ಆನಲೈನ್‌ ಫುಡ್‌ ಆರ್ಡರ್ ಮಾಡುವ ಮುನ್ನ ಇದು ತಿಳಿದಿರಿ

ಹಸಿವಾಯ್ತು ಎಂದ ತಕ್ಷಣ ಅಡುಗೆ ಮನೆಗೆ ಹೋಗುವ ಬದಲು ಮೊಬೈಲ್ ಹಿಡಿಯುವವರ ಸಂಖ್ಯೆ ಹೆಚ್ಚಿದೆ. ಆನ್ಲೈನ್ ಅಪ್ಲಿಕೇಷನ್ ಮೂಲಕ ಫುಡ್ ಆರ್ಡರ್ ಮಾಡಿ ಆರಾಮವಾಗಿ ತಿನ್ನುವ ಜನರು ಕೆಲ ಸಂಗತಿಯನ್ನು ತಿಳಿದಿರಬೇಕು. 
 

What Points You Should Keep In Mind While Ordering Food Online

ಮನೆಯಲ್ಲಿ ಎಷ್ಟೇ ರುಚಿಯಾಗಿ ಆಹಾರ ತಯಾರಿಸಿದ್ರೂ ಹೋಟೆಲ್ ಆಹಾರ ತಿಂದಂತೆ ಆಗೋದಿಲ್ಲ. ಕೆಲವೊಂದು ಅಡುಗೆಯನ್ನು ಮನೆಯಲ್ಲಿ ಮಾಡೋಕೆ ಸಮಯ ಕೂಡ ಸಿಗೋದಿಲ್ಲ. ವಾರದ ದಿನಗಳಲ್ಲಿ ಕೆಲಸದ ಒತ್ತಡ ಎನ್ನುವ ಕಾರಣಕ್ಕೆ ವಾರಾಂತ್ಯದಲ್ಲಿ ವಿಶ್ರಾಂತಿ ಎನ್ನುವ ಕಾರಣಕ್ಕೆ ಬಹುತೇಕರು ಹೋಟೆಲ್ ತಿಂಡಿ ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀವು ಹೋಟೆಲ್ ಗೆ ಹೋಗಿ ತಿಂಡಿ ತಿನ್ನಬೇಕಾಗಿಲ್ಲ. ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ರೆ ಮನೆ ಬಾಗಿಲಿಗೆ ತಿಂಡಿ ಬರುತ್ತದೆ. ಇದೇ ಕಾರಣಕ್ಕೆ ಸ್ವಿಗ್ಗಿ ಹಾಗೂ ಜೊಮಾಟೊ ಅಪ್ಲಿಕೇಷನ್ ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. 

ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್‌ (Online) ನಲ್ಲಿ ಆಹಾರ (Food) ವನ್ನು ಆರ್ಡರ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ನೀವೂ ಆಗಾಗ್ಗೆ ಸ್ವಿಗ್ಗಿ (Swiggy) ಅಥವಾ ಜೊಮಾಟೊದಿಂದ ಆಹಾರವನ್ನು ಆರ್ಡರ್ ಮಾಡುತ್ತಿದ್ದರೆ  ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಮುನ್ನ ಕೆಲ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಆಗ ಮಾತ್ರ ಆನ್‌ಲೈನ್ ಡೆಲಿವರಿ ಸಮಯದಲ್ಲಿ ನೀವು ಯಾವುದೇ ರೀತಿಯ ಸಮಸ್ಯೆ  ಎದುರಿಸುವುದಿಲ್ಲ. 

ವಿಮರ್ಶೆ ನೋಡಿ ನಂತರ ಆರ್ಡರ್ ಮಾಡಿ : ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ ನೀವು ಹೋಟೆಲ್ ಅಥವಾ ರೆಸ್ಟೋರೆಂಟ್‌ನ ರೇಟಿಂಗ್‌ಗಳನ್ನು ಪರಿಶೀಲಿಸಬೇಕು. ಜನರು ಬರೆದ ವಿಮರ್ಶೆಗಳನ್ನು ಪರಿಶೀಲಿಸಬೇಕು. ಏಕೆಂದರೆ ಕೆಲವೊಮ್ಮೆ ಹೋಟೆಲ್ ಅಥವಾ ರೆಸ್ಟೋರೆಂಟ್ ಹೆಚ್ಚಿನ ರೇಟಿಂಗ್ ಅನ್ನು ಹೊಂದಿರುತ್ತದೆ ಆದರೆ ವಿಮರ್ಶೆಯಲ್ಲಿ ಆಹಾರದ ಗುಣಮಟ್ಟ ಚೆನ್ನಾಗಿಲ್ಲ ಎಂದು ಜನರು ಬರೆದಿರುತ್ತಾರೆ. ರುಚಿ ಹಾಗೂ ಶುಚಿ ಆಹಾರಕ್ಕೆ ಆದ್ಯತೆ ನೀಡಿ.

