ಸರಳವಾಗಿ ಮನೆಯಲ್ಲಿ ಮಾಡಬಹುದಾದ ಅತ್ಯಂತ ರುಚಿಕರ ಕೇರಳ ಫಿಶ್ ಕರಿ ರೆಸಿಪಿ
ಮನೆಯಲ್ಲಿರುವ ಅಡುಗೆ ಸಾಮಾಗ್ರಿಗಳ ಬಳಸಿಕೊಂಡು, ಸಿಂಪಲ್ ಆಗಿ, ಆದರೆ ಅತ್ಯಂತು ರುಚಿಕರವಾದ ಫಿಶ್ ಕರಿ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ, ಒಮ್ಮೆ ಟ್ರೈ ಮಾಡಿ ನೋಡಿ.

ಕರಾವಳಿ ಮಾತ್ರವಲ್ಲ, ಬಹುತೇಕ ಕಡೆಗಳಲ್ಲಿ ಫಿಶ್ ಕರಿ, ಫಿಶ್ ಮಸಾಲ ಫ್ರೈ, ಫಿಶ್ ಫ್ರೈ ಸಾಮಾನ್ಯವಾಗಿದೆ. ಆದರೆ ಒಂದು ಪ್ರದೇಶದ ಮೀನು ಸಾರು ಹಾಗೂ ಮಿನಿನ ಅಡುಗೆಗಳು ಭಿನ್ನ. ಹೆಚ್ಚಿನ ಪೌಷ್ಠಿಕಾಂಶ ಹಾಗೂ ಉತ್ತಮ ಆರೋಗ್ಯ, ಹೆಚ್ಚು ರುಚಿಕರವಾದ ಸಮುದ್ರ ಮೀನುಗಳ ಅಡುಗೆ ಯಾವತ್ತೂ ಬಾಯಲ್ಲಿ ನೀರೂರಿಸುತ್ತೆ. ಆದರೆ ಮೀನು ಸಾರು ಅಥವಾ ಫ್ರೈ ಸೂಕ್ತ ರೀತಿಯಲ್ಲಿ ಮಾಡಿದರೆ ಮಾತ್ರ ಅದರ ರುಚಿ ಹೆಚ್ಚುತ್ತೆ. ಮತ್ತೆ ಮತ್ತೆ ಸವಿಯಬೇಕು ಅನಿಸುತ್ತದೆ.
ಕೇರಳ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಾಗೂ ಕೇರಳ ಪ್ರವಾಸದ ವೇಳೆ ಹೆಚ್ಚಿನ ಮಂದಿ ಸವಿದಿರುವ ಕೇರಳ ಫಿಶ್ ಕರಿಗೆ ಎಲ್ಲೆಡೆ ಬೇಡಿಕೆ ಇದೆ. ಸರಳ ವಿಧಾನದ ಮೂಲಕ ಈ ಫಿಶ್ ಕರಿಯನ್ನು ಮಾಡುವುದು ಹೇಗೆ? ಸುಲಭವಾಗಿ ಮನೆಯಲ್ಲೇ ಇರುವ ಅಡುಗೆ ಸಾಮಾಗ್ರಿಗಳನ್ನು ಬಳಸಿಕೊಂಡು ಮೀನು ಸಾರು ಮಾಡಬಹುದು.
ಸದ್ಯ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಹೀಗಾಗಿ ದೇಹದ ಉಷ್ಣಾಂಶ ಹಾಗೂ ನೀರನ ಮಟ್ಟದಲ್ಲಿ ಸಮತೋಲನ ಕಾಪಾಡಿಕೊಳ್ಳಲು ತೆಂಗಿನ ಕಾಯಿಯಲ್ಲಿ ಮಾಡಿದ ಪದಾರ್ಥಗಳು ಹೆಚ್ಚು ಸೂಕ್ತ. ಹೀಗಾಗಿ ಇಂದಿನ ರೆಸೆಪಿಯಲ್ಲಿ ತೆಂಗಿನ ಕಾಯಿ ಬಳಸಿ ಮಾಡಬಹುದಾದ ಸರಳ ಹಾಗೂ ರುಚಿಕರ ಫಿಶ್ ಕರಿ ರೆಸಿಪಿ ಇಲ್ಲದೆ.
