ ಬಾಳೆಹಣ್ಣು
ಸಾಮಾನ್ಯವಾಗಿ ಬಾಳೆಹಣ್ಣು ಅಂಗೈಯಲ್ಲಿ ನಿಲ್ಲುವಷ್ಟು ಪುಟ್ಟದಾಗಿರುತ್ತದೆ. ಆದರೆ ಈ ಬಾಳೆಹಣ್ಣು ಮಾತ್ರ ಹಾಗಿಲ್ಲ. ಇದು ಬರೋಬ್ಬರಿ ಮೂರು ಕೆಜಿ ತೂಗುವ ಬೃಹತ್ ಬಾಳೆಹಣ್ಣು. ಇದು ವಿಶ್ವದ ಅತಿ ದೊಡ್ಡ ಬಾಳೆಹಣ್ಣು. 15 ಮೀಟರ್ ಉದ್ದವನ್ನು ಹೊಂದಿದೆ. ದೊಡ್ಡ ಜಾತಿಯ ಬಾಳೆಗಿಡವು ಒಂದೇ ಋತುವಿನಲ್ಲಿ 300 ಬಾಳೆಹಣ್ಣುಗಳನ್ನು ಉತ್ಪಾದಿಸುತ್ತದೆ. ಪ್ರತಿ ಹಣ್ಣು ಬೃಹತ್ ಬಾಳೆಹಣ್ಣುಗಳ ಗೊಂಚಲು 60 ಕಿಲೋ ಗ್ರಾಂನಷ್ಟು ತೂಗುತ್ತದೆ.
ಈ ಸಮಸ್ಯೆ ಇದೆ ಅಂದ್ರೆ ಬಾಳೆಹಣ್ಣನ್ನು ತಿನ್ನಲೇ ಬಾರದು!
ಕಾಯಿ ಹಣ್ಣಾಗಲು ಬರೋಬ್ಬರಿ ಐದು ವರ್ಷ ಬೇಕು
ಆಸ್ಟ್ರೇಲಿಯನ್ ದ್ವೀಪವಾದ ಪಪುವಾ ನ್ಯೂಗಿನಿಯಾದಲ್ಲಿ ಈ ಜಾತಿಗಳು ಬೆಳೆಯುತ್ತವೆ ಎಂದು ತಿಳಿದುಬಂದಿದೆ. ಕಾಯಿ ಹಣ್ಣಾಗಲು ಐದು ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಎತ್ತರದ (Height) ಬಾಳೆಹಣ್ಣಿನ ಮುಂದೆ ಜನರೂ ಕುಳ್ಳಗೆ ಕಾಣುತ್ತಾರೆ ಬಾಳೆಹಣ್ಣು ಎಷ್ಟು ದೊಡ್ಡದಿದೆ ಎಂದು ತೋರಿಸಲು ತನ್ನ ಕೈನಷ್ಟು ಉದ್ದವಿರುವ ಬಾಳೆಹಣ್ಣಿನ ಪಕ್ಕದಲ್ಲಿ ತನ್ನ ಕೈಯನ್ನು (Hand) ಇಡುವುದನ್ನು ತೋರಿಸುವುದನ್ನು ನೋಡಬಹುದಾಗಿದೆ.
ನವಜಾತ ಶಿಶುವಿನ ತೂಕಕ್ಕೆ ಸಮವಾಗಿರುವ ಬಾಳೆಹಣ್ಣು
ಈ ಬಾಳೆಹಣ್ಣು ಮೂರು ಕೆಜಿ ವರೆಗೆ ತೂಗತ್ತದೆ. ಇದರ ತೂಕ ಒಂದು ನವಜಾತ ಶಿಶುವಿನ ತೂಕಕ್ಕೆ ಸಮನಾಗಿರುತ್ತದೆ. ಆದರೆ, ಈ ಹಣ್ಣು ಹಣ್ಣಾಗಲು 5 ವರ್ಷ ತೆಗೆದುಕೊಳ್ಳುವುದರಿಂದ ಇವುಗಳಿಗೆ ಹೆಚ್ಚಿನ ವ್ಯಾಪಾರ ಇಲ್ಲ. ಈ ಗಿಡದ ಕಾಂಡವು 15 ಮೀಟರ್ ಎತ್ತರದಲ್ಲಿದೆ ಮತ್ತು ಎಲೆಗಳು ಸಹ ನೆಲದಿಂದ 20 ಮೀಟರ್ ಎತ್ತರದಲ್ಲಿರುತ್ತವೆ ಎಂದು ಹೇಳಲಾಗುತ್ತದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ನ್ಯೂ ಪಪುವಾ ಗಿನಿಯಾದಿಂದ ಬರುವ ಈ ಬಾಳೆಹಣ್ಣಿನ ಗಿಡಗಳನ್ನು ವಿಶ್ವದ ಅತಿ ದೊಡ್ಡ ಬಾಳೆ ಗಿಡ ಎಂದು ನಮೂದಾಗಿದೆ.
ಬಾಡಿ ಬ್ಯುಲ್ಡ್ ಮಾಡೋ ಕನಸಿದ್ದರೆ, ಬಾಳೆಹಣ್ಣನ್ನು ಹೀಗ್ ತಿನ್ನಿ!
ಅನಂತ್ ರೂಪನಗುಡಿ ಎಂಬ ಬಳಕೆದಾರರು ಅತಿದೊಡ್ಡ ಬಾಳೆಹಣ್ಣಿನ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಈ ದೊಡ್ಡ ಬಾಳೆಹಣ್ಣನ್ನು ಹಿಡಿದುಕೊಂಡು ಅದನ್ನು ತಿನ್ನಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರೆ ಅದನ್ನು ಸಂಪೂರ್ಣವಾಗಿ ತಿನ್ನುವುದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂಬುದು ಅರ್ಥವಾಗುತ್ತದೆ. ಟ್ವಿಟರ್‌ನಲ್ಲಿ ವೈರಲ್ ಆಗಿರುವ 38 ಸೆಕೆಂಡುಗಳ ವೀಡಿಯೊವನ್ನು 88 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ (View). ಹಲವರು ಬೃಹತ್ ಬಾಳೆಹಣ್ಣನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಳಕೆದಾರರು ಇಷ್ಟು ದೊಡ್ಡ ಬಾಳೆಹಣ್ಣು ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಒಳ್ಳೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಬರೆದಿದ್ದಾರೆ. ಇನ್ನೊಂದೆಡೆ ಮತ್ತೊರ್ವ ಬಳಕೆದಾರರು 5 ವರ್ಷಗಳಲ್ಲಿ ಹಣ್ಣಾಗುವ ಈ ಬಾಳೆಹಣ್ಣು ತಿನ್ನಲು ಕನಿಷ್ಠ 5 ದಿನಗಳು ಬೇಕು ಎಂದು ಪ್ರತಿಕ್ರಿಯೆ (Response) ವ್ಯಕ್ತಪಡಿಸಿದ್ದಾರೆ.