ಆನ್‌ಲೈನ್ ಮೂಲಕ ಮಹಿಳೆ ಫುಡ್ ಆರ್ಡರ್ ಮಾಡಿದ್ದಾರೆ. ತಿನಿಸು ಜೊತೆಗೆ ಕೈಬರಹದ ಸಣ್ಣ ನೋಟ್ ಕೂಡ ಇದರ ಜೊತೆಗಿತ್ತು. ಈ ಚೀಟಿಯಲ್ಲಿ ಬರೆದಿರು ಸಾಲುಗಳನ್ನು ಓದಿದ ಮಹಿಳೆ ಭಾವುಕಳಾಗಿದ್ದಾಳೆ. ಆದರೆ ಈ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಗರಂ ಆಗಿದ್ದಾರೆ.
ಆನ್‌ಲೈನ್ ಫುಡ್ ಆರ್ಡರ್ ಇದೀಗ ಹೊಸ ವಿಚಾರವಲ್ಲ. ಬಹುತೇಕರು ಈ ಪದ್ಧತಿಯನ್ನು ಅತೀಯಾಗಿ ನೆಚ್ಚಿಕೊಂಡಿದ್ದಾರೆ. ಹೀಗೆ ಆನ್‌ಲೈನ್ ಫುಡ್ ಡೆಲಿವರಿ ವೇಳೆ, ಆಹಾರ ಸೇರಿದಂತೆ ಹಲವು ಸಂದರ್ಭಗಳಲ್ಲಿ ನಡೆದ ಘಟನೆಗಳು ಭಾರಿ ಸಂಚಲನ ಸೃಷ್ಟಿಸುತ್ತದೆ. ಇದೀಗ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡಿ ಭಾವುಕರಾದ ಘಟನೆ ನಡೆದಿದೆ. ಇದಕ್ಕೆ ಕಾರಣ ಆಹಾರದ ಜೊತೆಗಿದ್ದ ಸಣ್ಣ ಚೀಟಿ. ಈ ಚೀಟಿಯಲ್ಲಿ ಬರೆದಿದ್ದ ಸಾಲುಗಳನ್ನು ಓದಿ ಮಹಿಳೆ ಭಾವುಕಳಾಗಿದ್ದಾಳೆ. ಆದರೆ ಈ ವಿಚಾರವನ್ನು ಹಂಚಿಕೊಂಡ ತಕ್ಷಣ ನೆಟ್ಟಿಗರು ಗರಂ ಆಗಿದ್ದಾರೆ.
ಮಹಿಳೆ ತನ್ನ ಫುಡ್ ಆರ್ಡರ್ ಅನುಭವವನ್ನು ರೆಡ್ಡಿಟ್ ಮೂಲಕ ಹಂಚಿಕೊಂಡಿದ್ದಾರೆ. ಮಹಿಳೆ ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿರುವಂತೆ ಹೋಳಿ ಹಬ್ಬದ ದಿನ ಸಂಭ್ರಮಿಸಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ಹೋಳಿ ಹಬ್ಬವನ್ನು ನಾನು ಅಚರಿಸುತ್ತೇನೆ. ಆದರೆ ಈ ಬಾರಿ ವಿಶ್ವವಿದ್ಯಾಲಯಕ್ಕೆ ತೆರಳುವ ಕಾರಣ ಆಚರಿಸಲು ಸಾಧ್ಯವಾಗಲಿಲ್ಲ. ವಿಶ್ವವಿದ್ಯಾಲಯದಲ್ಲಿ ಕೆಲಸವಿದ್ದ ಕಾರಣ ಹೋಳಿ ಆಚರಣೆ ಸಾಧ್ಯವಾಗಲಿಲ್ಲ. ಮಧ್ಯಾಹ್ನ ಹಸಿವು ಜೋರಾಗಿತ್ತು. ಹೀಗಾಗಿ ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡಿಕೊಂಡೆ ಎಂದಿದ್ದಾರೆ.
ಸರಳವಾಗಿ ಮನೆಯಲ್ಲಿ ಮಾಡಬಹುದಾದ ಅತ್ಯಂತ ರುಚಿಕರ ಕೇರಳ ಫಿಶ್ ಕರಿ ರೆಸಿಪಿ
ಫುಡ್ ಆರ್ಡರ್ ಮಾಡಿದ ಕೆಲ ಹೊತ್ತಿನ ಬಳಿಕ ಆಹಾರ ಕೈಸೇರಿದೆ. ಮೊದಲೇ ಹಸಿವಾಗಿತ್ತು. ಹೀಗಾಗಿ ಬೇಗನೆ ಪ್ಯಾಕ್ ಓಪನ್ ಮಾಡಿ ಆಹಾರ ಸವಿಯಲು ರೆಡಿಯಾಗಿದ್ದೆ. ಆಹಾರದ ಜೊತೆಗೆ ಕೈಬರಹದಲ್ಲಿ ಬರೆದಿರುವ ಚೀಟಿಯೊಂದು ಪತ್ತೆಯಾಗಿತ್ತು. ಈ ಚೀಟಿಯಲ್ಲಿ ಅದು ಈ ಆಹಾರ ತಯಾರಿಸಿದ ನಿಶಾ ಅನ್ನೋ ಹುಡುಗಿಯ ಕುರಿತು ಬರೆಯಲಾಗಿದೆ ಅನ್ನೋದು ತಿಳಿಯಿತು.
