Healthy Food : ಸರ್ವ ರೋಗಕ್ಕೆ ಮದ್ದು ಈ ಗೋಧಿ ಹುಲ್ಲಿನ ಜ್ಯೂಸ್
ಗೋಧಿ ಎಲ್ಲರಿಗೂ ಗೊತ್ತು. ಆದ್ರೆ ಗೋಧಿ ಹುಲ್ಲನ್ನು ಶೋಗಾಗಿ ಬೆಳೆಸೋದನ್ನು ಮಾತ್ರ ಬಹುತೇಕರು ನೋಡಿರ್ತಾರೆ. ಈ ಗೋಧಿ ಹುಲ್ಲನ್ನು ಸೇವನೆ ಮಾಡಿದ್ರೆ ಆಗುವ ಲಾಭ ತಿಳಿದಿಲ್ಲ. ಗೋಧಿ ಹುಲ್ಲಿನ ಜ್ಯೂಸ್ ಸೇವನೆಯಿಂದ ಆಗುವ ಲಾಭದ ಬಗ್ಗೆ ನಾವಿಂದು ಹೇಳ್ತೇವೆ.
ಗೋಧಿಯನ್ನು ನಾವು ರೊಟ್ಟಿ, ಚಪಾತಿ, ಪುರಿ ಮುಂತಾದ ಆಹಾರ ತಯಾರಿಸಲು ಬಳಸ್ತೇವೆ. ಶುಗರ್ ಸಮಸ್ಯೆ ಇರುವವರು, ತೂಕ ಇಳಿಸಿಕೊಳ್ಳಲು ಡಯಟ್ ಮೊರೆಹೋಗುವವರೆಲ್ಲ ಗೋಧಿಯ ಬಳಕೆಯನ್ನು ಹೆಚ್ಚಾಗಿ ಮಾಡ್ತಾರೆ. ಆದರೆ ಗೋಧಿ ಹುಲ್ಲಿನ ಬಳಕೆ ಇನ್ನೂ ಹಲವರಿಗೆ ತಿಳಿದಿಲ್ಲ.
ಅಪಾರ ಪ್ರಮಾಣದ ಕ್ಲೋರೋಫಿಲ್ ಮತ್ತು ಬಿ ಕಾಂಪ್ಲೆಕ್ಸ್ (B complex) ಗಳಿಂದ ಸಮೃದ್ಧವಾದ ಗೋಧಿ ಹುಲ್ಲು ಹಸಿರು ರಕ್ತ ಎಂದೇ ಹೆಸರುವಾಸಿಯಾಗಿದೆ. ಈಗಿನ ಕಲುಷಿತ ವಾತಾವರಣದಲ್ಲಿ ಎಲ್ಲರೂ ಆರೋಗ್ಯವಂತ (Healthy) ಶರೀರವನ್ನು ಬಯಸುತ್ತಿದ್ದಾರೆ. ಒಬ್ಬ ವ್ಯಕ್ತಿ ಆರೋಗ್ಯಕರ ಜೀವನ ನಡೆಸಬೇಕೆಂದರೆ ಆತ ತನ್ನ ಜೀವನಶೈಲಿಯಲ್ಲಿ ನೈಸರ್ಗಿಕ ಹಣ್ಣು, ತರಕಾರಿ (Vegetable) ಮತ್ತು ಗಿಡಮೂಲಿಕೆಗಳನ್ನು ಅಳವಡಿಸಿಕೊಳ್ಳಲೇಬೇಕು. ಈ ಗೋಧಿ ಹುಲ್ಲು ಕೂಡ ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಇತ್ತೀಚಿಗೆ ಇದರ ಪೌಡರ್ ಮತ್ತು ಕ್ಯಾಪ್ಸೂಲ್ ಸಹ ಲಭ್ಯವಿದೆ. ಇಷ್ಟೊಂದು ಹೆಸರುವಾಸಿಯಾದ ಈ ಗೋಧಿ ಹುಲ್ಲು, ಹುಲ್ಲಿನ ಜ್ಯೂಸ್ ನಿಂದ ಏನೆಲ್ಲ ಲಾಭವಿದೆ ನೋಡೋಣ.
Health Tips : ಸಾತ್ವಿಕ ಭೋಜನ ಆರೋಗ್ಯದ ಮೇಲೆ ಮಾಡುತ್ತೆ ಮ್ಯಾಜಿಕ್!
ಗೋಧಿ ಹುಲ್ಲಿನ ಜ್ಯೂಸ್ ನ ಲಾಭಗಳು :
ಪೋಷಕ ಸತ್ವಗಳ ಆಗರ : ಗೋಧಿ ಹುಲ್ಲಿನ ಜ್ಯೂಸ್ ಶರೀರಕ್ಕೆ ಅಗತ್ಯವಿರುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದರಿಂದಲೇ ಇದು ಫ್ರೀ ರೆಡಿಕಲ್ಸ್ ಮತ್ತು ಆಕ್ಸಿಡೇಟಿವ್ ಸ್ಟ್ರೆಸ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ ಮತ್ತು ರೋಗಗಳ ವಿರುದ್ಧವೂ ಇದು ನಮ್ಮನ್ನು ರಕ್ಷಿಸುತ್ತದೆ. ವೀಟ್ ಗ್ರಾಸ್ ಅನೇಕ ಜೀವಸತ್ವಗಳು ಮತ್ತು ಖನಿಜಗಳ ಮೂಲವೆಂದು ಹೇಳಲಾಗುತ್ತದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಇ ಜೊತೆ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ.