ಬೇಗಾಕುವ ಅಡುಗೆ ಸಾಮಾಗ್ರಿ
3 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ
1 ಕಪ್ ತುರಿದ ತೆಂಗಿನ ಕಾಯಿಯ ಹಾಲು
1/2 ಸ್ಪೂನ್ ಸಾಸಿವೆ ಹಾಗೂ ಅರಶಿನ ಪುಡಿ
ಕರಿಬೇವು
6 ಎಸಳು ಬೆಳ್ಳುಳ್ಳಿ
10 ಸಣ್ಣ ಈರುಳ್ಳಿ
1/4 ಟೇಬಲ್ ಸ್ಪೂನ್ ಮೆಂತ್ಯೆ ಕಾಳು
2 ಹಸಿ ಮೆಣಸು
1/2 ಇಂಚಿನ ಶುಂಠಿ
2 ಸ್ಪೂನ್ ಮೆಣಸಿನ ಹುಡಿ, ಕೊತ್ತಂಬರಿ
1 ಸ್ಪೂನ್ ಉಪ್ಪು
3 ಪೀಸ್ ಹುಣಸೆಹಣ್ಣು
250 ಗ್ರಾಂ ಬೂತಾಯಿ(ಮತ್ತಿ)ಮೀನು ಅಥವಾ ಬೇರೆ ಮೀನು
ಪಾತ್ರೆಗೆ ತೆಂಗಿನ ಎಣ್ಣೆಗೆ ಹಾಕಿ, ಇದಕ್ಕೆ ಕರಿಬೇವು, ಮೆಂತ್ಯೆ ಕಾಳು, ಹಾಗೂ ಸಾಸಿವೆ ಹಾಕಿ. ಬಳಿಕ ಕತ್ತರಿಸಿದ ಈರುಳ್ಳಿ ಸೇರಿಸಿಕೊಳ್ಳಿ. ಈರುಳ್ಳಿ ಬಣ್ಣ ಬದಲಾಗುತ್ತಿದ್ದಂತೆ, ಇದಕ್ಕೆ ಜಜ್ಜಿದ ಅಥವಾ ರುಬ್ಬಿದ ಶುಂಠಿ ಬೆಳ್ಳುಳ್ಳಿ ಸೇರಿಸಿ. ಜೊತೆ ಹಸಿ ಮೆಣಸು ಸೇರಿಸಿಕೊಳ್ಳಿ. ಗ್ಯಾಸ್ ಸ್ಟೌ ಸಿಮ್‌ನಲ್ಲಿ ಇಟ್ಟುಕೊಳ್ಳಿ.
ಈರುಳ್ಳಿ ಬಣ್ಣ ಬ್ರೌನ್‌ಗೆ ಬದಲಾಗುತ್ತಿದ್ದಂತೆ, ಮೊದಲೇ ರೆಡಿ ಮಾಡಿದ ಮೆಣಸಿನ ಪುಡಿ, ಕೊತ್ತಂಬರಿ, ಅರಶಿನ ಸೇರಿಸಿಕೊಳ್ಳಿ. ಬಳಿಕ ಕೆಲ ಹೊತ್ತು ಸೌಟಿನ ಮೂಲಕ ಕಲಸುತ್ತಲೇ ಇರಬೇಕು. ಮಸಾಲ, ಜೊತೆಗೆ ಈರುಳ್ಳಿ ಎಲ್ಲವೂ ಬೇಯುತ್ತಿದ್ದಂತೆ ಎಲ್ಲಾ ಪುಡಿಗಳ ಹಸಿ ಫ್ಲೇವರ್ ದೂರವಾಗಲಿದೆ. ಈ ವೇಳೆ ನೀರು ಸೇರಿಸಿಕೊಳ್ಳಿ.
ನೀರಿನ ಪ್ರಮಾಣ ಹೆಚ್ಚಾಗಬಾರದು. ಹಾಗಂತ ತೀರಾ ಕಡಿಮೆಯೂ ಇರಬಾರದು. ನಿಮ್ಮ ಮಸಲಾ ಹಾಗೂ ಮೀನಿಗೆ ತಕ್ಕಂತೆ ನೀರು ಸೇರಿಸಿಕೊಳ್ಳಿ. ಬಳಿಕ ಹುಣಸೆ ಹಣ್ಣಿನ ನೀರನ್ನು ಸೇರಿಸಿಕೊಳ್ಳಿ. ಇದಾದ ಬಳಿಕ 5 ನಿಮಿಷಗಳ ಕಾಲ ಬೇಯಲು ಬಿಡಿ. ಸ್ಟೌ ಸಿಮ್‌ನಲ್ಲಿರುವಂತೆ ನೋಡಿಕೊಳ್ಳಿ.
ಮಸಲಾ ಸರಿಯಾಗಿ ಬೇಯುತ್ತಿದ್ದಂತೆ ರೆಡಿ ಮಾಡಿ ಇಟ್ಟಿರುವ ತುರಿದ ತೆಂಗಿನ ಕಾಯಿಯ ಹಾಲನ್ನು ಸೇರಿಸಿಕೊಳ್ಳಿ. 2 ನಿಮಿಷ ಕಲಸಿ, ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಾದ ಬಳಿಕ ಶುಚಿಯಾಗಿ ತೊಳೆದಿಟ್ಟ ಮೀನು ಸೇರಿಸಿಕೊಳ್ಳಿ. 5 ನಿಮಿಷಗಳ ಕಾಲ ಬೇಯಲು ಬಿಡಿ. ಮೀನು ಬೇಯುತ್ತಿರುವಾಗ ಕಲಸುವ ಪ್ರಯತ್ನ ಮಾಡಬೇಡಿ. ಸ್ಟೌ ಸಿಮ್‌ನಲ್ಲಿಡಿ. ಮೀನು ಸರಿಯಾಗಿ ಬೆಂದರೆ ನಿಮ್ಮ ರುಚಿ ರುಚಿಯಾಗ ಕೇರಳ ಸ್ಟೈಲ್ ಫಿಶ್ ಕರಿ ರೆಡಿ.