ಸಮಯದ ಬಗ್ಗೆ ಗಮನವಿರಲಿ : ನೀವು ಆಹಾರ ಬುಕ್ ಮಾಡುವಾಗ ನಿಮಗೆ ಆಹಾರ ಎಷ್ಟು ಸಮಯಕ್ಕೆ ತಲುಪುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ನಿಮಗೆ ಈಗ ಅಗತ್ಯವಿದ್ದು, ನೀವು ಗಂಟೆ ತೆಗೆದುಕೊಳ್ಳುವ ಹೋಟೆಲ್ ಬುಕ್ ಮಾಡಿದ್ರೆ ಸೂಕ್ತವಲ್ಲ. ಹಾಗೆಯೇ ಕೆಲ ಆಹಾರ ನಿಮ್ಮ ಕೈ ತಲುಪುವವರೆಗೆ ಹಾಳಾಗಿರುತ್ತದೆ. ಹಾಗಾಗಿ ನೀವು ಸಮಯವನ್ನು ಪರಿಶೀಲಿಸಬೇಕಾಗುತ್ತದೆ.

OMICRON BF.7, ಸೋಂಕು ತಗುಲೋ ಮುನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕಾಂಟೆಕ್ಟ್ ಲೆಸ್ ಡಿಲಿವರಿ ಆಯ್ಕೆ ಮಾಡಿ : ಈಗ ನಾನಾ ರೀತಿಯ ರೋಗಗಳು ಹರಡುತ್ತಿವೆ. ಅಂತಹ ಪರಿಸ್ಥಿತಿಯ  ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರಲು ಸಂಪರ್ಕವಿಲ್ಲದ ವಿತರಣೆಯ ಆಯ್ಕೆಯನ್ನು ನೀವು ಆರಿಸಿಕೊಳ್ಳಬೇಕು. ಕಾಂಟೆಕ್ಟ್ ಲೆಸ್ ವಿತರಣೆಯನ್ನು  ನೀವು ಆಯ್ಕೆ ಮಾಡಿದ್ದರೆ ಡಿಲಿವರಿ ಬಾಯ್  ನಿಮ್ಮ ಮನೆಯ ಹೊರಗೆ ಆಹಾರವನ್ನು ಇಟ್ಟು ಡೋರ್‌ಬೆಲ್ ಬಾರಿಸಿ ಹೋಗುತ್ತಾನೆ. ಮನೆ ಸೊಸೈಟಿ ಅಥವಾ ಅಪಾರ್ಟ್‌ಮೆಂಟ್‌ನಲ್ಲಿದ್ದರೆ,  ಆರ್ಡರ್ ಅನ್ನು ಸೊಸೈಟಿಯ ಕಾವಲುಗಾರನಿಗೆ ನೀಡುತ್ತಾರೆ. ನೀವು ಅವರಿಂದ ಕಲೆಕ್ಟ್ ಮಾಡಿಕೊಳ್ಳಬೇಕು. ಕಾಂಟೆಕ್ಟ್ ಲೆಸ್ ಆಯ್ಕೆ ಆಯ್ದುಕೊಳ್ಳುವುದಾದ್ರೆ ನಗದು ಪಾವತಿ ಬದಲು ಆನ್ಲೈನ್ ಪಾವತಿ ಆಯ್ಕೆಯನ್ನು ಆಯ್ದುಕೊಳ್ಳಿ. ಆಗ ನೀವು ಡಿಲಿವರಿ ಬಾಯ್ ಭೇಟಿಯಾಗದೆ ನಿಮ್ಮ ಆಹಾರವನ್ನು ಪಡೆಯಬಹುದು.

OMICRON BF.7, ಸೋಂಕು ತಗುಲೋ ಮುನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕವರ್ ತೆಗೆಯಲು ಮರೆಯಬೇಡಿ : ನೀವು ಆರ್ಡರ್ ಮಾಡಿದ ಆಹಾರವನ್ನು ನೀವು ಯಾವಾಗ ಬೇಕಾದ್ರೂ ಸೇವನೆ ಮಾಡಿ. ಆದ್ರೆ ಆರ್ಡರ್ ನಿಮ್ಮ ಕೈ ಸೇರುತ್ತಿದ್ದಂತೆ ಅದಕ್ಕೆ ಹಾಕಿರುವ ಕವರ್ ತೆಗೆಯಿರಿ. ಆಹಾರವನ್ನು ನಿಮ್ಮ ಮನೆಯ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಬಹುತೇಕ ಆಹಾರಗಳು ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಆಗಿ ಬರುವುದ್ರಿಂದ ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆಯಿರುತ್ತದೆ. ನೀವು ಆಹಾರವನ್ನು ಪಾತ್ರೆಗೆ ವರ್ಗಾಯಿಸಿದ ನಂತ್ರ ಅದನ್ನು ಹಾಗೆ ಸೇವನೆ ಮಾಡಬೇಡಿ. ಮತ್ತೊಮ್ಮೆ ಆಹಾರವನ್ನು ಬಿಸಿ ಮಾಡಿ ನಂತ್ರ ತಿನ್ನಿ. 

Latest Videos
Follow Us:
Download App:
  • android
  • ios