ಸ್ವಿಗ್ಗಿಯ ವೆಜ್ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು..ಮಹಿಳೆ ಕಕ್ಕಾಬಿಕ್ಕಿ!

ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡುವಾಗ ಕೆಲವೊಮ್ಮೆ ತಪ್ಪಾದ ಫುಡ್ ಡೆಲಿವರಿಯಾಗುವುದು, ಡೆಲಿವರಿ ಲೇಟಾಗಿ ಬರುವುದು ಹೊಸ ವಿಷಯವೇನಲ್ಲ. ಆದ್ರೆ ಇಲ್ಲೊಂದೆಡೆ ಮಾತ್ರ ವೆಜ್‌ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆಗೆ ಆಹಾರಲ್ಲಿ ಮಾಂಸದ ತುಂಡು ಸಿಕ್ಕಿದ್ದು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Woman blasts Swiggy on Twitter after finding piece of Meat in veg biryani Vin

ಆಹಾರಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಆಹಾರಕ್ರಮವನ್ನು ಅನುಸರಿಸುತ್ತಾರೆ. ಕೆಲವೊಬ್ಬರು ಸಸ್ಯಾಹಾರಿಗಳು, ಇನ್ನು ಕೆಲವೊಬ್ಬರು ಮಾಂಸಾಹಾರಿಗಳು. ಮತ್ತೆ ಕೆಲವರು ಮೊಟ್ಟೆಯನ್ನು ಮಾತ್ರ ಸೇವಿಸುತ್ತಾರೆ. ನಿರ್ಧಿಷ್ಟ ಆಹಾರವನ್ನು ಇಷ್ಟಪಡುವವರು ಅಂಥಾ ಫುಡ್‌ನ್ನು ಮಾತ್ರ ಆರ್ಡರ್ ಮಾಡುತ್ತಾರೆ. ಆದ್ರೆ ಟ್ವಿಟರ್‌ನಲ್ಲಿ ಮಹಿಳೆಯೊಬ್ಬರು ಇತ್ತೀಚೆಗೆ ಭಾರತದ ಅತ್ಯಂತ ಜನಪ್ರಿಯ ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಲ್ಲಿ ಒಂದಾದ ಸ್ವಿಗ್ಗಿಯಿಂದ ತಮ್ಮ ಆಹಾರಕ್ರಮಕ್ಕೆ ಧಕ್ಕೆಯಾಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ವೆಜ್‌ ಬಿರಿಯಾನಿ ಆರ್ಡರ್ ಮಾಡಿದ್ದು, ಬದಲಿಗೆ ನನಗೆ ಆಹಾರದಲ್ಲಿ ಮಾಂಸದ ತುಂಡು ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ,

ಮಹಿಳೆ ತಮ್ಮ ನೋವಿನ ಅನುಭವವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ (Women) ತನ್ನ ಟ್ವೀಟ್‌ನಲ್ಲಿ, ಸ್ವಿಗ್ಗಿಯಲ್ಲಿ ರೆಸ್ಟೋರೆಂಟ್ ಒಂದರಿಂದ ಆಲೂ ಬಿರಿಯಾನಿ ರೈಸ್ ಅನ್ನು ಆರ್ಡರ್ ಮಾಡಿದ್ದೆ. ಆದರೆ ಅದರಲ್ಲಿ ಮಾಂಸದ ತುಂಡು (Meat) ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿರುವ (Vegetarian) ಮಹಿಳೆ, ವೆಜ್ ಬದಲು ನಾನ್‌ವೆಜ್‌ ವಿತರಿಸಿದ ಸ್ವಿಗ್ಗಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೆಸ್ಟೋರೆಂಟ್‌ನ ಕ್ರಮದಿಂದ ನನಗೆ ಆಘಾತವಾಯಿತು ಮತ್ತು ಅಸಹ್ಯವಾಯಿತು. ಎಲ್ಲರೂ ಸ್ವಿಗ್ಗಿಯಿಂದ ಆರ್ಡರ್ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಎಂದು ಮಹಿಳೆ ಸಲಹೆ ನೀಡಿದ್ದಾರೆ.

