ಪಾರ್ಲೆ ಜಿ ಬಿಸ್ಕತ್ ಪಕೋಡಾ, ರಿಸಿಪಿ ನೋಡಿ ನೀವೂ ಟ್ರೈ ಮಾಡಿ, ಆಗಿದೆ ವೀಡಿಯೋ ವೈರಲ್!
ಈಗ ಜನರು ಆಹಾರದ ಮೇಲೆ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ. ಚಿತ್ರವಿಚಿತ್ರ ರೆಸಿಪಿಗಳು ಕಾಣಸಿಗ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋ ವೈರಲ್ ಆಗುತ್ತೆ. ಈಗ ಅಂತಹದ್ದೇ ಒಂದು ವಿಡಿಯೋ ಎಲ್ಲರನ್ನು ಅಚ್ಚರಿಗೊಳಿಸಿದೆ.
ಟೀನಲ್ಲಿ ಬಿಸ್ಕತ್ ಅದ್ದಿ ತಿನ್ನೋದ್ರ ಮಜವೇ ಬೇರೆ. ಅದ್ರಲ್ಲೂ ಪಾರ್ಲೆ ಜಿ ಬಿಸ್ಕತ್ ಇದಕ್ಕೇ ಪ್ರಸಿದ್ಧಿ ಪಡೆದಿದೆ. ಪಾರ್ಲೆ ಜಿ ಬಿಸ್ಕತ್ ಪ್ರೇಮಿಗಳ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಅನೇಕ ವರ್ಷಗಳಿಂದ ಮಾರುಕಟ್ಟೆಯಲ್ಲಿರುವ, ಬಡವರ ಅತ್ಯಂತ ಪ್ರಿಯವಾದ ಬಿಸ್ಕತ್ ಪಾರ್ಲೆ ಜಿ. ಒಂದೆರಡು ಪಾರ್ಲೆ ಜಿ ತಿಂದು ಟೀ ಕುಡಿದ್ರೆ ಹೊಟ್ಟೆ ತುಂಬುತ್ತೆ ಎನ್ನುವ ಜನರಿದ್ದಾರೆ. ಅದೇನೇ ಇರಲಿ, ಈ ಪಾರ್ಲೆ ಜಿಯನ್ನು ನೀವು ಹೇಗೆ ತಿಂದಿರ್ತೀರಿ? ಟೀ ಜೊತೆ ಇಲ್ಲವೆ ಹಾಗೆ ತಿನ್ನಬಹುದು. ಈಗಿನ ದಿನಗಳಲ್ಲಿ ಅದನ್ನು ಕೇಕ್ ಗೆ ಬಳಸುವವರಿದ್ದಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಪಾರ್ಲೆ ಜಿ ಬಿಸ್ಕತ್ ನಲ್ಲಿ ಪಕೋಡಾ ಮಾಡಿದ್ದಾಳೆ.
ಏನು ಅಂತಾ ಹುಬ್ಬೇರಿಸಬೇಡಿ. ಸಾಮಾಜಿಕ ಜಾಲತಾಣ (Social Networking) ದಲ್ಲಿ ಪಾರ್ಲೆ ಜಿ ಪಕೋಡಾ ವಿಡಿಯೋ ವೈರಲ್ ಆಗಿದೆ. ಪಕೋಡಾ ಕೂಡ ಪಾರ್ಲೆ ಜಿ (Parle G) ಅಂತೆ ಅನೇಕದ ಫೆವರೆಟ್. ಚಳಿ, ಮಳೆಗಾಲದಲ್ಲಿ ಇದನ್ನು ತಿನ್ನುವವರ ಸಂಖ್ಯೆ ಹೆಚ್ಚು. ಆಲೂಗಡ್ಡೆ, ಈರುಳ್ಳಿ, ಬದನೆಕಾಯಿ, ಮೆಣಸಿನಕಾಯಿ, ಹೀರೆಕಾಯಿ, ಎಲೆಕೋಸು ಹೀಗೆ ನಾನಾ ತರಕಾರಿಯಲ್ಲಿ ಪಕೋಡಾ ಮಾಡ್ತಾರೆ. ಆದ್ರೆ ಈ ಮಹಿಳೆ ಬಿಸ್ಕತ್ ಪಕೋಡಾ ಮಾಡಿ ಎಲ್ಲರನ್ನು ದಂಗುಗೊಳಿಸಿದ್ದಾರೆ.
ಸಿಂಪಲ್ ಅವಲಕ್ಕಿಗೆ ಟೇಸ್ಟಿ ಬೆಂಡೇಕಾಯಿ ಫ್ರೈ: ನಟಿ ಅದಿತಿ ಪ್ರಭುದೇವ ರೆಸಿಪಿ ನೋಡಿದ್ರೆ ಬಾಯಲ್ಲಿ ನೀರೂರತ್ತೆ!
𝐌𝐌𝐛𝐓𝐌™ 𝚏𝚊𝚗 ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆ ಬಿಸ್ಕತ್ ಪಕೋಡಾ ಮಾಡೋದನ್ನು ನೀವು ನೋಡ್ಬಹುದು.