ಈ ಚೀಟಿಯಲ್ಲಿ ಹುಡುಗಿ ನಿಶಾ, ಕೆಲ ಸಾಲುಗಳನ್ನು ಬರೆದಿದ್ದಳು. ಅದೇನೆಂದರೆ, ನಿಶಾ ನಮ್ಮಲ್ಲಿ ಕೇವಲ ಅಡುಗೆ ತಯಾರಿಸುವ ಸಿಬ್ಬಂದಿ ಮಾತ್ರವಲ್ಲ, ಆಕೆ ಕಾಲೇಜು ವ್ಯಾಸಾಂಗ ಮಾಡುತ್ತಿರುವ ಹುಡುಗಿ. ಆಕೆ ತನ್ನ ಕುಟುಂಬದ ಮೂವರು ಸದಸ್ಯರಿಗೆ ಬೆಂಬಲ ನೀಡಲು ಕಠಿಣ ಪರಿಶ್ರಮ ಪಡುತ್ತಿದ್ದಾಳೆ. ಆದರೆ ಆಕೆಯ ಮುಖದಲ್ಲಿ ಯಾವತ್ತೂ ನಗು ಮಾಯವಾಗಿಲ್ಲ. ದಯವಿಟ್ಟು ಅವಳು ತಯಾರಿಸಿದ ಈ ಆಹಾರಕ್ಕೆ 5 ಸ್ಟಾರ್ ರೇಟಿಂಗ್ ಕೊಡಿ. ಪ್ರೀತಿಯಿಂದ ಅಡುಗೆ ಸಿಬ್ಬಂದಿ ತಂಡ ಎಂದು ಚೀಟಿಯಲ್ಲಿ ಬರೆಯಲಾಗಿತ್ತು.
ಈ ಚೀಟಿ ನೋಡಿ ಮಹಿಳೆ ಭಾವುಕಳಾಗಿದ್ದಾರೆ. ಕಾರಣ ನಾನು ಹೋಳಿ ಹಬ್ಬ ಆಚರಣೆ ಮಾಡಲು ಸಾಧ್ಯವಾಗಿಲ್ಲ ಅನ್ನೋ ನೋವಿನಲ್ಲಿದ್ದೆ. ಆದರೆ ಹೋಳಿ ಹಬ್ಬದ ದಿನ ಈ ಹುಡುಗಿ ಕಷ್ಟಪಡುತ್ತಿದ್ದಾಳೆ. ಕುಟುಂಬಕ್ಕಾಗಿ, ಕುಟುಂಬ ಸದಸ್ಯರಿಗೆ ನರೆವಾಗಲು ಕೆಲಸ ಮಾಡುತ್ತಿದ್ದಾಳೆ. ವಿದ್ಯಾಬ್ಯಾಸ, ಕೆಲಸ, ಸಂಪಾದನೆ, ಕುಟುಂಬ ಹೀಗೆ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾಳೆ ಎಂದು ಈ ಮಹಿಳೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ. ಆಹಾರವೂ ಚೆನ್ನಾಗಿತ್ತು. ಈ ಚೀಟಿ ಓದಿದ ಬಳಿಕ ಆಹಾರಕ್ಕೆ 5 ಸ್ಟಾರ್ ರೇಟಿಂಗ್ ಕೊಟ್ಟೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.
ಈ ವಿಚಾರ ಪೋಸ್ಟ್ ಮೂಲಕ ಬಹಿರಂಗವಾಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದಾರೆ. ಇದು ಮಾರ್ಕೆಟಿಂಗ್ ಪ್ಲಾನ್. ಈ ಭಾವನಾತ್ಮಕ ಪ್ಲಾನ್‌ಗೆ ನೀವು 5 ಸ್ಟಾರ್ ಕೊಟ್ಟು ಮೋಸಹೋಗಿದ್ದೀರಿ. ಈ ಮಾರ್ಕೆಟಿಂಗ್ ಸ್ಟಾರ್ಟರ್ಜಿ ಹಲವು ರೆಸ್ಟೋರೆಂಟ್‌ಗಳು ಬಳಕೆ ಮಾಡುತ್ತಿದೆ. ಇದು ಸಾಮಾನ್ಯವಾಗಿದೆ. ಇಲ್ಲಿ ಸತ್ಯಾಂಶ ಕಾಣುತ್ತಿಲ್ಲ. ಈ ರೀತಿಯ ಪ್ಲಾನ್ ಹಳೆಯದಾದರೂ 10ರಲ್ಲಿ ಕನಿಷ್ಠ 3 ರಿಂದ 5 ಮಂದಿ 5 ಸ್ಟಾರ್ ರೇಟಿಂಗ್ ಕೊಡುತ್ತಾರೆ. ರೆಸ್ಟೋರೆಂಟ್ ಸಿಬ್ಬಂಧಿಗಳ ಟಾರ್ಗೆಟ್ ಕೂಡ ಅಷ್ಟೇ ಇದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಮದುವೆಯಲ್ಲೂ ಫ್ರೀ ಊಟ ಕ್ಯಾನ್ಸಲ್: ಡೆಸ್ಟಿನೇಷನ್ ಮದುವೆಗೆ ಹೋದವರಿಗೆ ಊಟಕ್ಕೆ ₹3,800 ಕಟ್ಟಿಸಿಕೊಂಡ ವಧು-ವರರು!
