ನಿಂಬೆಹಣ್ಣಿನ ಬೆಲೆ ಗಗನಕ್ಕೇರಲು ಅಸಲಿ ಕಾರಣವೇನು ? ಸದ್ಯದಲ್ಲೇ ರೇಟ್‌ ಕಡಿಮೆಯಾಗುತ್ತಾ ?

ಇದು ದುಬಾರಿ ದುನಿಯಾ. ಎಲ್ಲದರ ಬೆಲೆ ಗಗನಕ್ಕೇರಿದೆ. ಅದ್ರಲ್ಲಿ ನಿಂಬೆ ಹಣ್ಣು (Lemon) ಕೂಡಾ ಸೇರಿದೆ.  ನಿಂಬೆ ಬೆಲೆ ಕೇಜಿಗೆ 350 ರು.ಗೆ ಏರಿ ಇತ್ತೀಚೆಗೆ ನಿಂಬೆಹಣ್ಣಿನ ದರೋಡೆ ಕೂಡಾ ನಡೆದಿದ್ದುಂಟು. ಆದ್ರೆ ನಿಂಬೆ ಬೆಲೆ (Price) ಹೆಚ್ಚಾಗೋಕೆ ಕಾರಣ ಏನು ನಿಮ್ಗೊತ್ತಾ ?

Why Lemons Are Getting Costlier, Reasons behind the soaring price Of lemons Vin

ನಿಂಬೆ (Lemon) ಬೆಲೆ ಅದ್ಯಾವ ಪರಿ ಹೆಚ್ಚಾಗಿದೆಯೆಂದರೆ ಬೇಸಿಗೆ ಆದ್ರೂ ನಿಂಬೆಯ ಜ್ಯೂಸ್ (Juice) ಮಾತ್ರ ಕುಡಿಯೋದು ಬೇಡ ಅಂತಿದ್ದಾರೆ ಜನ್ರು. ನಿಂಬೆ ಹಾಕಿ ಮಾಡುವ ರೆಸಿಪಿ (Recipe)ಗಳನ್ನಂತೂ ಸ್ಪಲ್ಪ ದಿನಕ್ಕೆ ಮರೆತೇ ಬಿಡ್ಬೇಕೇನೂ ಅಂತಿದ್ದಾರೆ ಹಲವ್ರು. ಈರುಳ್ಳಿ, ಬೆಳ್ಳುಳ್ಳಿ ಮತ್ತು ಟೊಮೇಟೊ ನಂತರ ಈ ಬಾರಿ ಹಣದುಬ್ಬರವು ನಿಂಬೆ (Lemon)ಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇತ್ತೀಚಿನ ವರದಿಗಳ ಪ್ರಕಾರ, ನಿಂಬೆಹಣ್ಣಿನ ಬೆಲೆ ಕಿಲೋಗ್ರಾಂಗೆ 350 ರೂ. ನಷ್ಟು ಏರಿಕೆಯಾಗಿದೆ. ಉತ್ತರ ಭಾರತದಲ್ಲಿ ನಿಂಬೆ ಬೆಲೆ ಕೇಜಿಗೆ 350 ರು.ಗೆ ಏರಿಕೆಯಾಗಿದೆ. ಈಗ ಉತ್ತರ ಭಾರತ ಮಾತ್ರವಲ್ಲ, ರಾಜ್ಯದಲ್ಲಿ ಕೂಡ ನಿಂಬೆಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಉತ್ತಮ ಗಾತ್ರದ ನಿಂಬೆಹಣ್ಣಿನ ದರ ಪ್ರತಿ ಕೆಜಿಗೆ 300 ರು. ತಲುಪಿದೆ. 

