Asianet Suvarna News Asianet Suvarna News

ಕರಂಡೆ ಹಣ್ಣು ತಿಂದ್ರೆ ರಕ್ತಹೀನತೆಯ ಸಮಸ್ಯೆ ಇರಲ್ಲ

ಇವತ್ತಿನ ಕಾಲದಲ್ಲಿ ಹೆಚ್ಚಿನವರು ಮಾರುಕಟ್ಟೆಯಿಂದ ಹೆಚ್ಚು ಹಣ ಕೊಟ್ಟು ವಿದೇಶದಿಂದ ಆಮದು ಮಾಡಿಕೊಂಡ ಹಣ್ಣುಗಳನ್ನು (Fruits) ತಿನ್ನುತ್ತಾರೆ. ಆದ್ರೆ ನಿಮ್ಗೊತ್ತಾ ಗ್ರಾಮೀಣ ಭಾಗದಲ್ಲಿ ಸಿಗೋ ಅದೆಷ್ಟೋ ಹಣ್ಣುಗಳು ಆರೋಗ್ಯಕ್ಕೆ (Health) ಬಹು ಉಪಕಾರಿಯಾಗಿವೆ. ಹಲವು ಕಾಯಿಲೆ (Disease)ಗಳನ್ನು ಥಟ್ಟಂತ ಗುಣಪಡಿಸುತ್ತವೆ. ಆ ಬಗ್ಗೆ ಇಲ್ಲಿದೆ ಮಾಹಿತಿ. 

Why Karondas Should Be Added To Your Diet Vin
Author
Bengaluru, First Published Jun 25, 2022, 10:58 AM IST

ದುಡ್ಡು ಕೊಟ್ರೆ ಸಾಕು ಮಾರುಕಟ್ಟೆಯಲ್ಲಿ ಅದೆಷ್ಟೋ ಬಗೆ ಬಗೆಯ ಹಣ್ಣುಗಳು (Fruits) ಸಿಗುತ್ತವೆ. ವಿದೇಶದಿಂದ ಆಮದು ಮಾಡಿಕೊಂಡ ವೆರೈಟಿ ವೆರೈಟಿ ಹಣ್ಣುಗಳು ಲಭ್ಯವಿರುತ್ತವೆ. ಹೆಚ್ಚು ಹಣ ಕೊಟ್ಟಾದರೂ ಜನರು ಇದನ್ನು ಸವಿಯುತ್ತಾರೆ ಕೂಡಾ. ಆದ್ರೆ ಇದರಲ್ಲಿ ಹೆಚ್ಚಿನ ಹಣ್ಣುಗಳು ಕೀಟನಾಶಕಗಳನ್ನು ಸಿಂಪಡಿಸಿ ಬೆಳೆದವು ಅಗಿದ್ದು, ಆರೋಗ್ಯ (Health)ಕ್ಕೆ ಉಪಯೋಗ ಮಾಡೋದಕ್ಕಿಂತ ಹಾನಿಯೇ ಮಾಡುವ ಸಾಧ್ಯತೆ ಹೆಚ್ಚು. ಆದ್ರೆ ಮಾರುಕಟ್ಟೆಯಲ್ಲಿ ಸಿಗೋ ಇಂಥಾ ಕಾಸ್ಟ್ಲೀ ಹಣ್ಣನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ಸಿಗೋ ಟೇಸ್ಟೀ ಹಣ್ಣನ್ನು ತಿಂದು ನೋಡಿ. ಬಾಯಿಗೂ ರುಚಿ. ಆರೋಗ್ಯಕ್ಕೂ ಬೆಸ್ಟ್‌. 

ಹಳ್ಳಿಗಳಲ್ಲಿ ನೇರಳೆ, ಪೇರಳೆ, ಹಲಸು, ಕರಂಡೆ ಮೊದಲಾದ ಹಣ್ಣುಗಳು ಸಿಗುತ್ತವೆ. ಇದನ್ನು ಹಲವು ರೀತಿಯಲ್ಲಿ ಅಡುಗೆಗೂ ಬಳಸಲು ಸಾಧ್ಯವಾಗುತ್ತದೆ. ಅದರಲ್ಲೂ ಕರಂಡೆ (Karondas) ಹಣ್ಣು ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಅದ್ಯಾವುದು ತಿಳ್ಕೊಳ್ಳೋಣ.

Health Tips: ರಾತ್ರಿ ಮಲಗೋ ಮುನ್ನ ಹಣ್ಣು ತಿನ್ನಬಾರ್ದಾ?

