Asianet Suvarna News Asianet Suvarna News

Viral Video: ಬಿಸಿಬಿಸಿ ಚಾಕೋಲೇಟ್ ಪಕೋಡಾ ಸವಿದಿದ್ದೀರಾ?

ಫುಡ್‌ ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಚಾಕೋಲೇಟ್ ಪಕೋಡಾ. ಆ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.

Woman Dips Chocolate In Gram Flour And Fries It To Make Pakodas Vin
Author
First Published Sep 28, 2022, 9:22 AM IST

ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಇಲ್ಲಿ ಆಯಾ ರಾಜ್ಯಕ್ಕೆ ಅಲ್ಲಿಯ ಭಾಷೆ, ಸಂಸ್ಕೃತಿ. ಆಚಾರ-ವಿಚಾರಗಳು ಇರುವ ಹಾಗೆಯೇ ಪ್ರತ್ಯೇಕವಾದ ಆಹಾರಪದ್ಧತಿಯೂ ಇದೆ. ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ಹೀಗಾಗಿಯೇ ವೆರೈಟಿ ವೆರೈಟಿ ಫುಡ್ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. 

ಫುಡ್‌ ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ (New Combination) ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಚಾಕೋಲೇಟ್ ಪಕೋಡಾ.

ದೆಹಲಿಯ ಆಹಾರ ಮಳಿಗೆಯಲ್ಲಿ ಸಿಗ್ತಿದೆ ಸ್ಟ್ರಾಬೆರಿ ಮತ್ತು ಬ್ಲೂಬೆರಿ ಸಮೋಸಾ

ಬಿಸಿ ಬಿಸಿ ಚಾಕೋಲೇಟ್ ಪಕೋಡಾ ತಯಾರಿಸ್ತಿರೋ ಮಹಿಳೆ
ಚಾಕೊಲೇಟ್ ತಿನ್ನೋಕೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಚಾಕೊಲೇಟ್ ಕೇಕ್, ಚಾಕೊಲೇಟ್ ಬಾರ್‌ಗಳನ್ನು ಸವಿಯುತ್ತಾರೆ. ಆದ್ರೆ ಚಾಕೊಲೇಟ್ ಪಕೂಡಾ ಹೇಗಿರುತ್ತೆ ? ಹಾಗೆಯೇ ಬಿಸಿ ಬಿಸಿ ಚಹಾದೊಂದಿಗೆ, ಗರಂ ಗರಂ ಪಕೋಡಾ ತಿನ್ನೋಕೆ ಎಲ್ಲರೂ ಇಷ್ಟಪಡ್ತಾರೆ. ರುಚಿಕರವಾಗಿರುವ ಪಕೋಡಾಗಳು ಹಲವು ವೆರೈಟಿಯಲ್ಲಿ ಲಭ್ಯವಿದೆ. ಆನಿಯನ್, ಕ್ಯಾಪ್ಸಿಕಂ ಸೇರಿದಂತೆ ಹಲವು ಬಗೆಯ ಪಕೋಡಾಗಳನ್ನು ಸವಿಯಬಹುದು. ಫುಡ್​ ಸ್ಟ್ರೀಟ್​ಗೆ ಹೋದರೆ ಯಾವ ವೆರೈಟಿ ಪಕೋಡಾ ತಿನ್ನುವುದೆಂದು ಗೊಂದಲವಾಗಿ ಬಿಡುತ್ತದೆ. ಆದ್ರೆ ನೀವೆಷ್ಟು ವೆರೈಟಿ ಪಕೋಡಾ ತಿಂದಿದ್ರೂ ಈ ರೀತಿಯ ಡಿಫರೆಂಟ್ ಪಕೋಡಾ ಎಲ್ಲೂ ತಿಂದಿರೋಕೆ ಸಾಧ್ಯವಿಲ್ಲ. ದೆಹಲಿಯಲ್ಲಿ ಮಹಿಳೆಯೊಬ್ಬರು ತಳ್ಳುಗಾಡಿಯಲ್ಲಿ ಚಾಕೊಲೇಟ್ ಪಕೋಡಾ ತಯಾರಿಸಿ ಮಾರಾಟ ಮಾಡ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by RJ Rohan (@radiokarohan)

ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ವೈರಲ್‌
ನಂಬೋಕೆ ಕಷ್ಟ ಅನ್ಸಿದ್ರೂ ಇದು ನಿಜ. ದೆಹಲಿಯಲ್ಲಿ ಮಹಿಳೆ (Woman) ಬಿಸಿಬಿಸಿ ಚಾಕೋಲೇಟ್ ಪಕೋಡಾ ಮಾಡಿ ಮಾರಾಟ ಮಾಡ್ತೀರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗ್ತಿದೆ. ವಿಡಿಯೋ ನೋಡಿದ ಆಹಾರಪ್ರಿಯರು ತಾವೂ ಕೂಡಾ ಚಾಕೋಲೇಟ್​ ಪಕೋಡಾ ಮಾಡೋದಕ್ಕೆ ಸಜ್ಜಾಗ್ತಿದ್ದಾರೆ. ರಸ್ತೆ ಬದಿ ಮಹಿಳೆಯೊಬ್ಬರು ತಳ್ಳೋಗಾಡಿಯಲ್ಲಿ ಪಕೋಡಾ ಮಾಡಿ ಮಾರಾಟ ಮಾಡ್ತಿದ್ದಾರೆ. ಮೊದಲು ಚಾಕೋಲೇಟನ್ನು ಪಕೋಡಾ ಹಿಟ್ಟಿನೊಂದಿಗೆ ಎಣ್ಣೆಗೆ ಬಿಟ್ಟಿದ್ದಾರೆ. ಎಣ್ಣೆಯಲ್ಲಿ ಫ್ರೈ ಮಾಡಿ ಗ್ರಾಹಕರಿಗೆ (Customers) ಸವಿಯಲು ನೀಡಿದ್ದಾರೆ. ಚಾಕೋಲೇಟ್ ಪಕೋಡಾ ಮಾಡುವ ವಿಡಿಯೋ ಇನ್ಸ್​ಟಾಗ್ರಾಂನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ವೈರಲ್ ಆಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

ನವರಾತ್ರಿ ಉಪವಾಸದ ನಂತ್ರ ಅಸಿಡಿಟಿ ಸಮಸ್ಯೆ ಕಾಡ್ಬಾರ್ದು ಅಂದ್ರೆ ಹೀಗ್ ಮಾಡಿ

ಇತರೆ ಪಕೋಡಾಗಳಂತೆ ಗರಿಗರಿಯಾಗಿ ಚಾಕೋಲೇಟ್ ಪಕೋಡಾವನ್ನು ಸವಿಯಲು ಸಾಧ್ಯವಾಗುತ್ತದೆ. ಸ್ವಲ್ಪ ಖಾರವಾದ ಹಸಿರು ಚಟ್ನಿಯೊಂದಿಗೆ ಪಕೋಡಾ ಸೇವಿಸಿದಾಗ ಇದರ ರುಚಿ (Taste) ಇನ್ನಷ್ಟು ಹೆಚ್ಚಿಸಬಹುದು ಎಂದು ವಿಡಿಯೋ ಅಪ್ಲೋಡ್ ಮಾಡಿರುವ ಆರ್.ಜೆ ರೋಹನ್ ಹೇಳಿದ್ದಾರೆ. ಆದರೆ ಕೆಲ ನೆಟ್ಟಿಗರು ಈ ವೀಡಿಯೋ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದೆಂಥಾ ಭೀಕರ ಫುಡ್ ಎಕ್ಸ್‌ಪರಿಮೆಂಟ್‌ ಎಂದು ಟೀಕಿಸಿದ್ದಾರೆ.

Follow Us:
Download App:
  • android
  • ios