ಸ್ವಿಗ್ಗಿಯಲ್ಲಿ 3.3 ಕೋಟಿ ಪ್ಲೇಟ್ ಇಡ್ಲಿ ಸೇಲ್, ಒಬ್ಬನೇ ವ್ಯಕ್ತಿಯಿಂದ 6 ಲಕ್ಷ ಇಡ್ಲಿ ಆರ್ಡರ್

ವೆಜ್‌ ಬಿರಿಯಾನಿಯಲ್ಲಿ ಮಾಂಸದ ತುಂಡು ನೋಡಿ ಮಹಿಳೆಗೆ ಶಾಕ್‌
ನತಾಶಾ ಭಾರದ್ವಾಜ್ ಎಂಬ ಮಹಿಳೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ತಮ್ಮ ಆಹಾರದ ಫೋಟೋದೊಂದಿಗೆ, 'ನೀವು ಕಟ್ಟುನಿಟ್ಟಾದ ಸಸ್ಯಾಹಾರಿಗಳಾಗಿದ್ದರೆ (ನನ್ನಂತೆ) ಸ್ವಿಗ್ಗಿಯಿಂದ ಆರ್ಡರ್ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ನಾನು ಆಲೂ ಜೊತೆಗೆ ಬಿರಿಯಾನಿ ರೈಸ್ ಆರ್ಡರ್ ಮಾಡಿದ್ದೇನೆ. ಆಹಾರದ (Food) ಡೀಟೈಲ್ಸ್‌ನಲ್ಲಿ ಇದನ್ನು ಸಸ್ಯಾಹಾರಿ ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಆದರೆ ಫುಡ್ ಡೆಲಿವರಿಯಾದಾಗ ಆಹಾರದಲ್ಲಿ ನನಗೆ ಮಾಂಸದ ತುಂಡು, ಮೂಳೆ (Bone) ಸಿಕ್ಕಿತು. ಇದು ನಿಜವಾಗಿಯೂ ಆಘಾತಕಾರಿಯಾಗಿದೆ' ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ತನ್ನ ದೂರಿನ ಬಗ್ಗೆ ಸ್ವಿಗ್ಗಿ ಅಧಿಕಾರಿಗಳು (Officers) ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಸ್ವಿಗ್ಗಿ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ರೆಸ್ಟೋರೆಂಟ್‌ ಜೊತೆ ನೇರವಾಗಿ ಮಾತನಾಡುವಂತೆ ಸೂಚಿಸಿದ್ದಾರೆ ಎಂದಿದ್ದಾರೆ. ಸ್ವಿಗ್ಗಿ ತನ್ನ ಟ್ವೀಟ್‌ಗೆ ಪ್ರತಿಕ್ರಿಯಿಸಿ, 'ಹಾಯ್ ನತಾಶಾ, ನಮ್ಮ ರೆಸ್ಟೋರೆಂಟ್ ಪಾಲುದಾರರಿಂದ ಇಂತಹ ಆಹಾರವನ್ನು ನಿರೀಕ್ಷಿಸಿರಲ್ಲಿಲ್ಲ. ನೀವು ನಿಮ್ಮ ಆರ್ಡರ್ ಐಡಿಯನ್ನು ಕಳುಹಿಸಿಕೊಡಿ' ಎಂದು ಸ್ವಿಗ್ಗಿ ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಅವರು ಸ್ವಿಗ್ಗಿ ಕಾರ್ಯನಿರ್ವಾಹಕರೊಂದಿಗಿನ ಸಂಭಾಷಣೆ ಮತ್ತು ಆದೇಶದ ವಿವರಗಳನ್ನು ತಮ್ಮ ಟ್ವೀಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸ್ಯಾನಿಟರಿ ಪ್ಯಾಡ್‌ ಆರ್ಡರ್ ಮಾಡಿದ ಮಹಿಳೆ, ಬ್ಯಾಗ್‌ನಲ್ಲಿ ಇದ್ದಿದ್ದೇ ಬೇರೆ!

ವೀಡಿಯೋ ವೈರಲ್, ಸ್ವಿಗ್ಗಿ ವಿರುದ್ಧ ಜನರ ಆಕ್ರೋಶ
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ, ಅನೇಕ ಜನರು ರೆಸ್ಟೋರೆಂಟ್‌ನ ತಪ್ಪಿಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ವಿವಿಧ ರೆಸ್ಟೋರೆಂಟ್‌ಗಳಿಂದ ಆರ್ಡರ್ ಮಾಡಿದ ಸಸ್ಯಾಹಾರಿ ಭಕ್ಷ್ಯಗಳಲ್ಲಿ ಮಾಂಸದ ತುಂಡು ಸಿಕ್ಕಿರುವ ತಮ್ಮ  ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಒಬ್ಬ ಬಳಕೆದಾರರು, 'Swiggy ಗೆ ದೂರು ನೀಡಿ ನಂತರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ದೂರು ನೀಡಿ ನಂತರ ಗ್ರಾಹಕ ದೂರನ್ನು ದಾಖಲಿಸಿ ನಂತರ ನೀವು Swiggy ವಿರುದ್ಧ ಒಪ್ಪಂದದ ಉಲ್ಲಂಘನೆಗಾಗಿ ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಬಹುದು ಮತ್ತು ಮಾನಸಿಕ ಕಿರುಕುಳಕ್ಕಾಗಿ ಪರಿಹಾರವನ್ನು ಪಡೆಯಬಹುದು' ಎಂದು ಮಾಹಿತಿ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಸ್ವಿಗ್ಗಿ, ದೂರಿಗೆ ಪ್ರತಿಕ್ರಿಯೆಯಾಗಿ, ಆಹಾರದ ಮೊತ್ತವನ್ನು ಮರುಪಾವತಿ ಮಾಡಿ ಇಂಥಾ ದೊಡ್ಡ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತದೆ' ಎಂದಿದ್ದಾರೆ. ಇನ್ನೊಬ್ಬರು ಸ್ವಿಗ್ಗಿ ಬಹಿಷ್ಕಾರಕ್ಕೂ ಕರೆ ನೀಡಿದ್ದಾಳೆ.

Latest Videos
Follow Us:
Download App:
  • android
  • ios