ಕರಂಡೆ ಹಣ್ಣುಗಳು ನೋಡಲು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತವೆ. ಈ ಹಣ್ಣಿನ ರುಚಿ ಸಾಮಾನ್ಯವಾಗಿ ಹುಳಿಯಾಗಿರುತ್ತದೆ. ಕರಂಡೆ ಹಣ್ಣುವನ್ನು ಕಚ್ಚಾ ರೂಪದಲ್ಲಿ ಸೇವಿಸಬಹುದು ಅಥವಾ ವಿವಿಧ ಖಾದ್ಯಗಳನ್ನು ತಯಾರಿಸಲು ಬಳಸಿಕೊಳ್ಳಬಹುದು. ಕರಂಡೆ ಹಣ್ಣು ಒಂದು ರೀತಿಯ ಬೆರ್ರಿ ಹಣ್ಣಾಗಿದ್ದು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕರಂಡೆ ಹಣ್ಣಿನಲ್ಲಿ ಪೌಷ್ಟಿಕಾಂಶದ ಸಾಂದ್ರತೆಯು ತುಂಬಾ ಹೆಚ್ಚಾಗಿದೆ. ಇದು ವಿಟಮಿನ್ ಸಿ, ಕೆಲವು ಜೀವಸತ್ವಗಳು ಮತ್ತು ಕಬ್ಬಿಣದ ಅಂಶವನ್ನು ಹೊಂದಿದೆ.ವಿಟಮಿನ್ ಸಿ ಇರುವ ಈ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಚರ್ಮ ಮತ್ತು ಕೂದಲನ್ನೂ ಉತ್ತಮವಾಗಿ ಇದು ಇಡುತ್ತದೆ.

 
 
 
 
 
 
 
 
 
 
 
 
 
 
 

A post shared by Lovneet Batra (@lovneetb)

ಕರಂಡೆ ಹಣ್ಣಿನ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಗೆ ಬೆಸ್ಟ್: ಕರಂಡೆ ಹಣ್ಣಿನ ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಯಾಕೆಂದರೆ ಕರಂಡೆ ಹಣ್ಣುಗಳು ಪೆಕ್ಟಿನ್ ಅನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಸುಗಮಗೊಳಿಸುವೂದರಿಂದ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ,ಒತ್ತಡವನ್ನು ನಿವಾರಿಸಲು ಮತ್ತು ಆರೋಗ್ಯಕ್ಕೆ ಹೆಚ್ಚಳವಾದ ಲಾಭವನ್ನು ತಂದುಕೊಡುತ್ತದೆ. ಸರಳವಾಗಿ ಹೇಳುವುದಾದರೆ ಇದನ್ನು ಯಾವುದೇ ರೂಪದಲ್ಲಾದರೂ ನಿಮ್ಮ ಆಹಾರ ಕ್ರಮಕ್ಕೆ ನೀವು ಸೇರ್ಪಡೆ ಮಾಡಿಕೊಳ್ಳಬಹುದು.

Women Health: ಮಹಿಳೆಯರು ಪಪ್ಪಾಯ ಕಾಯಿ ತಿಂದ್ನೋಡಿ

ಉರಿಯೂತಕ್ಕೆ ರಾಮಬಾಣ: ಈ ಹಣ್ಣು ಅಸಂಖ್ಯಾತ ಉರಿಯೂತದ ಗುಣಲಕ್ಷಣಗಳಿಂದ ಕೂಡಿದೆ, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೀರ್ಘಕಾಲದ ಸೋಂಕುಗಳು ಅಥವಾ ಗಾಯದಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತ ಹೀನತೆಯ ಸಮಸ್ಯೆ ಇರಲ್ಲ: ಈ ಹಣ್ಣನ್ನು ಸೇವಿಸುವುದರಿಂದ ರಕ್ತ ಹೀನತೆಯ ಸಮಸ್ಯೆ ಇರುವವರು ಉತ್ತಮ ರಕ್ತದ ಹರಿವನ್ನು ಹೊಂದುತ್ತಾರೆ. ರಕ್ತಹೀನತೆಯ ಸಮಸ್ಯೆಯಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಈ ಹಣ್ಣನ್ನು ಸೇವಿಸುವುದರಿಂದ ನಿಮ್ಮ ರಕ್ತದ ಪ್ರಮಾಣ ಜಾಸ್ತಿಯಾಗುತ್ತದೆ.

ಮಾನಸಿಕ ಆರೋಗ್ಯಕ್ಕೆ ಒಳ್ಳೇದು: ಕರಂಡೆ ಹಣ್ಣಿನ ನಿಯಮಿತ ಸೇವನೆಯು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ. ವಿಟಮಿನ್‌ಗಳು ಮತ್ತು ಟ್ರಿಪ್ಟೊಫಾನ್ ಜೊತೆಗೆ ಮೆಗ್ನೀಸಿಯಮ್ ಇರುವಿಕೆಯು ನರಪ್ರೇಕ್ಷಕ-ಸೆರೊಟೋನಿನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಒಟ್ಟಾರೆ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ಕೆಲಸ ಮಾಡುತ್ತದೆ.

ಇದನ್ನು ನಿಮ್ಮ ಆಹಾರಕ್ರಮದಲ್ಲಿ ಕಚ್ಚಾವಾಗಿ ಸೇವಿಸಲು ಇಷ್ಟವಾಗದಿದ್ದರೆ, ಇದನ್ನು ಭಕ್ಷ್ಯವಾಗಿ ತಯಾರಿಸುವ ಮೂಲಕ ನೀವು ಸೇವೀಸಬಹುದು. ಉಪ್ಪಿನಕಾಯಿ, ಜಾಮ್ ಅಥವಾ ಚಟ್ನಿಯನ್ನು ತಯಾರಿಸಿ ಸೇವಿಸಬಹುದು. ಆದರೆ ಇದರಲ್ಲಿ ಬರುವ ಬಿಳಿ ದ್ರವವನ್ನು ಹಿಂಡುವ ಮೂಲಕ ತೆಗೆಯಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ.

Follow Us:
Download App:
  • android
  • ios