ನಿಂಬೆ ಹಣ್ಣು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ನಿಂಬೆ ಹಣ್ಣು ಆಹಾರದ ರುಚಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗೆಯೇ ಔಷಧಿಯಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಗುಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ನಿಂಬೆ ಸೇವನೆಯು ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ.  ಆದ್ರೆ ಇತ್ತೀಚಿನ ದಿನಗಳಲ್ಲಿ ನಿಂಬೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ತುಂಬಾ ದುಬಾರಿಯಾಗಿದೆ. ಬೆಲೆ ಹೆಚ್ಚಾಗಿದೆ. ಹೀಗಾಗಿ ಸುಡುವ ಬೇಸಿಗೆಯಲ್ಲಿ ನಿಂಬೆ ಈ ಸಮಯದ ಅಗತ್ಯವಾಗಿದೆ. ಇದು ಬಿಸಿ ಮತ್ತು ಆರ್ದ್ರ ವಾತಾವರಣದಿಂದ ಪರಿಹಾರವನ್ನು ನೀಡುತ್ತದೆ ಆದರೆ ಒಳಗಿನಿಂದ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ. ಆದರೆ, ನಿಂಬೆಹಣ್ಣಿನ ಬೆಲೆ ಗಗನಕ್ಕೇರುತ್ತಿರುವಂತೆ, ನಿಂಬೆಯ ಜ್ಯೂಸ್ ಇತರ ಯಾವುದೇ ರೆಸಿಪಿಯನ್ನು ಮಾಡಿ ಸೇವಿಸುವುದು ಕಷ್ಟಕರವಾಗಿದೆ. 

Kitchen Hacks : ದುಬಾರಿ ಬೆಲೆಯ ನಿಂಬೆ ಹಣ್ಣು ಖರೀದಿ ವೇಳೆ ಇರಲಿ ಎಚ್ಚರಿಕೆ

ನಿಂಬೆಹಣ್ಣಿನ ಬೆಲೆಯೇರಿಕೆಗೆ ಕಾರಣಗಳು

ಕಡಿಮೆಯಾದ ಇಳುವರಿ, ಬೇಡಿಕೆ ಹೆಚ್ಚಿರುವ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿರುವ ಪರಿಣಾಮ ನಿಂಬೆಹಣ್ಣನ್ನು ಖರೀದಿಸಲು ಜನರು ಹಿಂಜರಿಯುವಂತಾಗಿದೆ. ಹೆಚ್ಚುತ್ತಿರುವ ಇಂಧನ ಬೆಲೆಯೇ ನಿಂಬೆ ದರ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಅದಲ್ಲದೆ ನಿಂಬೆಹಣ್ಣಿನ ಬೆಲೆಯೇರಿಕೆಗೆ ಬೇರೇನು ಕಾರಣವಾಗ್ತಿದೆ ತಿಳಿದುಕೊಳ್ಳೋಣ.

ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಪೂರೈಕೆ
ನಿಂಬೆ ಬೆಲೆಯಲ್ಲಿ ಪ್ರಮುಖ ಏರಿಕೆಯಾಗಲು ಇದು ಅತ್ಯಂತ ಮೂಲಭೂತ ಕಾರಣವಾಗಿದೆ. ನಿರೀಕ್ಷೆಗೂ ಮುನ್ನವೇ ಬೇಸಿಗೆ ಬಂದಿರುವುದರಿಂದ ನಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಆದಾಗ್ಯೂ, ದೇಶಾದ್ಯಂತ ನೈಸರ್ಗಿಕ ವಿಕೋಪಗಳು ಮತ್ತು ಗುಜರಾತ್‌ನಲ್ಲಿ ನಿಂಬೆ ಬೆಳೆಗೆ ಚಂಡಮಾರುತದ ಪರಿಣಾಮ, ಪೂರೈಕೆಯಲ್ಲಿ ಕೊರತೆಯನ್ನು ಸೃಷ್ಟಿಸಿದೆ. ಅಲ್ಲದೆ, ಕಳೆದ ವರ್ಷ ಮುಂಗಾರು ಉತ್ತಮವಾಗಿತ್ತು ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಭಾರಿ ಮಳೆ ಸುರಿದು ನಿಂಬೆ ಕೃಷಿಯ ಮೇಲೆ ಪರಿಣಾಮ ಬೀರಿತು. ಹಸ್ತ ಬಹರ್ ಮತ್ತು ಅಂಬೆ ಬಹರ್ ಎಂಬ ಎರಡು ಜನಪ್ರಿಯ ಕೊಯ್ಲುಗಳು ಕಡಿಮೆ ಪ್ರಮಾಣದಲ್ಲಿ ಫಸಲನ್ನು ಪಡೆದಿವೆ. ಹೀಗಾಗಿ ಸಹಜವಾಗಿಯೇ ನಿಂಬೆಹಣ್ಣಿನ ಬೆಲೆಯೇರಿಕೆಯಾಗಿದೆ.