ಬಿಸ್ಕತ್ ಪಕೋಡಾ (Pakoda) ಮಾಡೋದು ಹೇಗೆ? : ವಿಡಿಯೋದಲ್ಲಿ ತೋರಿಸಿದಂತೆ ಮೊದಲು ಮಹಿಳೆ ಆಲೂಗಡ್ಡೆಯನ್ನು ಬೇಯಿಸಿಕೊಂಡಿದ್ದಾಳೆ. ನಂತ್ರ ಅದ್ರ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿದ್ದಾಳೆ. ಒಂದು ಬಾಣಲೆಗೆ ಮಸಾಲೆ ಹಾಕಿ ಅದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ ಪಲ್ಯ ಸಿದ್ಧಪಡಿಸಿಕೊಂಡಿದ್ದಾಳೆ. ನಂತ್ರ ಪಾರ್ಲೆ ಜಿ ಬಿಸ್ಕತ್ ಕವರ್ ತೆಗೆದು ಬಿಸ್ಕತನ್ನು ಇನ್ನೊಂದು ಪಾತ್ರೆಗೆ ಹಾಕ್ತಾಳೆ. ಒಂದು ಬಿಸ್ಕತ್ ತೆಗೆದುಕೊಂಡು ಅದರ ಮೇಲೆ ಆಲೂಗಡ್ಡೆ ಮಿಶ್ರಣವನ್ನು ಹಾಕಿ ಸವರುವ ಮಹಿಳೆ ನಂತ್ರ ಅದ್ರ ಮೇಲೆ ಇನ್ನೊಂದು ಬಿಸ್ಕತ್ ಇಡುತ್ತಾಳೆ.
ಸಚಿನ್ ವಡಾ ಪಾವ್ ತಿನ್ತಿದ್ದ ಶಾಪ್‌ನಲ್ಲಿ ಜನವೋ ಜನ, ವೀಡಿಯೋದಲ್ಲಿ ಮಾಹಿತಿ ತಿಳಿಸಿದ ಡಾ.ಬ್ರೋ
ಇನ್ನೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟನ್ನು ಹಾಕಿ ಮಿಶ್ರಣ ತಯಾರಿಸಿಕೊಳ್ಳುವ ಮಹಿಳೆ, ಒಲೆ ಮೇಲೆ ಎಣ್ಣೆ ಬಿಸಿ ಮಾಡ್ತಾಳೆ. ಎಣ್ಣೆ ಬಿಸಿ ಆಗ್ತಿದ್ದಂತೆ, ಬಿಸ್ಕತನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಬಾಣಲೆಗೆ ಬಿಡ್ತಾಳೆ. ಪಕೋಡಾ ಗೋಲ್ಡನ್ ಬಣ್ಣಕ್ಕೆ ಬಂದ್ಮೆಲೆ ಅದನ್ನು ತೆಗೆಯುವ ಮಹಿಳೆ, ಕೆಂಪು ಚಟ್ನಿ ಜೊತೆ ಇದನ್ನು ಸರ್ವ್ ಮಾಡ್ತಾಳೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅನೇಕರು ಬಿಸ್ಕತ್ ಪಕೋಡಾ ನೋಡಿ ಶಾಕ್ ಆಗಿದ್ದಾರೆ. ಈ ಮಹಿಳೆಯ ಮೇಲೆ ಸೆಕ್ಷನ್ 302 ವಿಧಿಸಬೇಕು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ನಾವು ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇದನ್ನು ಯಾರು ತಿಂತಾರೆ ಅಂತಾ ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದ್ರಲ್ಲಿ ಖಾರವಿಲ್ಲ, ಹೆಚ್ಚಿನ ಮಸಾಲೆ ಇಲ್ಲ, ಸಾಸ್ ಇಲ್ಲ. ಇದು ತಿನ್ನೋಕೆ ಬೋರಿಂಗ್ ಆಗಿರುತ್ತೆ ಅಂತಾ ಅನೇಕರು ಕಮೆಂಟ್ ಮಾಡಿದ್ರೆ ಇದು ಗುಜರಾತಿ ಡಿಶ್ ಹೌದೋ ಅಲ್ವೋ ಎನ್ನುವ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ. ಈಕೆ ಮಾತ್ರವಲ್ಲ ನೀವು ಗೂಗಲ್ ನಲ್ಲಿ ಅನೇಕ ಬಿಸ್ಕತ್ ಪಕೋಡಾಗಳನ್ನು ನೋಡ್ಬಹುದು. ಕೆಲವರು ಓರಿಯೋ ಬಿಸ್ಕತ್ ಪಕೋಡಾ ಕೂಡ ಮಾಡಿದ್ದಾರೆ. ಚಾಕೋಲೇಟ್ ಬಿಸ್ಕತ್ ಪಕೋಡಾ, ಸ್ಟಫ್ಡ್ ಬಕೋಡಾ, ಬಿಸ್ಕತ್ ಸ್ಯಾಂಡ್ವಿಚ್ ಪನ್ನೀರ್ ಪಕೋಡಾ ಹೀಗೆ ಅನೇಕ ರೆಸಿಪಿಗಳನ್ನು ನೀವು ನೋಡ್ಬಹುದು. ಆಸಕ್ತಿ ಇದ್ರೆ ನೀವು ಟ್ರೈ ಮಾಡಿ.