ಸೋಂಕಿನಿಂದ ನಮ್ಮನ್ನು ದೂರವಿಡುತ್ತೆ : ಎಂಟಿ ಬ್ಯಾಕ್ಟೀರಿಯಾ ಗುಣಗಳು ಮತ್ತು ಕ್ಲೋರೋಫಿಲ್ ಹೊಂದಿರುವ ಗೋಧಿ ಹುಲ್ಲನ್ನು ನಮ್ಮ ಚರ್ಮಗಳಿಗೆ ಲೇಪಿಸಿಕೊಂಡರೆ ಅದು ಸಾಂಕ್ರಾಮಿಕವಾಗಿ ಆವರಿಸುವ ರೋಗಗಳನ್ನು ತಡೆಗಟ್ಟುತ್ತದೆ. ಗೋಧಿ ಹುಲ್ಲಿನ ರಸವನ್ನು ಚರ್ಮಕ್ಕೆ ಹಚ್ಚುವುದರಿಂದ ಉರಿ ಮತ್ತು ಹುಣ್ಣುಗಳನ್ನು ಕೂಡ ನಿವಾರಿಸುತ್ತದೆ. ಪ್ರತಿನಿತ್ಯ ಗೋಧಿ ಹುಲ್ಲಿನ ಜ್ಯೂಸ್ ಕುಡಿಯುವುದರಿಂದ ಎಂಟಿಬಯೋಟಿಕ್ ನಿರೋಧಕ ಸೋಂಕುಗಳ ಚಿಕಿತ್ಸೆಗೆ ಉಪಯುಕ್ತವಾಗುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ.
ಫ್ರಿಡ್ಜ್‌ನಲ್ಲಿಟ್ಟ ಚಪಾತಿ ಹಿಟ್ಟು ಕಪ್ಪಾಗ್ತಿದ್ಯಾ? ಈ ರೀತಿ ಸ್ಟೋರ್ ಮಾಡಿದ್ರೆ ತುಂಬಾ ದಿನ ಫ್ರೆಶ್ ಆಗಿರುತ್ತೆ
ಕೊಲೆಸ್ಟ್ರಾಲ್ ಕಡಿಮೆಮಾಡುತ್ತೆ : ಶರೀರಕ್ಕೆ ಹೃದಯದ ಆರೋಗ್ಯ ಬಹಳ ಮುಖ್ಯ. ವೀಟ್ ಗ್ರಾಸ್ ಜ್ಯೂಸ್ ಕುಡಿಯೋದ್ರಿಂದ ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾದಾಗ ಹೃದಯಕ್ಕೆ ಸಂಬಂಧಿಸಿದ ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಮುಂತಾದ ಅಪಾಯಗಳು ಕೂಡ ಕಡಿಮೆಯಾಗುತ್ತವೆ.
ತೂಕ ಇಳಿಸಲು ಸಹಾಯಕಾರಿ : ಗೋಧಿ ಹುಲ್ಲಿನ ಜ್ಯೂಸ್ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರಿಂದ ತೂಕ ನಷ್ಟವಾಗುತ್ತೆ. ಗಿಡಗಳಲ್ಲಿರುವ ಥೈಲಾಕೋಯ್ಡ್ ಗೋಧಿ ಹುಲ್ಲಿನಲ್ಲಿರುತ್ತದೆ. ಇವುಗಳಲ್ಲಿ ಕ್ಲೋರೊಫಿಲ್ ಕಂಡುಬರುತ್ತದೆ ಮತ್ತು ನಾರಿನ ಅಂಶ ಹೇರಳವಾಗಿರುವುದರಿಂದ ಹೊಟ್ಟೆ ಹಸಿವು ಕಡಿಮೆಯಾಗಿ ದೇಹದ ತೂಕ ಇಳಿಸಲು ಸಹಾಯಕಾರಿಯಾಗಿದೆ.
ಗೋಧಿಯ ಮಾತ್ರೆ ಮತ್ತು ಪುಡಿ : ದೇಹದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕ್ಯಾನ್ಸರ್ ಅನ್ನು ನಿಗ್ರಹಿಸುವ ಶಕ್ತಿ ಗೋಧಿ ಹುಲ್ಲಿಗಿದೆ. ಹಾಗಾಗಿಯೇ ಇದನ್ನು ಮಾತ್ರೆ ಮತ್ತು ಪುಡಿಗಳ ರೂಪದಲ್ಲಿ ಕೂಡ ಸೇವನೆಮಾಡಲಾಗುತ್ತಿದೆ.
ಉದರ ಸಂಬಂಧಿ ಸಮಸ್ಯೆಗಳು ದೂರ : ನಿಯಮಿತವಾಗಿ ಗೋಧಿ ಜ್ಯೂಸ್ ಕುಡಿಯುವುದರಿಂದ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಟ್ ಗ್ರಾಸ್ ಜ್ಯೂಸ್ ಕುಡಿಯೋದ್ರಿಂದ ಅಜೀರ್ಣ, ಮಲಬದ್ಧತೆ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತೆ. ಗೋಧಿಯ ಜ್ಯೂಸ್ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ಕರುಳಿನ ಆರೋಗ್ಯವನ್ನು ಕಾಪಾಡುತ್ತೆ.
ನೆನಪಿನ ಶಕ್ತಿಗೆ ಗೋಧಿ ಜ್ಯೂಸ್ : ಮರೆವಿನ ಸಮಸ್ಯೆ ಇರುವವರು ಮತ್ತು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗೋಧಿ ಹುಲ್ಲಿನ ಜ್ಯೂಸ್ ಒಳ್ಳೆಯದು. ಇದು ನಮ್ಮ ಮೆದುಳು ಮತ್ತು ನರಗಳಿಗೆ ರಕ್ಷಣೆ ಒದಗಿಸುತ್ತೆ. ಮಕ್ಕಳಿಗೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಜ್ಯೂಸ್ ಕುಡಿಸಬೇಕು.