ಇಂಧನ ಬೆಲೆಯಲ್ಲಿ ಏರಿಕೆ
ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಕೆಯಾಗಿದ್ದು, ಸಾರಿಗೆ ವೆಚ್ಚದ ಮೇಲೂ ಪರಿಣಾಮ ಬೀರಿದೆ. ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 105 ಮತ್ತು 96ಕ್ಕೆ ತಲುಪಿದ್ದು, ತರಕಾರಿ ಬೆಲೆಯ ಮೇಲೂ ಪರಿಣಾಮ ಬೀರಿದ್ದು, ಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ.

ನಿಂಬೆ ಬೆಲೆ ಏರಿಕೆಯಾಯ್ತು ಅಂತ ತಲೆ ಕೆಡಿಸ್ಕೋಬೇಡಿ, ಪರ್ಯಾಯವಾಗಿ ಅಡುಗೆಯಲ್ಲಿ ಇದನ್ನು ಬಳಸಿ

ಖಾಲಿ ಕೋಲ್ಡ್ ಸ್ಟೋರೇಜ್
ಸಾಮಾನ್ಯವಾಗಿ, ಅಂಬೆ ಬಹರ್ ಬರುವವರೆಗೆ, ನಿಂಬೆಹಣ್ಣುಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ದೇಶಾದ್ಯಂತ ಮಾರಾಟ ಮಾಡಲಾಗುತ್ತದೆ. ಆದರೆ, ಈ ವರ್ಷ ಮುಂದಿನ ಫಸಲು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇರುವುದರಿಂದ ಕೋಲ್ಡ್‌ಸ್ಟೋರೇಜ್‌ ಖಾಲಿಯಾಗುತ್ತಿದೆ. ಹೀಗಾಗಿ ನಿಂಬೆಯ ಬೆಲೆ ಹೆಚ್ಚಾಗಿರುವುದನ್ನು ಗಮನಿಸಬಹುದು.

ಅಪರೂಪದ 'ಬಹರ್ ವೈಫಲ್ಯ' ವರ್ಷ
ಎರಡು ಬಹರ್‌ಗಳು ಸತತವಾಗಿ ವಿಫಲವಾದ ಅಪರೂಪದ ವರ್ಷಗಳಲ್ಲಿ ಈ ವರ್ಷವು ಒಂದು ಎಂದು ವ್ಯಾಪಾರಿಗಳು ಉಲ್ಲೇಖಿಸಿದ್ದಾರೆ. ಪ್ರಸ್ತುತ, ಅಂಬೆ ಬಹರ್ ಮಾರುಕಟ್ಟೆಯಲ್ಲಿ ಸೈಕ್ಲಿಂಗ್ ಮಾಡುತ್ತಿದೆ ಆದರೆ ಇದು ನಿಂಬೆ ಬೆಲೆಗೆ ಬೇಡಿಕೆಯನ್ನು ಪೂರೈಸುವ ಪ್ರಮುಖ ಸುಗ್ಗಿಯ ಕಾಲವಾಗಿರುವುದರಿಂದ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ.

ಸದ್ಯದಲ್ಲೇ ನಿಂಬೆ ಬೆಲೆ ಕಡಿಮೆಯಾಗುತ್ತಾ ?
ಮುಂದಿನ ದಿನಗಳಲ್ಲಿ ಸಹ ನಿಂಬೆಯ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆಯಿದೆ. ಸುಗ್ಗಿಯ ಕಾಲವಾಗಲಿ ಅಥವಾ ಇಂಧನ ಬೆಲೆಗಳಾಗಲಿ ನಿಧಾನವಾಗುವುದಿಲ್ಲವಾದ್ದರಿಂದ ನಿಂಬೆ ಬೆಲೆಯಲ್ಲಿ ತಿದ್ದುಪಡಿಯು ಊಹಿಸಿದಂತೆ ತಕ್ಷಣವೇ ಆಗುವುದಿಲ್ಲ ಎನ್ನಲಾಗುತ್ತಿದೆ.

Latest Videos
Follow Us:
Download App:
  • android
  • ios